ಬೆಂಗಳೂರು : 22 ರಾಜ್ಯಗಳಲ್ಲಿ ಓಡಾಡಿಕೊಂಡು ವೇಶ್ಯಾವಾಟಿಕೆ ದಂಧೆಯಲ್ಲಿದ್ದ ಖತರ್ನಾಕ್ ಲೇಡಿ ಹಾಗೂ ಆಕೆಯ ಗ್ಯಾಂಗ್ ಇದೀಗ ಪೊಲೀಸರ ಅತಿಥಿಯಾಗಿದ್ದಾರೆ.
ಸಿಂಧನೂರು ಪೊಲೀಸರು ಕಾರ್ಯಾಚರಣೆ ನಡೆಸಿ ಸುಜಾತಾ ಅಲಿಯಾಸ್ ನಿಹಾರಿಕಾಳನ್ನು ಬಂಧಿಸಿದ್ದಾರೆ.ಆರೋಪಿ ನಿಹಾರಿಕಾ ಇವೆಂಟ್ ಮ್ಯಾನೇಜ್ಮೆಂಟ್ ಹೆಸರಿನಲ್ಲಿ ಆಂಧ್ರದ ಯುವತಿಯರನ್ನ ಕರೆಸಿಕೊಂಡು ವೇಶ್ಯಾವಾಟಿಕೆ ನಡೆಸುತ್ತಿದ್ದಳು.
ಪರಿಚಯಸ್ಥ ಶ್ರೀಮಂತರ ಮಾಹಿತಿ ಸಂಗ್ರಹಿಸಿ ಅವರ ಸ್ನೇಹ ಸಂಪಾದಿಸಿ ಕಳ್ಳತನಕ್ಕೆ ಇಳಿಯುತ್ತಿದ್ದಳು. ಬಂಧಿತರಿಂದ 25 ಲಕ್ಷ ಮೌಲ್ಯದ 520 ಗ್ರಾಂ ಚಿನ್ನಾಭರಣ, 1 ಲಕ್ಷ ನಗದು, 3 ಕಾರುಗಳನ್ನು ಜಪ್ತಿ ಮಾಡಲಾಗಿದೆ. 45 ದಿನಗಳ ಕಾರ್ಯಾಚರಣೆ ಬಳಿಕ ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.