ಬೆಂಗಳೂರು : ಸಾಮಾನ್ಯವಾಗಿ ತಮಗ ಆಗದಿರುವವರ ವಿರುದ್ಧ ಜನರು ವಾಮಾಚಾರ ಮಾಟ ಮಂತ್ರ ಮಾಡಿಸುವುದನ್ನು ನೋಡಿದ್ದೇವೆ ಕೇಳಿದ್ದೇವೆ. ಆದರೆ ಇದೀಗ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೂ ವಾಮಾಚಾರ ನಡೆದಿರುವ ಶಂಕೆ ವ್ಯಕ್ತವಾಗಿದೆ.
ಹೌದು ಬೆಂಗಳೂರಿನ ದೇವನಹಳ್ಳಿ ಬಳಿ ಇರುವ, ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸ್ತ್ರೀ, ಪುರುಷನ ನಗ್ನ ಫೋಟೋ, ಹೂವಿನ ಹಾರ ಸೇರಿ ಇನ್ನಿತರ ವಸ್ತುಗಳಿದ್ದ ಪಾರ್ಸೆಲ್‌ವೊಂದು ಬಂದಿದ್ದು, ವಾಮಾಚಾರ ಮಾಡಿದ್ರಾ ಎಂಬ ಪ್ರಶ್ನೆ ಮೂಡಿದೆ.
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಪೋಸ್ಟ್ ಆಫೀಸ್‌ಗೆ ಪಾರ್ಸೆಲ್‌ವೊಂದು ಬಂದಿದ್ದು, ತೆಗೆದು ನೋಡುತ್ತಿದ್ದಂತೆ ಅಧಿಕಾರಿಗಳು ಶಾಕ್ ಆಗಿದ್ದಾರೆ. ಪಾರ್ಸೆಲ್‌ನಲ್ಲಿ ಮಹಿಳೆ ಹಾಗೂ ಪುರುಷನ ಬೆತ್ತಲೆ ಫೋಟೋ, ಅದರ ಸುತ್ತಲು ಕೊಳೆತ ಟೊಮೆಟೋ, ಹೂವಿನ ಹಾರ, ಅದರ ಮೇಲೆ ಕಬ್ಬಿಣದ ಪೀಸ್ ಹಾಗೂ ಟೂತ್ ಪೇಸ್ಟ್ ಇಟ್ಟಿದ್ದಾರೆ.
ಆ ಎಲ್ಲ ವಸ್ತುಗಳಿಗೆ ಮಾಡಿ ಕಿರಾತಕರು ಪಾರ್ಸೆಲ್ ಕಳುಹಿಸಿದ್ದಾರೆ. ಇದರಿಂದ ಅಲ್ಲಿನ ಸಿಬ್ಬಂದಿ ಮಾನಸಿಕ ಸ್ಥಿತಿ ಪರಿಣಾಮ ಬೀರಿದ್ದು, ಕರ್ತವ್ಯದ ಆಸಕ್ತಿ ತೋರದಂತೆ ಕಾಣುತ್ತಿದೆ. ಸದ್ಯ ಸಿಬ್ಬಂದಿ ನಿರಾಸಕ್ತಿ ನೋಡಿ ಕೆಐಎಎಲ್ ಸಿಬ್ಬಂದಿ ದೂರು ನೀಡಿ, ವಾಮಚಾರ ಮಾಡಿದವರ ವಿರುದ್ಧ ಕ್ರಮಕ್ಕೆ ಮನವಿ ಮಾಡಿದ್ದಾರೆ.








