ಹಾಸನ : ಇಂದು ಮುಖ್ಯಮಂತ್ರಿ ಸಿಎಂ ಸಿದ್ದರಾಮಯ್ಯರ ಕಾರ್ಯಕ್ರಮಗಳ ಕುರಿತು ಹಾಸನದಲ್ಲಿ ಜಿಲ್ಲೆಯ ಎಲ್ಲಾ ಅಧಿಕಾರಿಗಳೊಂದಿಗೆ ಉಸ್ತುವಾರಿ ಸಚಿವ ಕೃಷ್ಣ ಭೈರೇಗೌಡ ಸಭೆ ನಡೆಸಿದರು. ಸಭೆಯಲ್ಲಿ ಎಲ್ಲ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದು ಸಚಿವರು ಅಧಿಕಾರಿಗಳಿಗೆ ಹಲವು ಸಲಹೆ ಮತ್ತು ಸೂಚನೆಗಳನ್ನು ನೀಡಿದರು.
– ಕಾರ್ಯಕ್ರಮದ ಹೆಸರಿನಲ್ಲಿ ದುಂದು ವೆಚ್ಚ ಮಾಡುವಂತಿಲ್ಲ. ಸಮಯವನ್ನೂ ವ್ಯರ್ಥಗೊಳಿಸುವಂತಿಲ್ಲ.
– ಕಾರ್ಯಕ್ರಮಕ್ಕೆ ಆಗಮಿಸುವ ಪ್ರತಿಯೊಬ್ಬ ಫಲಾನುಭವಿಗಳಿಗೂ ಕಡ್ಡಾಯವಾಗಿ ಹಕ್ಕುಪತ್ರ, ಕ್ರಯಪತ್ರ, ಹಾಗೂ ಇ-ಸ್ವತ್ತು ಮಾಡಿ ಕೊಡ ತಕ್ಕದ್ದು.
– ಈಗಿನಿಂದಲೇ ಹಕ್ಕುಪತ್ರ ಸೇರಿದಂತೆ ಎಲ್ಲಾ ದಾಖಲೆಗಳನ್ನೂ ಸಿದ್ದಪಡಿಸಿಕೊಳ್ಳಬೇಕು.
– ಕಳೆದ ಸರ್ಕಾರದ ಅವಧಿಯಲ್ಲಿ 94c ಹಾಗೂ 94d ಅಡಿಯಲ್ಲಿ 2.50 ಲಕ್ಷ ಹಕ್ಕುಪತ್ರ ನೀಡಿದ್ದರೂ ಸಹ 10600 ಮಾತ್ರ ಇ-ಸ್ವತ್ತು ಆಗಿದೆ.
– ನಾಮಕಾವಸ್ತೆ ಹಕ್ಕುಪತ್ರ ನೀಡುವ ಪ್ರವೃತ್ತಿ ಇನ್ನಾದರೂ ನಿಲ್ಲಬೇಕು. ಗ್ರಾಮ ಪಂಚಾಯತ್ ನಲ್ಲಿ ಎಲ್ಲಾ ಹಕ್ಕುಪತ್ರಕ್ಕೂ ಕಡ್ಡಾಯವಾಗಿ ಇ- ಸ್ವತ್ತು ಮಾಡಕೊಡಲೇಬೇಕು.
– ಫೌತಿಖಾತೆ ಆಂದೋಲನವನ್ನು ಯಾವ ಕಾರಣಕ್ಕೂ ನಿಲ್ಲಿಸುವಂತಿಲ್ಲ. ಮೃತರ ಹೆಸರಲ್ಲಿರುವ ಜನೀನನ್ನು ಈಗಿನ ವಾರಸುದಾರರ ಹೆಸರಿಗೆ ಬದಲಿಸಲೇಬೇಕು.
– ಗ್ರಾಮ ಪಂಚಾಯತ್, ತಾಲೂಕು ಪಂಚಾಯತ್ ಮಟ್ಟದಲ್ಲೂ ನೋಡಲ್ ಆಫೀಸರ್ ಗಳನ್ನ ನೇಮಕ ಮಾಡಿ ಫಲಾನುಭವಿಗಳನ್ನು ಯಾವುದೇ ಸಮಸ್ಯೆ ಇಲ್ಲದಂತೆ ಕಾರ್ಯಕ್ರಮಕ್ಕೆ ಕರೆತರಬೇಕು.
– ಫಲಾನುಭವಿಗಳನ್ನು ಸುರಕ್ಷಿತವಾಗಿ ಮನೆಗೆ ತಲುಪಿಸುವುದೂ ನಮ್ಮ ಕರ್ತವ್ಯ.
– ಬಸ್ ಗಳ ಜೊತೆ ಬೇರೆ ಬೇರೆ ವಾಹನಗಳನ್ನೂ ಏರ್ಪಾಟು ಮಾಡಬೇಕು.
– ಕಾರ್ಯಕ್ರಮವನ್ನು ಬೆಳಗ್ಗೆ 11 ಗಂಟೆಯ ಒಳಗೆ ಆರಂಭಿಸಿ ಮಧ್ಯಾಹ್ನ 2.30ರೊಳಗೆ ಮುಗಿಸಬೇಕು.
– ಕಾರ್ಯಕ್ರಮಕ್ಕೆ ಆಗಮಿಸುವವರಿಗೆ ಬೆಳಗ್ಗೆ ತಿಂಡಿ ಹಾಗೂ ಮಧ್ಯಾಹ್ನ ಊಟದ ವ್ಯವಸ್ಥೆಯನ್ನು ಸುಸಜ್ಜಿತವಾಗಿ ಮಾಡಬೇಕು.
– ವಿಎ ಹಾಗೂ ಪಿಡಿಓಗಳು ತಾವು ಕರೆತಂದ ಜನರನ್ನು ಜೊತೆಗೆ ಕಾರ್ಯಕ್ರಮದಲ್ಲಿ ಕುಳಿತು ಆ ನಂತರ ಅವರನ್ನು ಸುರಕ್ಷಿತವಾಗಿ ಮನೆಗೆ ತಲುಪಿಸಬೇಕು. ಹೋಗುವಾಗ ಅವರ ಎಲ್ಲಾ ದಾಖಲೆಗಳೂ ಅವರ ಕೈಯಲ್ಲಿರುವಂತೆ ನೋಡಿಕೊಳ್ಳಬೇಕು.








