ಕೇರಳ : ಕೇರಳದ ತಿರುವನಂತಪುರಂನಲ್ಲಿ 23 ವರ್ಷದ ಕಾಲೇಜು ವಿದ್ಯಾರ್ಥಿಯೊಬ್ಬನಿಗೆ ತನ್ನ ಪ್ರೇಯಸಿ ವಿಷ ಉಣಿಸಿದ ಘಟನೆ ಕೇರಳದ ತಿರುವನಂತಪುರಂನಲ್ಲಿ ನಡೆದಿದೆ.
ಘಟನೆ ನಡೆದ ಎಂಟು ಗಂಟೆಗಳ ವಿಚಾರಣೆಯ ನಂತರ ಅವಳು ಅಪರಾಧವನ್ನು ಒಪ್ಪಿಕೊಂಡಿದ್ದು, ಬಳಿಕ ಆರೋಪಿಯನ್ನು ವಶಕ್ಕೆ ತೆಗೆದುಕೊಳ್ಳಲಾಯಿತು.
ರೇಡಿಯಾಲಜಿ ವಿದ್ಯಾರ್ಥಿ ಶರೋನ್ ರಾಜ್ (23) ಅಕ್ಟೋಬರ್ 25ರಂದು ಮೃತಪಟ್ಟಿದ್ದರು. ಅಕ್ಟೋಬರ್ 31 ರಂದು, ಅವನ ಗೆಳತಿ ಅವನಿಗೆ ವಿಷವನ್ನು ಹಾಕಿದ್ದಾಳೆ ಎಂದು ಪೊಲೀಸರು ದೃಢಪಡಿಸಿದರು. ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಎಡಿಜಿಪಿ) ಅಜಿತ್ ಕುಮಾರ್ ಅವರು ತಿರುವನಂತಪುರಂ ಮೂಲದ ಶರೋನ್ ರಾಜ್ ಅವರನ್ನು ಅವರ ಸ್ನೇಹಿತ ಗ್ರೀಷ್ಮಾ ಕೊಲೆ ಮಾಡಿದ್ದಾರೆ ಎಂದು ಹೇಳಿದ್ದಾರೆ.8 ಗಂಟೆಗಳ ವಿಚಾರಣೆಯ ನಂತರ ಗ್ರೀಷ್ಮಾ ಅಪರಾಧವನ್ನು ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಲವ್ ಬ್ರೇಕ್ ಅಪ್ ಗೆ ಒಪ್ಪದ ಹಿನ್ನೆಲೆ ಆತನಿಗೆ ವಿಷ ಹಾಕಿ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾಳೆ
ಅವಳು ಅವನನ್ನು ತನ್ನ ಮನೆಗೆ ಕರೆಸಿಕೊಂಡು ಕಷಾಯದಲ್ಲಿ ಕಾಪಿಕ್ ಎಂಬ ಕೀಟನಾಶಕವನ್ನು ಬೆರೆಸಿ ಕೊಟ್ಟ ಯುವತಿ ಯುವಕ ವಾಂತಿ ಮಾಡುತ್ತಿದ್ದಂತೆ ಸ್ಥಳದಿಂದ ತನ್ನ ಸ್ನೇಹಿತರೊಡನೆ ಎಸ್ಕೇಪ್ ಆಗಿದ್ದಾಳೆ. ಅಕ್ಟೋಬರ್ 14 ರಂದು ಘಟನೆ ನಡೆದಿದೆ ಎನ್ಮಲಾಗಿದೆ.
ಗ್ರೀಷ್ಮಾ ಮತ್ತು ಶರೋನ್ ಒಂದು ವರ್ಷ ಪ್ರೀತಿಸಿದ್ದು, ನಂತರ ವೈಮನಸ್ಸಿನಿಂದ ಬೇರೆಯಾಗಲು ಯುವತಿ ನಿರ್ಧರಿಸಿದ್ದಳು ಎನ್ನಲಾಗಿದೆ. . ಗ್ರೀಷ್ಮಾ ಸಂಬಂಧವನ್ನು ಕೊನೆಗೊಳಿಸಲು ಈ ರೀತಿಯ ಕೃತ್ಯ ಎಸಗಿ ಜೈಲು ಸೇರಿದ್ದಾಳೆ.
BIGG NEWS : ಭಾಷಣದ ವೇಳೆ ಗುಜರಾತ್ ಘೋರ ‘ಕೇಬಲ್ ಸೇತುವೆ ದುರಂತ’ ನೆನೆದು ‘ಪ್ರಧಾನಿ ಮೋದಿ’ ಭಾವುಕ, ಇಲ್ಲಿದೆ ವಿಡಿಯೋ