ಅಂಧೇರಿ (ಮಹಾರಾಷ್ಟ್ರ): ಮುಂಬೈನ ಅಂಧೇರಿಯ ಗಿಲ್ಬರ್ಟ್ ಪ್ರದೇಶದಿಂದ ಸುಮಾರು ಒಂಬತ್ತು ವರ್ಷಗಳ ಹಿಂದೆ ನಾಪತ್ತೆಯಾಗಿದ್ದ ಬಾಲಕಿಯೊಬ್ಬಳು ಶುಕ್ರವಾರ ಮುಂಬೈನಲ್ಲಿ ತನ್ನ ಕುಟುಂಬದೊಂದಿಗೆ ಮತ್ತೆ ಒಂದಾಗಿದ್ದಾಳೆ.
ಸುಮಾರು 9 ವರ್ಷಗಳ ಹಿಂದೆ ಅಂದ್ರೆ, 2013ರ ಜನವರಿ 22ರಂದು ಬಾಲಕಿ ಪೂಜಾ ಗೌಡ್ ಶಾಲೆಗೆ ಹೋಗುತ್ತಿದ್ದಾಗ ಮುಂಬೈ ಮೂಲದ ದಂಪತಿ ದಂಪತಿಗಳಾದ ಹ್ಯಾರಿ ಡಿಸೋಜಾ ಮತ್ತು ಅವರ ಪತ್ನಿ ಸೋನಿ ಪೂಜಾಳನ್ನು ಅಪಹರಿಸಿದ್ದರು. ಇದೀಗ ಆರೋಪಿಗಳ ವಿರುದ್ಧ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.
ನಂತರ ಪೂಜಾ ಕಾಣೆಯಾದ ಬಗ್ಗೆ ಕುಟುಂಬದವರು ಪೊಲೀಸರಿಗೆ ದೂರು ನೀಡಿದ್ದರು. ಅಂದಿನಿಂದ ಆಕೆಗಾಗಿ ತೀವ್ರ ಹುಡುಕಾಟ ನಡೆಸಿದ್ದರು. ಇದೀಗ ಕೊನೆಗೂ ಪೂಜಾ ತನ್ನ ಮನೆ ಸೇರಿದ್ದಾಳೆ.
ಆರೋಪಿ ದಂಪತಿಗಳು ಮಕ್ಕಳಿಲ್ಲದ ಕಾರಣ ಪೂಜಾಳನ್ನು ಅಪಹರಿಸಿದ್ದರು. ನಂತ್ರ, ಆಕೆಯನ್ನು ಅವಳನ್ನು ಗೋವಾಕ್ಕೆ ಕರೆದೊಯ್ದು ಬೋರ್ಡಿಂಗ್ ಶಾಲೆಗೆ ಸೇರಿಸಿದ್ದರು. ಸ್ವಲ್ಪ ಸಮಯದ ನಂತರ ಅವರು ಮತ್ತೆ ಮುಂಬೈಗೆ ಬಂದಾಗ ಪೂಜ ತನ್ನ ಮನೆ ಸೇರಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
BIGG NEWS : ರಾಷ್ಟ್ರಧ್ವಜದ ವಿಚಾರವಾಗಿ ಕಾಂಗ್ರೆಸ್ ರಾಜಕೀಯ ಮಾಡುತ್ತಿದೆ : ಮಾಜಿ ಸಿಎಂ ಜಗದೀಶ್ ಶೆಟ್ಟರ್
ಪ್ರಧಾನಿ ಮೋದಿ ಅಧ್ಯಕ್ಷತೆಯಲ್ಲಿ ʻನೀತಿ ಆಯೋಗದ 7ನೇ ಆಡಳಿತ ಮಂಡಳಿ ಸಭೆʼ ಆರಂಭ… ತೆಲಂಗಾಣ ಸಿಎಂ ಕೆಸಿಆರ್ ಗೈರು
BIGG NEWS : ಬಳ್ಳಾರಿಯಲ್ಲಿ ಕಲುಷಿತ ನೀರು ಸೇವನೆಯಿಂದ 80 ಕ್ಕೂ ಹೆಚ್ಚು ಮಂದಿ ಅಸ್ವಸ್ಥ : ಆಸ್ಪತ್ರೆಗೆ ದಾಖಲು