ಕೆಎನ್ಎನ್ ಡಿಜಿಟಲ್ ಡೆಸ್ಕ್ : 27 ವರ್ಷಗಳ ಬಳಿಕ ಸಂಭವಿಸುತ್ತಿರೊ ಕೇತುಗ್ರಸ್ತ ಸೂರ್ಯಗ್ರಹಣ ಆರಂಭವಾಗಿದ್ದು, ಇಂಗ್ಲೇಡ್, ನಾರ್ವೆಯಲ್ಲಿ ಅರ್ಥ ಸೂರ್ಯನನ್ನು ನುಂಗಿದ ರೀತಿಯಲ್ಲಿ ಕಾಣಿಸಿಕೊಳ್ಳುತ್ತಿದೆ. ಭಾರತದಲ್ಲಿ ಸೂರ್ಯಗ್ರಹಣ ಆರಂಭಗೊಳ್ಳಲು ಇನ್ನೂ ಒಂದು ಗಂಟೆ ಮಾತ್ರ ಬಾಕಿಯಿದೆ. ಬರೊಬ್ಬರಿ 4 ಗಂಟೆಗಳ ಕಾಲ ಬಾನಂಗಳಲ್ಲಿ ವಿಸ್ಮಯ ಕಾಣಿಸಲಿದೆ.
BIGG NEWS : ನ. 1 ರಂದು ಮನೆ ಮನೆಗಳಲ್ಲಿ ಕನ್ನಡ ಧ್ವಜ ಹಾರಿಸಿ : ಕರವೇ ರಾಜ್ಯಾಧ್ಯಕ್ಷ ‘ಪ್ರವೀಣ್ ಶೆಟ್ಟಿ’ ಕರೆ
ಭಾರತದ ಸೂರ್ಯ ಗ್ರಹನ ಗೋಚರತೆ
ಭಾಗಶಃ ಸೂರ್ಯಗ್ರಹಣವನ್ನು ಅನುಭವಿಸುವ ಭಾರತೀಯ ನಗರಗಳೆಂದರೆ ನವದೆಹಲಿ, ಬೆಂಗಳೂರು, ಕೋಲ್ಕತ್ತಾ, ಚೆನ್ನೈ, ಉಜ್ಜಯಿನಿ, ವಾರಣಾಸಿ ಮತ್ತು ಮಥುರಾ ಭಾಗಗಳಲ್ಲಿ ಕಾಣಿಸುತ್ತದೆ.
ಗ್ರಹಣದ ಅವಧಿ:
ದೆಹಲಿ ಮತ್ತು ಮುಂಬೈನಲ್ಲಿ, ಗ್ರಹಣದ ಪರ್ವ(ಉತ್ತುಂಗ) ಸಮಯದಲ್ಲಿ ಚಂದ್ರನು ಸೂರ್ಯನನ್ನು ಆವರಿಸಿಕೊಳ್ಳುವ ಶೇಕಡಾವಾರು ಪ್ರಮಾಣ ಕ್ರಮವಾಗಿ 44% ಮತ್ತು 24% ಇರುತ್ತದೆ. ಗ್ರಹಣ ಆರಂಭದಿಂದ ಸೂರ್ಯಾಸ್ತಮಾನದವರೆಗೆ ದೆಹಲಿ ಮತ್ತು ಮುಂಬೈನಲ್ಲಿ ಕ್ರಮವಾಗಿ 1 ಗಂಟೆ 13 ನಿಮಿಷ ಮತ್ತು 1 ಗಂಟೆ 19 ನಿಮಿಷ ಕಾಣಿಸಿಕೊಳ್ಳಲಿದೆ. ಚೆನ್ನೈ ಮತ್ತು ಕೋಲ್ಕತ್ತಾದಲ್ಲಿ ಸೂರ್ಯಾಸ್ತದಿಂದ ಸೂರ್ಯಾಸ್ತಮಾನದವರೆಗೆ ಗ್ರಹಣದ ಅವಧಿ ಕ್ರಮವಾಗಿ 31 ನಿಮಿಷ ಮತ್ತು 12 ನಿಮಿಷ ಇರುತ್ತದೆ.
BIGG NEWS : ನ. 1 ರಂದು ಮನೆ ಮನೆಗಳಲ್ಲಿ ಕನ್ನಡ ಧ್ವಜ ಹಾರಿಸಿ : ಕರವೇ ರಾಜ್ಯಾಧ್ಯಕ್ಷ ‘ಪ್ರವೀಣ್ ಶೆಟ್ಟಿ’ ಕರೆ
ಸೂರ್ಯಗ್ರಹಣ ನೋಡುವುದು ಹೇಗೆ?
ಸೂರ್ಯಗ್ರಹಣವನ್ನು ಕ್ಷಣ ಮಾತ್ರಕ್ಕೂ ಬರಿಗಣ್ಣಿನಿಂದ ನೋಡಬಾರದು. ಚಂದ್ರನು ಸೂರ್ಯನ ಹೆಚ್ಚಿನ ಭಾಗವನ್ನು ಆವರಿಸಿದಾಗಲೂ ಇದು ಕಣ್ಣುಗಳಿಗೆ ಶಾಶ್ವತ ಹಾನಿ ಉಟುಮಾಡುತ್ತದೆ, ಕುರುಡುತನಕ್ಕೆ ಕಾರಣವಾಗುತ್ತದೆ. ಸೂರ್ಯಗ್ರಹಣಗಳನ್ನು ವೀಕ್ಷಿಸಲು ಕೆಲ ಪರೋಕ್ಷ ತಂತ್ರಜ್ಞಾನಗಳ ವಿಧಾನಗಳುಂಟು.
ಅಲ್ಯೂಮಿನೈಸ್ಡ್ ಮೈಲಾರ್, ಕಪ್ಪು ಪಾಲಿಮರ್, ಶೇಡ್ ಸಂಖ್ಯೆ 14ರ ವೆಲ್ಡಿಂಗ್ ಗ್ಲಾಸ್ನಂತಹ ಸಮರ್ಪಕ ಫಿಲ್ಟರ್ ಬಳಸಬೇಕು ಅಥವಾ ದೂರದರ್ಶಕದ ಮೂಲಕ ಬಿಳಿ ಹಲಗೆಯಲ್ಲಿ ಸೂರ್ಯನ ಚಿತ್ರ ಪ್ರಕ್ಷೇಪಿಸುವ ಮೂಲಕ ಸೂರ್ಯಗ್ರಹಣ ವೀಕ್ಷಿಸುವುದು ಸುರಕ್ಷಿತ ವಿಧಾನವಾಗಿದೆ. ನಿಮ್ಮ ನಗರಗಳಲ್ಲಿರುವ ತಾರಾಲಯಗಳಲ್ಲಿ ಗ್ರಹಣ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿರುತ್ತದೆ. ಆನ್ಲೈನ್ನಲ್ಲಿ ನಾಸಾ, ಸ್ಪೇಸ್ ಡಾಟ್ ಕಾಂ ಮುಂತಾದ ವೆಬ್ ತಾಣಗಳಲ್ಲಿ ನೇರ ಪ್ರಸಾರ ಇರಲಿದೆ.
BIGG NEWS : ನ. 1 ರಂದು ಮನೆ ಮನೆಗಳಲ್ಲಿ ಕನ್ನಡ ಧ್ವಜ ಹಾರಿಸಿ : ಕರವೇ ರಾಜ್ಯಾಧ್ಯಕ್ಷ ‘ಪ್ರವೀಣ್ ಶೆಟ್ಟಿ’ ಕರೆ
ಮುಂದಿನ ಸೂರ್ಯಗ್ರಹಣ:
ಮುಂದಿನ ಸೂರ್ಯಗ್ರಹಣವು 2027ರ ಆಗಸ್ಟ್ 2ರಂದು ಭಾರತದಲ್ಲಿ ಗೋಚರಿಸಲಿದೆ. ಇದು ಪರಿಪೂರ್ಣ ಸೂರ್ಯಗ್ರಹಣವಾಗಿರಲಿದೆ. ಆದರೆ, ಇದು ಭಾರತದ ಎಲ್ಲಾ ಭಾಗಗಳಲ್ಲೂ ಭಾಗಶಃ ಸೂರ್ಯಗ್ರಹಣದಂತೆ ಗೋಚರಿಸುತ್ತದೆ. ಅಮಾವಾಸ್ಯೆಯ ದಿನದಂದು ಚಂದ್ರನು ಪೃಥ್ವಿ ಮತ್ತು ಸೂರ್ಯನ ನಡುವೆ ಬಂದಾಗ ಮತ್ತು ಈ ಎಲ್ಲಾ 3 ಗ್ರಹಗಳು ಜೋಡಣೆಯಾದಾಗ(ಸಾಲುಗೂಡಿದಾಗ) ಸೂರ್ಯಗ್ರಹಣ ಸಂಭವಿಸುತ್ತದೆ. ಚಂದ್ರ ಮುದ್ರಿಕೆಯು(ಡಿಸ್ಕ್) ಸೌರ ಮುದ್ರಿಕೆಯನ್ನು ಭಾಗಶಃ ಆವರಿಸಿದಾಗ ಭಾಗಶಃ ಸೂರ್ಯಗ್ರಹಣ ಸಂಭವಿಸುತ್ತದೆ.
BIGG NEWS : ನ. 1 ರಂದು ಮನೆ ಮನೆಗಳಲ್ಲಿ ಕನ್ನಡ ಧ್ವಜ ಹಾರಿಸಿ : ಕರವೇ ರಾಜ್ಯಾಧ್ಯಕ್ಷ ‘ಪ್ರವೀಣ್ ಶೆಟ್ಟಿ’ ಕರೆ