ಹುಬ್ಬಳ್ಳಿ : ಕಳೆದ ಎರಡು ದಿನಗಳ ಹಿಂದೆ ಹುಬ್ಬಳ್ಳಿಯಲ್ಲಿ ಎರಡು ಲವ್ ಜಿಹಾದ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ಶ್ರೀರಾಮ ಸೇನೆ ಸಂಸ್ಥಾಪಕ ಅಧ್ಯಕ್ಷರ ಪ್ರಮೋದ್ ಮುತಾಲಿಕ್ ಹುಬ್ಬಳ್ಳಿಯಲ್ಲಿ ಲವ್ ಜಿಹಾದ್ ಪ್ರಕರಣಗಳಿಗೆ ಕೇರಳ ನಂಟಿದೆ ಎಂದು ನಂಬಿರವಾಗಿ ಆರೋಪಿಸಿದ್ದಾರೆ.
ಸಮೀರ್ ಮುಲ್ಲಾ ಸಹೋದರಿ ಕೇರಳಕ್ಕೆ ಹೋಗಿದ್ದಾಳೆ. ಆಕೆ ಕೇರಳಕ್ಕೆ ಹೋಗಿದ್ದರ ಹಿಂದೆ ಅನೇಕ ಅನುಮಾನಗಳು ಇವೆ. ಈ ಪ್ರಕರಣದ ತನಿಖೆಯನ್ನು NIA ವಹಿಸಬೇಕು. ಪೊಲೀಸರು ದಕ್ಷರು ಆದರೆ ಸರ್ಕಾರ ಅವರ ಕೈ ಕಟ್ಟಿ ಹಾಕುತ್ತದೆ. ಹೀಗಾಗಿ ಪ್ರಕರಣದ ತನಿಖೆಯನ್ನು NIA ಗೆ ನೀಡಬೇಕು. ಹಿಂದೂ ಕಾರ್ಯಕರ್ತರ ಮೇಲಿನ ಕೇಸ್ ಗಳನ್ನು ಕೈಬಿಡಬೇಕು ಇಲ್ಲದಿದ್ದರೆ ಹುಬ್ಬಳ್ಳಿ ಬಂದ್ ಮಾಡುತ್ತೇವೆ ಎಂದು ಪ್ರಮೋದ್ ಮುತಾಲಿಕ್ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.








