ಕೊಪ್ಪಳ : ಅಪ್ರಾಪ್ತ ವಯಸ್ಸಿನ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಕೊಪ್ಪಳ ನಗರದ ಬೇಲ್ದಾರ ಕಾಲೋನಿ ನಿವಾಸಿ ಮಾರುತಿ ಬೋಚನಹಳ್ಳಿ ಇತನ ಮೇಲಿನ ಆರೋಪ ಸಾಭಿತಾಗಿದೆ ಎಂದು ಹೆಚ್ಚುವರಿ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶರು ಮತ್ತು ಕೊಪ್ಪಳ ತ್ವರಿತ ವಿಲೇವಾರಿ (ಪೋಕ್ಸೊ) ನ್ಯಾಯಾಲಯದ ನ್ಯಾಯಾಧೀಶರು ಆರೋಪಿಗೆ ಶಿಕ್ಷೆ ವಿಧಿಸಿರುತ್ತಾರೆ.
ಈ ಪ್ರಕರಣದ ಅಪ್ರಾಪ್ತ ವಯಸ್ಸಿನ ಬಾದಿತಳು ಪರಿಶಿಷ್ಟ ಜಾತಿಗೆ ಸೇರಿದವಳಾಗಿದ್ದು ದಿ: 17-02-2024ರ 6 ತಿಂಗಳ ಹಿಂದೆ ಬಾಧಿತಳು ತಮ್ಮ ಮನೆಯಲ್ಲಿರುವಾಗ ಕುರುಬ ಜನಾಂಗಕ್ಕೆ ಸೇರಿದ ಮಾರುತಿ ಬೋಚನಹಳ್ಳಿ ಇತನು ಬಾಧಿತಳ ಮನೆಗೆ ಹೋಗಿ ಮೈ ಕೈ ಮುಟ್ಟಿದ್ದು ಅವಳು ಚಿಕವಳಿದ್ದೇನೆ ಬೇಡ ಎಂದರೂ ಕೇಳದೇ ಅವಳ ಇಚ್ಚೆಗೆ ವಿರುದ್ಧವಾಗಿ ಅತ್ಯಾಚಾರ ಮಾಡಿರುತ್ತಾನೆ. ನಂತರ ದಿ: 17-02-2024 ರಂದು ಬಾಧಿತ ಬಾಲಕಿಗೆ ಕೊಪ್ಪಳ ಬಸ್ ನಿಲ್ದಾಣದಿಂದ ಅಪಹರಣ ಮಾಡಿಕೊಂಡು ಚಿಕ್ಕಸಿಂಧೋಗಿ ಗ್ರಾಮದ ಗಾಳೆಮ್ಮ ಗುಡಿ ಮುಂದೆ ಹೋಗಿ ಬಾಧಿತಳಿಗೆ ತಾಳಿ ಕಟ್ಟಿ ಬಾಲ್ಯ ವಿವಾಹವಾಗಿ ಅಲ್ಲಿಂದ ಅಳವಂಡಿ, ಮುಂಡರಗಿ, ಗದಗ ಮತ್ತು ಪುತ್ತೂರ ಸುಳ್ಯ ಮುಂತಾದ ಕಡೆಗಳಲ್ಲಿ ಸುತ್ತಾಡಿರುವ ಆರೋಪದ ಹಿನ್ನೆಲೆಯಲ್ಲಿ ಕೊಪ್ಪಳ ಮಹಿಳಾ ಪೋಲಿಸ ಠಾಣೆಯ ರಿಜ್ವಾನ್, ನಾಗಪ್ಪ ಪಿ.ಎಸ್.ಐ ಇವರು ಬಾಧಿತಳ ತಾಯಿ ನೀಡಿದ ದೂರನ್ನು ಸ್ವೀಕರಿಸಿ ಪ್ರಥಮ ಹಂತದ ತನಿಖೆಯನ್ನು ನಿರ್ವಹಿಸಿ, ಮುಂದಿನ ತನಿಖೆಯನ್ನು ಆಂಜಿನೇಯ ಡಿ.ಎಸ್, ಪಿಐ ಕೊಪ್ಪಳ ಮಹಿಳಾ ಪೋ.ಠಾಣೆ ಇವರು ನಿರ್ವಹಿಸಿದ್ದು, ಮುಂದುವರೆದ ತನಿಖೆಯನ್ನು ಎಸ್.ಆರ್. ಪಾಟೀಲ ಹಾಗೂ ಮುತ್ತಣ್ಣ ಸಾವರಗೋಳ ಡಿಎಸ್ಪಿ ಕೊಪ್ಪಳ ಇವರು ಅಂತಿಮ ತನಿಖೆಯನ್ನು ನಿರ್ವಹಿಸಿದ್ದು, ಈ ತನಿಖೆಯಲ್ಲಿ ಆರೋಪಿತನ ಮೇಲಿನ ಆರೋಪಣೆಗಳು ಮೇಲ್ನೋಟಕ್ಕೆ ಕಂಡು ಬಂದಿದ್ದರಿಂದ ಆರೋಪಿತನ ವಿರುದ್ಧ ಮಾನ್ಯ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ಶಿವಕುಮಾರ ಹೆಚ್ಸಿ ಇವರು ತನಿಖಾ ಸಹಾಯಕ ಕರ್ತವ್ಯ ನಿರ್ವಹಿಸಿರುತ್ತಾರೆ.
ಈ ಪ್ರಕರಣವು ಸ್ಪೇ.ಎಸ್ಸಿ(ಪೋಕ್ಸೊ) ಸಂ: 25/2024 ರಲ್ಲಿ ದಾಖಲಾಗಿದ್ದು, ವಿಚಾರಣೆಯನ್ನು ನಡೆಸಿದ ಮಾನ್ಯ ನ್ಯಾಯಾಲಯವು ಆರೋಪಿತನ ಮೇಲಿನ ಆರೋಪಣೆಗಳು ಸಾಭೀತಾಗಿವೆ ಎಂದು 20 ವರ್ಷಗಳ ಕಠಿಣ ಜೈಲು ಶಿಕ್ಷೆ ಹಾಗೂ ರೂ. 70,000 ಗಳ ದಂಡವನ್ನು ಭರಿಸುವಂತೆ ಆದೇಶಿಸಿ ಹೆಚ್ಚುವರಿ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶರು ಮತ್ತು ಕೊಪ್ಪಳ ತ್ವರಿತ ವಿಲೇವಾರಿ (ಪೋಕ್ಸೊ) ನ್ಯಾಯಾಲಯದ ನ್ಯಾಯಾಧೀಶರಾದ ಕುಮಾರ ಡಿ.ಕೆ. ಅವರು 2026ರ ಜನವರಿ 24 ರಂದು ತೀರ್ಪು ಹೊರಡಿಸಿರುತ್ತಾರೆ. ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕರಾದ ಗೌರಮ್ಮ ದೇಸಾಯಿ ಅವರು ಈ ಪ್ರಕರಣ ನಡೆಸಿ ವಾದ ಮಂಡಿಸಿದ್ದರು. ಕೊಪ್ಪಳ ಮಹಿಳಾ ಪೋಲಿಸ ಠಾಣೆಯ ಸಿಬ್ಬಂದಿ ಪ್ರಕಾಶ ಮತ್ತು ರಿಜ್ವಾನ್ ಡಬ್ಲ್ಯೂಎಚ್ಸಿ ಇವರು ಸಾಕ್ಷಿದಾರರನ್ನು ನ್ಯಾಯಾಲಯಕ್ಕೆ ಹಾಜರಪಡಿಸುವಲ್ಲಿ ಸಾಕಷ್ಟು ಸಹಕರಿಸಿರುತ್ತಾರೆ ಎಂದು ಹೆಚ್ಚುವರಿ ಜಿಲ್ಲಾ ಹಾಗೂ ಸತ್ರ ನ್ಯಾಯಾಲಯದ (ಪೋಕ್ಸೊ) ವಿಶೇಷ ಸರ್ಕಾರಿ ಅಭಿಯೋಜಕರ ಕಛೇರಿಯ ಪ್ರಕಟಣೆ ತಿಳಿಸಿದೆ.








