ತಿರುವನಂತಪುರಂ (ಕೇರಳ) : ಕೇರಳದ ಶಬರಿಮಲೆ ದೇಗುಲಕ್ಕೆ ಭಕ್ತಸಾಗರವೇ ಹರಿದುಬರುತ್ತಿದ್ದು, ಒಂದೇ ದಿನ ಶಬರಿಮಲೆ ದೇಗುಲಕ್ಕೆ 1 ಲಕ್ಷಕ್ಕೂ ಅಧಿಕ ಭಕ್ತರು ಆಗಮಿಸಿ ಅಯ್ಯಪ್ಪಸ್ವಾಮಿಯ ದರ್ಶನ ಪಡೆದು ಧನ್ಯರಾಗಿದ್ದಾರೆ.
ಸೋಮವಾರ(ಡಿ. 12) 1 ಲಕ್ಷಕ್ಕೂ ಹೆಚ್ಚು ಮಂದಿ ಭಕ್ತರು ಅಯಪ್ಪಸ್ವಾಮಿ ದೇಗುಲಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ. ದೇವಾಲಯದ ಅಧಿಕಾರಿಗಳ ಪ್ರಕಾರ, ಸೋಮವಾರ ಒಂದೇ ದಿನಕ್ಕೆ ಶಬರಿಮಲೆ ದೇಗುಲದ ದರ್ಶನಕ್ಕೆ 1,07,260 ಮಂದಿ ಬುಕ್ಕಿಂಗ್ ಮಾಡಿದ್ದು, ಇದು ದಾಖಲೆಯ ಬುಕ್ಕಿಂಗ್ ಆಗಿದೆ ಎಂದು ತಿಳಿಸಿದ್ದಾರೆ.
ಕಾಲ್ತುಳಿತವನ್ನು ತಪ್ಪಿಸಲು ಹೆಚ್ಚಿನ ಭದ್ರತಾ ವ್ಯವಸ್ಥೆ ಮಾಡಲಾಗಿದೆ. ಭಕ್ತರನ್ನು ಪಂಪಾದಿಂದ ಸನ್ನಿಧಾನಕ್ಕೆ ನಿಯಂತ್ರಿತ ಹಾಗೂ ವಿಭಾಗೀಯ ರೀತಿಯಲ್ಲಿ ಬೆಂಗಾವಲು ಮಾಡಲಾಗುವುದು. ಇದಕ್ಕಾಗಿ ಪ್ರತಿ ಹಂತದಲ್ಲೂ ಪೊಲೀಸ್ ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ಭಕ್ತಾದಿಗಳ ನೂಕುನುಗ್ಗಲಿನಿಂದಾಗಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ. ಇನ್ನೂ, ದರ್ಶನದ ಸಮಯವನ್ನು ಒಂದು ಗಂಟೆ ವಿಸ್ತರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸರತಿ ಸಾಲಿನಲ್ಲಿ ಲಘು ಆಹಾರ ಮತ್ತು ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗುವುದು. ಟ್ರಾಫಿಕ್ ನಿಯಂತ್ರಿಸಲು ಪೊಲೀಸರಲ್ಲದೆ ಆರ್ಎಎಫ್ ಮತ್ತು ಎನ್ಡಿಆರ್ಎಫ್ ಸಿಬ್ಬಂದಿಯ ಸೇವೆಯನ್ನು ಪಡೆದುಕೊಳ್ಳಲಾಗುವುದು ಎಂದು ಶಬರಿಮಲೆ ವಿಶೇಷ ಅಧಿಕಾರಿ ಹರಿಶ್ಚಂದ್ರ ನಾಯ್ಕ್ ತಿಳಿಸಿದ್ದಾರೆ.
ಶಬರಿಮಲೆ ದರ್ಶನಕ್ಕೆ ಡಿಸೆಂಬರ್ 13 ರಂದು(ಇಂದು) ಸುಮಾರು 77,216 ಮತ್ತು ಡಿಸೆಂಬರ್ 14 ರಂದು 64,617 ಜನರು ಆನ್ಲೈನ್ನಲ್ಲಿ ಬುಕ್ ಮಾಡಿದ್ದಾರೆ. ಶನಿವಾರ ಸಂಜೆ 5 ಗಂಟೆಯವರೆಗೆ ಸುಮಾರು 60,000 ಜನರು ಶಬರಿಮಲೆಗೆ ಭೇಟಿ ನೀಡಿದ್ದಾರೆ.
ಹಿಂದಿನ ನವೆಂಬರ್ 24 ರಂದು, ನಡೆಯುತ್ತಿರುವ ತೀರ್ಥಯಾತ್ರೆಯ ಮೊದಲ ಆರು ದಿನಗಳಲ್ಲಿ ಕೇರಳದ ಪಥನಂತಿಟ್ಟ ಜಿಲ್ಲೆಯ ಶಬರಿಮಲೆಯಲ್ಲಿರುವ ಅಯಪ್ಪ ದೇವಾಲಯಕ್ಕೆ 2.5 ಲಕ್ಷಕ್ಕೂ ಹೆಚ್ಚು ಯಾತ್ರಾರ್ಥಿಗಳು ಭೇಟಿ ನೀಡಿದ್ದರು ಎಂದು ಕೇರಳ ದೇವಸ್ವಂ ಇಲಾಖೆ ಸಚಿವ ಕೆ ರಾಧಾಕೃಷ್ಣನ್ ಹೇಳಿದ್ದಾರೆ.
BIG NEWS : ಕೇಂದ್ರದಿಂದ ಮಹತ್ವದ ನಿರ್ಧಾರ: 15 ವರ್ಷ ಹಳೆಯ ವಾಹನಗಳನ್ನು ರದ್ದುಗೊಳಿಸುವಂತೆ ಸೂಚನೆ
BIG NEWS : ಕೇಂದ್ರದಿಂದ ಮಹತ್ವದ ನಿರ್ಧಾರ: 15 ವರ್ಷ ಹಳೆಯ ವಾಹನಗಳನ್ನು ರದ್ದುಗೊಳಿಸುವಂತೆ ಸೂಚನೆ