ಬೆಂಗಳೂರು : ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಬೆಂಗಳೂರಿಗೆ ಆಗಮಿಸಿದ್ದು,ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ.
ಇದೀಗ ಪ್ರಧಾನಿ ಮೋದಿ ಕೆಂಪೇಗೌಡ ವಿಮಾನ ನಿಲ್ದಾಣದ ( Kempegowda Airport ) ಬಳಿಯಲ್ಲಿನ ವಿಶ್ವದ ಅತಿ ಎತ್ತರದವಾದ 108 ಅಡಿ ಕೆಂಪೇಗೌಡ ಪ್ರತಿಮೆಯನ್ನು ಲೋಕಾರ್ಪಣೆಗೊಳಿಸಿದ್ದಾರೆ.
ಕೆಂಪೇಗೌಡರ ‘ಪ್ರಗತಿಯ ಪ್ರತಿಮೆ’ಯನ್ನು ಒಟ್ಟು 84 ಕೋಟಿ ವೆಚ್ಚದಲ್ಲಿ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರ ನಿರ್ಮಾಣ ಮಾಡಿದೆ. ದೇವನಹಳ್ಳಿಯ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಆವರಣದಲ್ಲಿ ನಿರ್ಮಾಣ ಮಾಡಲಾಗಿದ್ದು, , ಈ ಪ್ರತಿಮೆಯಲ್ಲಿ ಬಳಸಲಾಗಿರುವ ಅತ್ಯುತ್ತಮ ಗುಣಮಟ್ಟದ ಕಂಚು (85% ತಾಮ್ರ, 5% ಜಿಂಕ್, 5% ಸತು ಹಾಗೂ 5% ಟಿನ್) ಹಾಗೂ ಉಕ್ಕನ್ನು ಭಾರತದಿಂದಲೇ ಪಡೆಯಲಾಗಿರುವುದು ವಿಶೇಷ. ಈ ಗುಣಮಟ್ಟದ ಲೋಹ ಬಳಸಿ ಕೆಂಪೇಗೌಡರ ಮುಖದಲ್ಲಿ ನೈಜತೆಯನ್ನು ತರಲು ಪ್ರಯತ್ನಿಸಲಾಗಿದೆ.
ನಗರದ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ( Kempegowda International Airport ) ಬಳಿಯಲ್ಲಿ ಕೆಂಪೇಗೌಡ ಕಂಚಿನ ಪ್ರತಿಮೆಯನ್ನು ( Kempegowda Bronze Statue ) ನಿರ್ಮಾಣ ಮಾಡಲಾಗಿದೆ. ಈ ಪ್ರತಿಮೆಯು ಉದ್ಘಾಟನೆಗೂ ಮುನ್ನವೇ ಹೊಸ ದಾಖಲೆಯನ್ನು ಬರೆದಿದೆ. ಅದೇ ವರ್ಲ್ಡ್ ಬುಕ್ ಆಫ್ ರೆಕಾರ್ಡ್ಸ್ ಸೇರ್ಪಡೆಗೊಂಡಿದೆ.
ಬೆಂಗಳೂರು ನಿರ್ಮಾತೃ ನಾಡಪ್ರಭು ಕೆಂಪೇಗೌಡರ “ಪ್ರಗತಿಯ ಪ್ರತಿಮೆ”ಯು ವರ್ಲ್ಡ್ ಬುಕ್ ಆಫ್ ರೆಕಾರ್ಡ್ಸ್ ಅನುಸಾರ ಮೊದಲ ಹಾಗೂ ಅತ್ಯಂತ ಎತ್ತರದ ಕಂಚಿನ ಪ್ರತಿಮೆ ಎಂಬುದು ನಮಗೆ ಹೆಮ್ಮೆಯ ವಿಷಯ.108 ಅಡಿಯ ಈ ಪ್ರತಿಮೆ ಕೆಂಪೇಗೌಡರ ದೂರದೃಷ್ಟಿಯ ಬೆಂಗಳೂರನ್ನು ಬಿಂಬಿಸುತ್ತದೆ ಎಂದು ಸಿಎಂ ಬೊಮ್ಮಾಯಿ ಇತ್ತೀಚೆಗೆ ಟ್ವೀಟ್ ಮೂಲಕ ಸ್ಪಷ್ಟಪಡಿಸಿದ್ದರು.
ಕೆಂಪೇಗೌಡ ಏರ್ ಪೋರ್ಟ್ ಟರ್ಮಿನಲ್-2
ಇದಕ್ಕೂ ಮುನ್ನ ಪ್ರಧಾನಿ ಮೋದಿ ಕೆಂಪೇಗೌಡ ಏರ್ ಪೋರ್ಟ್ ಟರ್ಮಿನಲ್-2 ಉದ್ಘಾಟಿಸಿದ್ದಾರೆ. ಹೆಲಿಕಾಪ್ಟರ್ ಮೂಲಕ ಕೆಂಪೇಗೌಡ ಏರ್ ಪೋರ್ಟ್ ಗೆ ತೆರಳಿದ ಮೋದಿ ಲೋಕಾರ್ಪಣೆಗೆ ಸಜ್ಜಾಗಿದ್ದ ಭವ್ಯವಾದ ಕೆಂಪೇಗೌಡ ಏರ್ ಪೋರ್ಟ್ ಟರ್ಮಿನಲ್-2 ಉದ್ಘಾಟಿಸಿದ್ದಾರೆ.
ಇಡೀ ಭಾರತದಲ್ಲೇ ಮುಂಬೈ ಮತ್ತು ದೆಹಲಿಯನ್ನು ಹೊರತುಪಡಿಸಿದರೆ 2ನೇ ಟರ್ಮಿನಲ್ ಹೊಂದಿದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವೆಂಬ ಹೆಗ್ಗಳಿಕೆಗೆ ಹಲವು ವಿಶೇಷತೆಗಳಿಂದ ಗಮನ ಸೆಳೆದಿರುವ ದೇವನಹಳ್ಳಿ ಬಳಿಯ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪಾತ್ರವಾಗಿದೆ. ಟರ್ಮಿನಲ್ 2ದಲ್ಲಿ ಪ್ರಯಾಣಿಕರು 10,000 ಚದರ ಮೀಟರ್ಗಳಷ್ಟು ಉದ್ದದ ಹಸಿರು ಗೋಡೆಗಳು, ನೇತಾಡುವ ಉದ್ಯಾನಗಳು ಮತ್ತು ಹೊರಾಂಗಣ ಉದ್ಯಾನಗಳ ಮೂಲಕ ಪ್ರಯಾಣಿಸಬಹುದು.
ಇಂದು ಜ್ಞಾನ್ವಾಪಿ ಮಸೀದಿ ಪ್ರಕರಣದ ವಿಚಾರಣೆ ನಡೆಸಲಿರುವ ಸುಪ್ರೀಂ ಕೋರ್ಟ್
ಇಂದು ಜ್ಞಾನ್ವಾಪಿ ಮಸೀದಿ ಪ್ರಕರಣದ ವಿಚಾರಣೆ ನಡೆಸಲಿರುವ ಸುಪ್ರೀಂ ಕೋರ್ಟ್