ತುಮಕೂರು : ಹಾಡಹಗಲೇ ಖದೀಮರು ಮಕ್ಕಳ ಅಪಹರಣಕ್ಕೆ ಯತ್ನ ನಡೆಸಿದ ಘಟನೆ ತುಮಕೂರು ಜಿಲ್ಲೆಯ ಗೊಲ್ಲರಹಟ್ಟಿಯಲ್ಲಿ ನಡೆದಿದೆ.
ಮೂವರು ಶಾಲಾ ಮಕ್ಕಳನ್ನು ಕಾರಿನಲ್ಲಿ ಅಪಹರಣ ಮಾಡಲು ಯತ್ನಿಸಿದ್ದು, ಸಾರ್ವಜನಿಕರ ಸಮಯ ಪ್ರಜ್ಞೆಯಿಂದ ಮೂವರು ಮಕ್ಕಳು ಬಚಾವ್ ಆಗಿದ್ದಾರೆ.
ರಶ್ಮೀಕಾ, ಲೋಹಿತ್, ಹರ್ಷಿಕಾ ಎಂಬ ಶಾಲಾ ವಿದ್ಯಾರ್ಥಿಗಳು ದಾರಿಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಕಾರಿನಲ್ಲಿ ಬಂದ ಖದೀಮರು ಮಕ್ಕಳನ್ನು ಹತ್ತಿಸಿಕೊಳ್ಳಲು ಯತ್ನಿಸಿದ್ದಾರೆ. ಮಕ್ಕಳ ಕೂಗಾಟ ಕಂಡ ಸಾರ್ವಜನಿಕರು ಸ್ಥಳಕ್ಕೆ ಬಂದು ಮಕ್ಕಳನ್ನು ರಕ್ಷಿಸಿದ್ದಾರೆ. ಘಟನೆಯಲ್ಲಿ ಮೂವರು ಮಕ್ಕಳಿಗೆ ಸಣ್ಣಪುಟ್ಟ ಗಾಯಗಳಾಗಿದೆ. ಅಲ್ಲದೇ ಮೊದಲೇ ಕಾರಿನಲ್ಲಿ ಮೂವರು ಮಕ್ಕಳಿದ್ದರು ಎಂಬ ವಿಚಾರ ಗೊತ್ತಾಗಿದ್ದು, ಖದೀಮರ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ. ‘ಹುಳಿಯಾರು ಪೊಲೀಸರಿಂದ ಶೋಧ ಕಾರ್ಯ ಆರಂಭವಾಗಿದೆ. ಹೆಚ್ಚಿನ ಮಾಹಿತಿ ಶೀಘ್ರದಲ್ಲೇ ಅಪ್ ಡೇಟ್ ಆಗಲಿದೆ.
ಪ್ರಯಾಣಿಕರೇ ಗಮನಿಸಿ : ನಾಳೆ ಬೆಂಗಳೂರು-ಹುಬ್ಬಳ್ಳಿ ರೈಲು ಸಂಚಾರದಲ್ಲಿ ವ್ಯತ್ಯಯ
ಈದ್ಗಾ ಮೈದಾನದಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ ವಿಚಾರ: ಕಾನೂನು ತಜ್ಞರ ಮೊರೆ ಹೋಗ ರಾಜ್ಯ ಸರ್ಕಾರ