Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಮುಸಲ್ಮಾನ್ ಬಂಧುಗಳಿಗೆ ಕಾಂಗ್ರೆಸ್ ಎಲ್ಲೆಡೆ ಕೋಕ್ ಕೊಡುತ್ತಾ ಬಂದಿದೆ: ಛಲವಾದಿ ನಾರಾಯಣಸ್ವಾಮಿ

21/03/2026 7:24 PM

ಅತಿ-ಸಂಸ್ಕರಿಸಿದ ಆಹಾರ ತಿನ್ನುವುದ್ರಿಂದ ‘ಪಾರ್ಶ್ವವಾಯು’ ಅಪಾಯವು ಶೇ.67ರಷ್ಟು ಹೆಚ್ಚಾಗುತ್ತದೆ ; ಹೊಸ ಅಧ್ಯಯನ

21/03/2026 7:16 PM

ಸಾಗರ ಶ್ರೀ ಮಹಾಗಣಪತಿ ಜಾತ್ರಾ ಮಹೋತ್ಸವ: ದೇವಸ್ಥಾನ ಸಮಿತಿಯಿಂದ ಶಾಸಕ ಗೋಪಾಲಕೃಷ್ಣ ಬೇಳೂರು ಆಹ್ವಾನ

21/03/2026 7:06 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ‘ಕೆಐಎಡಿಬಿ’ ಹಗರಣ : ‘ED’ ತನಿಖಾ ಪ್ರಕ್ರಿಯೆ ಹಿನ್ನೆಲೆ ಎಚ್ಚತ್ತುಕೊಂಡ ಸಿದ್ದು ಸರ್ಕಾರ : ತನಿಖೆಗೆ ನಿರ್ದೇಶನ
KARNATAKA

‘ಕೆಐಎಡಿಬಿ’ ಹಗರಣ : ‘ED’ ತನಿಖಾ ಪ್ರಕ್ರಿಯೆ ಹಿನ್ನೆಲೆ ಎಚ್ಚತ್ತುಕೊಂಡ ಸಿದ್ದು ಸರ್ಕಾರ : ತನಿಖೆಗೆ ನಿರ್ದೇಶನ

By kannadanewsnow0519/11/2024 10:23 AM

ಬೆಂಗಳೂರು: ರಾಜ್ಯದ ಆಡಳಿತ ವರ್ಗದಲ್ಲಿ ಸಂಚಲನ ಸೃಷ್ಟಿಸಿರುವ ಕೆಐಎಡಿಬಿ ಹಗರಣ ಆರೋಪ ಕುರಿತಂತೆ ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ತನಿಖಾ ಪ್ರಕ್ರಿಯೆಯನ್ನು ಆರಂಭಿಸಿದೆ. ಕೆಐಎಡಿಬಿ ಭೂಸ್ವಾಧೀನ ಪ್ರಕ್ರಿಯೆ ಹಾಗೂ ಭೂ ಪರಿಹಾರ ವಿತರಣೆ ಕುರಿತಂತೆ ‘ಸಿಟಿಜನ್ ರೈಟ್ಸ್ ಫೌಂಡೇಷನ್’ ಸಲ್ಲಿಸಿರುವ ದೂರಿನ ಹಿನ್ನೆಲೆಯಲ್ಲಿ ಸೂಕ್ತ ಕ್ರಮ ಕೈಗೊಳ್ಳುವಂತೆ ಕೆಐಎಡಿಬಿ ಕಾರ್ಯನಿರ್ವಹಣಾಧಿಕಾರಿಗಳಿಗೆ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ನಿರ್ದೇಶನ ನೀಡಿದ್ದಾರೆ.

ಏನಿದು ಆರೋಪ?

ದೇವನಹಳ್ಳಿ ಸುತ್ತಮುತ್ತ ಕೆಐಎಡಿಬಿ ಭೂಸ್ವಾಧೀನ ಪ್ರಕ್ರಿಯೆ ಹಾಗೂ ಪರಿಹಾರ ಹಣ ವಿತರಣೆಯಲ್ಲಿ ಅವ್ಯವಹಾರ ನಡೆದಿದೆ ಎಂದು ಆರೋಪಿಸಿ ‘ಸಿಟಿಜನ್ ರೈಟ್ಸ್ ಫೌಂಡೇಷನ್ ಅಧ್ಯಕ್ಷ ಕೆ.ಎ.ಪಾಲ್ ಅವರು, ಮುಖ್ಯಮಂತ್ರಿ, ಕೈಗಾರಿಕಾ ಸಚಿವರಿಗೆ ದೂರು ನೀಡಿದ್ದರು. ಕೆಐಎಡಿಬಿ ಭೂಸ್ವಾಧೀನಾಧಿಕಾರಿಯಾಗಿರುವ ಕೆಎಎಸ್ ಅಧಿಕಾರಿ ಬಾಳಪ್ಪ ಹಂದಿಗುಂದ ಅವರ ವಿರುದ್ದ ಗುರುತರ ಆರೋಪ ಮಾಡಿ ಈ ದೂರು ಸಲ್ಲಿಕೆಯಾಗಿದೆ.

ಸರ್ಕಾರಿ ಜಮೀನನ್ನು ಖಾಸಗಿ ವ್ಯಕ್ತಿಗಳ ಒಡೆತನದ ಭೂಮಿ ಎಂದು ಪರಿಗಣಿಸಿ ಅಕ್ರಮವಾಗಿ ಪರಿಹಾರದ ಹಣ ಪಾವತಿಸಲಾಗಿದೆ ಎಂದು, ನಿವೇಶನ ಹಂಚಿಕೆಯಲ್ಲೂ ಅಕ್ರಮ ನಡೆದಿದೆ ಎಂದೂ, ಒಂದೇ ಜಮೀನಿಗೆ ಎರಡು ಬಾರಿ ಪರಿಹಾರವನ್ನು ಅಕ್ರಮವಾಗಿ ಪಾವತಿಸಲಾಗಿದೆ ಎಂದೂ ಸಿಟಿಜನ್ ರೈಟ್ಸ್ ಫೌಂಡೇಷನ್ ಅಧ್ಯಕ್ಷ ಕೆ.ಎ.ಪಾಲ್ ಆರೋಪಿಸಿದ್ದರು. ಈ ಬಗ್ಗೆ ಹೈಕೋರ್ಟ್ ಪರಿವೀಕ್ಷಣೆಯಲ್ಲಿ ಉನ್ನತ ಮಟ್ಟದ ತನಿಖೆ ನಡೆಸುವಂತೆ ದೂರುದಾರರು ಕೋರಿದ್ದರು.

ಈ ದೂರನ್ನು ಸರ್ಕಾರ ನಿರ್ಲಕ್ಷಿಸಿದ ಹಿನ್ನೆಲೆ ಲೋಕಾಯುಕ್ತರಿಗೆ ಪಾಲ್ ಅವರು ದೂರು ಸಲ್ಲಿಸಿದ್ದರು. ಆದರೂ ಕ್ರಮ ಕೈಗೊಳ್ಳದಿದ್ದಾಗ ಕೆ.ಎ.ಪಾಲ್ ಅವರು ಜಾರಿ ನಿರ್ದೇಶನಾಲಯಕ್ಕೆ ದೂರು ಸಲ್ಲಿಸಿದ್ದಾರೆ.ಇ.ಡಿ.ಗೆ ಸಲ್ಲಿಸಿರುವ ದೂರಿನಲ್ಲಿ ಬಾಳಪ್ಪ ಹಂದಿಗುಂದ ಮಾತ್ರವಲ್ಲ, ಸಿಎಂ ಸಿದ್ದರಾಮಯ್ಯ ಹಾಗೂ ಕೈಗಾರಿಕಾ ಸಚಿವರ ಬಗ್ಗೆಯೂ ಪಾಲ್ ಅರೊಪ ಮಾಡಿದ್ದಾರೆ.

ಅತ್ತ, ಜಾರಿ ನಿರ್ದೇಶನಾಲಯವು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸುತ್ತಿದ್ದಂತೆಯೇ ಎಚ್ಚೆತ್ತುಕೊಂಡಿರುವ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಅವರು ತರಾತುರಿಯಲ್ಲಿ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಗೆ ನಿರ್ದೇಶನ ನೀಡಿ, ಪ್ರಕರಣ ತನಿಖೆ ಬಗ್ಗೆ ಪರಿಶೀಲಿಸುವಂತೆ ನಿರ್ದೇಶನ ನೀಡಿದ್ದಾರೆ. ಸಚಿವರ ಪತ್ರ ಆಧರಿಸಿ ಕೆಐಎಡಿಬಿ ಸಿಇಒ ಅವರಿಗೆ ಪತ್ರ ಬರೆದಿರುವ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ, ಸಿಟಿಜನ್ ರೈಟ್ಸ್ ಫೌಂಡೇಷನ್ ನೀಡಿರುವ ದೂರಿನ ಹಿನ್ನೆಲೆಯಲ್ಲಿ ಸೂಕ್ತ ಕ್ರಮ ಕೈಗೊಂಡು ಸರ್ಕಾರಕ್ಕೆ ವರದಿ ನೀಡುವಂತೆ ಆದೇಶಿಸಿದ್ದಾರೆ.

Share. Facebook Twitter LinkedIn WhatsApp Email

Related Posts

ಮುಸಲ್ಮಾನ್ ಬಂಧುಗಳಿಗೆ ಕಾಂಗ್ರೆಸ್ ಎಲ್ಲೆಡೆ ಕೋಕ್ ಕೊಡುತ್ತಾ ಬಂದಿದೆ: ಛಲವಾದಿ ನಾರಾಯಣಸ್ವಾಮಿ

21/03/2026 7:24 PM2 Mins Read

ಸಾಗರ ಶ್ರೀ ಮಹಾಗಣಪತಿ ಜಾತ್ರಾ ಮಹೋತ್ಸವ: ದೇವಸ್ಥಾನ ಸಮಿತಿಯಿಂದ ಶಾಸಕ ಗೋಪಾಲಕೃಷ್ಣ ಬೇಳೂರು ಆಹ್ವಾನ

21/03/2026 7:06 PM2 Mins Read

ನಿವೃತ್ತಿಗೆ ಹತ್ತು ದಿನ ಬಾಕಿ ಇರುವಾಗಲೇ ಅಧಿಕಾರಿಯ ಆತ್ಮಹತ್ಯೆ; ಸಾವಿಗೂ ಮುನ್ನ ಸೆಲ್ಫಿ ವಿಡಿಯೋದಲ್ಲಿ ಕಟು ಸತ್ಯ ರಿಲೀವ್!

21/03/2026 6:29 PM2 Mins Read
Recent News

ಮುಸಲ್ಮಾನ್ ಬಂಧುಗಳಿಗೆ ಕಾಂಗ್ರೆಸ್ ಎಲ್ಲೆಡೆ ಕೋಕ್ ಕೊಡುತ್ತಾ ಬಂದಿದೆ: ಛಲವಾದಿ ನಾರಾಯಣಸ್ವಾಮಿ

21/03/2026 7:24 PM

ಅತಿ-ಸಂಸ್ಕರಿಸಿದ ಆಹಾರ ತಿನ್ನುವುದ್ರಿಂದ ‘ಪಾರ್ಶ್ವವಾಯು’ ಅಪಾಯವು ಶೇ.67ರಷ್ಟು ಹೆಚ್ಚಾಗುತ್ತದೆ ; ಹೊಸ ಅಧ್ಯಯನ

21/03/2026 7:16 PM

ಸಾಗರ ಶ್ರೀ ಮಹಾಗಣಪತಿ ಜಾತ್ರಾ ಮಹೋತ್ಸವ: ದೇವಸ್ಥಾನ ಸಮಿತಿಯಿಂದ ಶಾಸಕ ಗೋಪಾಲಕೃಷ್ಣ ಬೇಳೂರು ಆಹ್ವಾನ

21/03/2026 7:06 PM

BREAKING : ಇರಾನ್ ಕದನ ವಿರಾಮ ಸ್ವೀಕರಿಸೋದಿಲ್ಲ, ರಾಷ್ಟ್ರೀಯ ಭದ್ರತೆ ರಕ್ಷಿಸುವ ಪ್ರತಿಜ್ಞೆ ಮಾಡಿ ಆಗಿದೆ : ಎಫ್ಎಂ ಅರಾಘ್ಚಿ

21/03/2026 6:46 PM
State News
KARNATAKA

ಮುಸಲ್ಮಾನ್ ಬಂಧುಗಳಿಗೆ ಕಾಂಗ್ರೆಸ್ ಎಲ್ಲೆಡೆ ಕೋಕ್ ಕೊಡುತ್ತಾ ಬಂದಿದೆ: ಛಲವಾದಿ ನಾರಾಯಣಸ್ವಾಮಿ

By kannadanewsnow0921/03/2026 7:24 PM KARNATAKA 2 Mins Read

ಬೆಂಗಳೂರು: ಜಮೀರ್ ಅಹ್ಮದ್ ಅವರು ದಾವಣಗೆರೆಯಲ್ಲಿ ಮುಸಲ್ಮಾನ್ ಬಂಧುಗಳಿಗೇ ಟಿಕೆಟ್ ಕೊಡಬೇಕು. ಇಲ್ಲವಾದರೆ ರಾಜೀನಾಮೆ ಕೊಡುವ ಬೆದರಿಕೆ ಒಡ್ಡಿದ್ದಾರೆ. ಇದಕ್ಕೆ…

ಸಾಗರ ಶ್ರೀ ಮಹಾಗಣಪತಿ ಜಾತ್ರಾ ಮಹೋತ್ಸವ: ದೇವಸ್ಥಾನ ಸಮಿತಿಯಿಂದ ಶಾಸಕ ಗೋಪಾಲಕೃಷ್ಣ ಬೇಳೂರು ಆಹ್ವಾನ

21/03/2026 7:06 PM

ನಿವೃತ್ತಿಗೆ ಹತ್ತು ದಿನ ಬಾಕಿ ಇರುವಾಗಲೇ ಅಧಿಕಾರಿಯ ಆತ್ಮಹತ್ಯೆ; ಸಾವಿಗೂ ಮುನ್ನ ಸೆಲ್ಫಿ ವಿಡಿಯೋದಲ್ಲಿ ಕಟು ಸತ್ಯ ರಿಲೀವ್!

21/03/2026 6:29 PM

7 ಜನ ವಿದ್ಯಾರ್ಥಿಗಳಿಗೆ ಮನಸೋಇಚ್ಛೆ ಥಳಿಸಿದ ಆರೋಪ: ಸ್ಥಳಕ್ಕೆ ಪೊಲೀಸರು ಭೇಟಿ, ಪರಿಶೀಲನೆ

21/03/2026 6:01 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.