ಬೆಂಗಳೂರು : ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ಶುಭ ಕರಂದ್ಲಾಜೆಗೆ ಸಂಕಷ್ಟ ಎದುರಾಗಿದ್ದು, ಕೆಐಎಡಿಬಿ (ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ) ಹಗರಣದಲ್ಲಿ ಅಕ್ರಮ ಹಣ ವರ್ಗಾವಣೆ ಪ್ರಕರಣ ಮುನ್ನಲೆಗೆ ಬಂದಿದೆ. ಇಡಿ ಪ್ರಕರಣದ ವಿಚಾರಣೆಗೆ ಶೋಭಾ ಗೈರು ಹಾಜರಾಗಿದ್ದಾರೆ ಎನ್ನಲಾಗಿದೆ.
ಇವರಲ್ಲದೆ ಮಾಜಿ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಸೇರಿ 24 ಮಂದಿ ವಿರುದ್ಧದ ಕೇಸ್ ಇದೆ.ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ಈ ಹಗರಣದ ಬಗ್ಗೆ ವಿಚಾರಣೆ ನಡೆಯುತ್ತಿದೆ. ಈಗ ವಿಚಾರಣೆಗೆ ಶೋಭಾ ಕರಂದ್ಲಾಜೆ ಗೈರಾಗಿದ್ದು, ವಿಚಾರಣೆಗೆ ಹಾಜರಾತಿ ವಿನಾಯಿತಿ ಕೋರಿ ಅರ್ಜಿ ಸಲ್ಲಿಸಲಾಗಿದೆ. ಇಡಿ ಪರ ವಕೀಲರು ಗೈರು ಹಿನ್ನಲೆ ವಿಚಾರಣೆಯನ್ನು ಏಪ್ರಿಲ್ 3ಕ್ಕೆ ಕೋರ್ಟ್ ಮುಂದೂಡಿದೆ.
ಯಡಿಯೂರಪ್ಪಗೆ ಕಾರ್ಯಕರ್ತರು ಬೇಡ, ಜನ ಬೇಡ ಶೋಭಾ ಮಾತ್ರ ಬೇಕು : ಕೆ.ಎಸ್ ಈಶ್ವರಪ್ಪ ವಾಗ್ದಾಳಿ
ಏನಿದು ಪ್ರಕರಣ?
ಕೆಐಎಡಿಬಿ ಹಗರಣಕ್ಕೆ ಸಂಬಂಧಿಸಿದಂತೆ ಇಟಾಸ್ಕಾ ಕಂಪನಿಯಿಂದ ಕಟ್ಟಾ ಸುಬ್ರಮಣ್ಯ ನಾಯ್ಡು ಪಡೆದ ಲಂಚದಲ್ಲಿ ಸಚಿವೆ ಶೋಭಾಗೂ ಪಾಲು ಸಿಕ್ಕಿದೆ ಎನ್ನಲಾಗಿದ್ದು, ಇಟಾಸ್ಕಾದಿಂದ ಬಂದಿದ್ದ 87 ಕೋಟಿ ರೂ ಕಿಕ್ ಬ್ಯಾಕ್ ನಲ್ಲಿ 47 ಕೋಟಿ ರೂ. ಶೋಭಾ ಅವರಿಗೆ ಸಂದಿದೆ ಎಂದು ಇಡಿ ಪತ್ತೆ ಮಾಡಿತ್ತು. ಇದಕ್ಕೆ ಪುರಾವೆ ಎಂಬಂತೆ ಶೋಭಾ ಅವರ ಅಕೌಂಟ್‌ಗೆ 70 ಲಕ್ಷ ರೂ ವರ್ಗಾವಣೆ ಆಗಿತ್ತು.
2011ರ ಈ ಪ್ರಕರಣದಲ್ಲಿ ಕೆಐಎಡಿಬಿ ಭೂಹಗರಣಕ್ಕೆ ಸಂಬಂಧಪಟ್ಟಂತೆ ಕಟ್ಟಾಸುಬ್ರಹ್ಮಣ್ಯ ನಾಯ್ಡು ಸಚಿವ ಸ್ಥಾನವನ್ನು ಕಳೆದುಕೊಂಡು, ಜೈಲುಪಾಲಾಗಿದ್ದರು. ಕಟ್ಟಾ ಅವರ ಮಗ ಜಗದೀಶ್ ಕಟ್ಟಾ, ಇಟಾಸ್ಕಾ ಕಂಪನಿ ಎಂಡಿ ಸೇರಿದಂತೆ ಒಟ್ಟು 24 ಮಂದಿ ಪ್ರಕರಣದ ಪ್ರಮುಖರಾಗಿದ್ದರು. ಕೋರ್ಟ್ ನಲ್ಲಿ ನಿಧಾನಗತಿಯ ವಿಚಾರಣೆ ನಡೆಯುತ್ತಿದ್ದು, ಈಗಾಗಲೇ ಈ ಪ್ರಕರಣಕ್ಕೆ 10 ವರ್ಷ ಮುಗಿದಿದೆ.
BREAKING : ಚುನಾವಣೆ ಹೊತ್ತಲ್ಲಿ ‘ಬಿಜೆಪಿ’ಗೆ ಬಿಗ್ ಶಾಕ್ : ‘ಕೈ’ ಹಿಡಿಯಲಿರುವ ಮಾಜಿ ಸಚಿವ ಕೋಟೆ ಶಿವಣ್ಣ