ಕೇರಳ: ಇತ್ತೀಚಿಗೆ ಕೇರಳದ ವಧುವೊಬ್ಬಳು ʻತನ್ನ ಪತಿಗೆ ರಾತ್ರಿ 9 ಗಂಟೆಯವರೆಗೆ ಆತನ ಸ್ನೇಹಿತರೊಂದಿಗೆ ಕಾಲ ಕಳೆಯಲು ಮತ್ತು ಆ ಸಮಯದಲ್ಲಿ ತಾನು ಅವನಿಗೆ ಕರೆ ಮಾಡಿ ಡಿಸ್ಟರ್ಬ್ ಮಾಡುವುದಿಲ್ಲʼ ಎಂಬ ಅನುಮತಿ ನೀಡುವುದಾಗಿ ತಿಳಿಸುವ ಒಪ್ಪಂದಕ್ಕೆ ಸಹಿ ಹಾಕಿದ್ದಾಳೆ. ಈ ಯೋಜನೆಯನ್ನು ಸ್ನೇಹಿತರು ರೂಪಿಸಿದ್ದಾರೆ.
ಯಾರಾದರೂ ಮದುವೆಯಾದ ನಂತರ, ವೈವಾಹಿಕ ಜೀವನವು ತನ್ನದೇ ಆದ ಆಲೋಚನೆಗಳಂತೆಯೇ ಇರಬೇಕು ಎಂದು ಬಯಸುತ್ತಾರೆ. ಆದ್ರೆ, ಸ್ನೇಹಿತರು ರೂಪಿಸಿದ ಯೋಜನೆಯಂತೆಯೇ 50 ರೂಪಾಯಿಗಳ ಸ್ಟ್ಯಾಂಪ್ ಪೇಪರ್ನಲ್ಲಿ ಒಪ್ಪಂದಕ್ಕೆ ಸಹಿ ಹಾಕಿದ್ದಾಳೆ.
ಈ ಒಪ್ಪಂದಕ್ಕೆ ಸಹಿ ಹಾಕಿದ ವಧು ಹೆಸರು ಅರ್ಚನಾ ಎಸ್. ಈಕೆ ʻಮದುವೆಯಾದ ನಂತರವೂ ನನ್ನ ಪತಿ ರಘು ಎಸ್ ಕೆಡಿಆರ್ ಅವರಿಗೆ ರಾತ್ರಿ 9 ಗಂಟೆಯವರೆಗೆ ಅವರ ಸ್ನೇಹಿತರೊಂದಿಗೆ ಸಮಯ ಕಳೆಯಲು ಅನುಮತಿ ನೀಡಲಾಗುವುದು ಮತ್ತು ಆ ಸಮಯದಲ್ಲಿ ನಾನು ಅವರಿಗೆ ಫೋನ್ನಲ್ಲಿ ತೊಂದರೆ ನೀಡುವುದಿಲ್ಲ ಎಂದು ಈ ಮೂಲಕ ಭರವಸೆ ನೀಡುತ್ತೇನೆʼ ಎಂದು ನವೆಂಬರ್ 5 ರಂದು ಒಪ್ಪಂದಕ್ಕೆ ಸಹಿ ಹಾಕಿದ್ದಾರೆ.
ನವೆಂಬರ್ 5 ರಂದು ಪಾಲಕ್ಕಾಡ್ನ ಕಂಜಿಕೋಡ್ನಲ್ಲಿ ದಂಪತಿಗಳು ವಿವಾಹವಾದರು. ರಘು ಅವರ ಸ್ನೇಹಿತರು ಅರ್ಚನಾಗೆ ಒಪ್ಪಂದವನ್ನು ಉಡುಗೊರೆಯಾಗಿ ನೀಡಿದರು. ಅದನ್ನು ಅವರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು, ವೈರಲ್ ಆಗುತ್ತಿದೆ.
ಸಾಕು ಪ್ರಾಣಿಗಳಿಂದ ಸಾರ್ವಜನಿಕರಿಗೆ ತೊಂದರೆಯಾದ್ರೆ, ಮಾಲೀಕರಿಗೆ 10,000 ರೂ. ದಂಡ ವಿಧಿಸಲು ನಿರ್ಧಾರ… ಎಲ್ಲಿ ಗೊತ್ತಾ?
Eye Care Tips: ನಿಮ್ಮ ʻಕಣ್ಣಿನ ದೃಷ್ಟಿʼ ರಕ್ಷಣೆಗೆ ಈ ದೈನಂದಿನ ಅಭ್ಯಾಸಗಳನ್ನು ತಪ್ಪಿಸಿ