ಕೇರಳ: ನಾಯಿಗೆ ಆಹಾರ ಹಾಕಿಲ್ಲ ಎಂಬ ಕಾರಣಕ್ಕೆ 21 ವರ್ಷದ ತನ್ನ ಸೋದರ ಸಂಬಂಧಿಯನ್ನು ಥಳಿಸಿ ಕೊಂದ ಆರೋಪಿಯನ್ನು ಕೊಪ್ಪಂ ಪೊಲೀಸರು ಭಾನುವಾರ ಬಂಧಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಶುಕ್ರವಾರ ಈ ಘಟನೆ ನಡೆದಿದೆ. ನಾಯಿಗೆ ಆಹಾರ ನೀಡಲಿಲ್ಲ ಎಂಬ ಕಾರಣಕ್ಕೆ ಹಕೀಮ್ (27) ತನ್ನ ಸೋದರಸಂಬಂಧಿ ಹರ್ಷದ್ (21)ನ ಮೇಲೆ ಹಲ್ಲೆ ನಡೆಸಿದ್ದನು. ತೀವ್ರವಾಗಿ ಗಾಯಗೊಂಡ ಹರ್ಷದ್ನನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ.
ತನಿಖೆ ವೇಳೆ ಹರ್ಷದ್ ಪಕ್ಕೆಲುಬು ಮುರಿತ ಮತ್ತು ಆಂತರಿಕ ರಕ್ತಸ್ರಾವವೇ ಅವರ ಸಾವಿಗೆ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸರ ಪ್ರಕಾರ, ಹರ್ಷದ್ ಮತ್ತು ಹಕೀಮ್ ಪೆರುಂಬ್ರತೋಡಿಯಲ್ಲಿ ಒಟ್ಟಿಗೆ ಇದ್ದು ಮೊಬೈಲ್ ಕೇಬಲ್ ಕೆಲಸ ಮಾಡುತ್ತಿದ್ದರು. ನಾಯಿಗೆ ಆಹಾರ ನೀಡದಿದ್ದಕ್ಕೆ ಹರ್ಷದ್ಗೆ ಹಕೀಂ ಥಳಿಸಿ ಈ ದುರ್ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಫೇಸ್ಬುಕ್ ಮೂಲಕವೇ ಲವ್: 28 ವರ್ಷದ ಪಾಕ್ ಯುವಕನನ್ನು ವರಿಸಲು ಪೋಲೆಂಡ್ನಿಂದ ಹಾರಿಬಂದ 83ರ ವೃದ್ಧೆ!
BIG NEWS: ನ.07 ರಂದು ಪಾಕ್ ಪ್ರಧಾನಿ ಶೆಹಬಾಜ್ ಷರೀಫ್ ಈಜಿಪ್ಟ್ ಗೆ ಭೇಟಿ : ಹವಾಮಾನ ಶೃಂಗಸಭೆಯಲ್ಲಿ ಭಾಗಿ