Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

GOOD NEWS: ಮೃತ ಕಟ್ಟಡ ಕಾರ್ಮಿಕರ ಮಕ್ಕಳಿಗೆ ಶೈಕ್ಷಣಿಕ ಸಹಾಯಧನ ಸೌಲಭ್ಯ: ರಾಜ್ಯ ಸರ್ಕಾರ ಆದೇಶ

06/03/2026 4:49 PM

BREAKING : ಇ-ಕಾಮರ್ಸ್ ದೈತ್ಯ ‘ಫ್ಲಿಪ್ ಕಾರ್ಟ್’ನಿಂದ 300 ಉದ್ಯೋಗಿಗಳು ವಜಾ

06/03/2026 4:45 PM

ರಾಜ್ಯ ಬಜೆಟ್ ನಲ್ಲಿ ಆರ್ಥಿಕ ಬೆಳವಣಿಗೆ, ಕಲ್ಯಾಣ, ಮೂಲಸೌಕರ್ಯಕ್ಕೆ ಒತ್ತು- ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್

06/03/2026 4:32 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಕೇಳಚಂದ್ರ ಕೌಶಲ್ಯ ತರಬೇತಿ ಕೇಂದ್ರದಿಂದ ಸ್ವಾವಲಂಬಿ ಬದುಕಿಗೆ ದಾರಿ: ವ್ಯವಸ್ಥಾಪಕ ಟ್ರಸ್ಟಿ ಸುಜಾ ಕೆ.ಜೆ.ಜಾರ್ಜ್
KARNATAKA

ಕೇಳಚಂದ್ರ ಕೌಶಲ್ಯ ತರಬೇತಿ ಕೇಂದ್ರದಿಂದ ಸ್ವಾವಲಂಬಿ ಬದುಕಿಗೆ ದಾರಿ: ವ್ಯವಸ್ಥಾಪಕ ಟ್ರಸ್ಟಿ ಸುಜಾ ಕೆ.ಜೆ.ಜಾರ್ಜ್

By kannadanewsnow0912/02/2026 8:41 PM

ಬೆಂಗಳೂರು : ಸರ್ವಜ್ಞನಗರ ವಿಧಾನಸಭಾ ಕ್ಷೇತ್ರದಲ್ಲಿ ಕೇಳಚಂದ್ರ ಕೌಶಲ್ಯ ಅಭಿವೃದ್ಧಿ ಕೇಂದ್ರದ ಮೂಲಕ ಯುವ ಸಮುದಾಯಕ್ಕೆ ಕೌಶಲ್ಯ ನೀಡಿ ಅವರನ್ನು ಸ್ವಾವಲಂಬಿಗಳನ್ನಾಗಿ ಮಾಡುವ ಮಹೋನ್ನತ ಕಾರ್ಯವನ್ನು ಕ್ಷೇತ್ರದ ಶಾಸಕರೂ ಆದ ಇಂಧನ ಸಚಿವ ಕೆ.ಜೆ.ಜಾರ್ಜ್ ಅವರು ಕೈಗೊಳ್ಳುತ್ತಿರುವುದು ಶ್ಲಾಘನೀಯ ಎಂದು ಕೇಳಚಂದ್ರ ಫೌಂಡೇಶನ್‌ನ ವ್ಯವಸ್ಥಾಪಕ ಟ್ರಸ್ಟಿ ಸುಜಾ ಕೆ.ಜೆ. ಜಾರ್ಜ್ ಹೇಳಿದ್ದಾರೆ.

ಜೀವನಹಳ್ಳಿಯಲ್ಲಿರುವ ಕೇಳಚಂದ್ರ ಕೌಶಲ್ಯ ಅಭಿವೃದ್ಧಿ ಕೇಂದ್ರದಲ್ಲಿ ಕೌಶಲ್ಯ ಕೋರ್ಸ್‌ಗಳನ್ನು ಪೂರ್ಣಗೊಳಿಸಿದವರಿಗೆ ಗುರುವಾರ ಪ್ರಮಾಣಪತ್ರಗಳನ್ನು ವಿತರಿಸಿದ ಬಳಿಕ ಮಾತನಾಡಿದ ಸುಜಾ ಕೆ.ಜೆ.ಜಾರ್ಜ್, “ಈ ಕೌಶಲ್ಯ ಅಭಿವೃದ್ಧಿ ಕೇಂದ್ರವು ಸಚಿವರಾದ ಕೆ.ಜೆ. ಜಾರ್ಜ್ ಮತ್ತು ರಾಣಾ ಜಾರ್ಜ್ ಅವರ ದೂರದೃಷ್ಟಿಯ ಯೋಜನೆಯಾಗಿದ್ದು, ಈ ಮೂಲಕ ಯುವ ಸಮುದಾಯವನ್ನು ಸಬಲೀಕರಣಗೊಳಿಸುತ್ತಿದೆ,” ಎಂದರು.

“ಕೇಳಚಂದ್ರ ಫೌಂಡೇಷನ್ ನ ಕೌಶಲ್ಯ ಅಭಿವೃದ್ಧಿ ಕೇಂದ್ರಗಳ ಮೂಲಕ ತರಬೇತಿ ನೀಡುವುದು ಮಾತ್ರವಲ್ಲದೆ, ಆರೋಗ್ಯ, ಶಿಕ್ಷಣ, ಕ್ರೀಡೆ ಮುಂತಾದ ಕ್ಷೇತ್ರಗಳಲ್ಲೂ ಕ್ಷೇತ್ರದ ಜನರಿಗೆ ವಿವಿಧ ಸೇವೆ, ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ. ಸಮಾಜಕ್ಕೆ ಸಹಾಯ ಮಾಡುವುದನ್ನು ನೋಡಿದಾಗ ನನಗೆ ಅಪಾರ ಸಂತೋಷವಾಗುತ್ತದೆ. ಅದೇ ರೀತಿ ಕ್ಷೇತ್ರದ ಜನರು ಇದರ ಅನುಕೂಲ ಪಡೆಯುತ್ತಿರುವುದರಿಂದ ನಮ್ಮ ಕುಟುಂಬಕ್ಕೂ ಸಂತೋಷ,” ಎಂದು ತಿಳಿಸಿದರು.

“ಈ ಮೂರು ತಿಂಗಳ ತರಬೇತಿಯಲ್ಲಿ ನಿಮ್ಮ ಕಠಿಣ ಪರಿಶ್ರಮಕ್ಕೆ ಭವಿಷ್ಯದಲ್ಲಿ ಉತ್ತಮ ಫಲಿತಾಂಶ ಸಿಗಲಿದೆ. ಹೊಸತನ್ನು ಕಲಿಯುವಾಗ ಹೊಸ ಕೌಶಲ್ಯದೊಂದಿಗೆ ಹೊಸ ಸ್ನೇಹಿತರನ್ನೂ ಹೊಂದಿ ನಿಮ್ಮ ಅನುಭವವನ್ನು ಹೆಚ್ಚಿಸಿಕೊಳ್ಳಲು ಅನುಕೂಲವಾಗುತ್ತದೆ. ಯುವ ಸಮುದಾಯ ಮಾದಕ ವ್ಯಸನಗಳಿಗೆ ಬಲಿಯಾಗದೆ ಕೌಶಲ್ಯ ಹೊಂದುವ ಮೂಲಕ ಕುಟುಂಬನ್ನು ಆರ್ಥಿಕವಾಗಿ ಸಬಲರನ್ನಾಗಿ ಮಾಡಬಹುದು,” ಎಂದು ಹೇಳಿದರು.

ಆರೋಗ್ಯ ಕ್ಷೇತ್ರದಲ್ಲಿ ದಾಖಲೆಯ ಕೊಡುಗೆ:

“ಕೇಳಚಂದ್ರ ಫೌಂಡೇಷನ್ ಆರೋಗ್ಯ ಕ್ಷೇತ್ರಕ್ಕೆ ದಾಖಲೆ ಎನ್ನಬಹುದಾದ ಕೊಡುಗೆ ನೀಡಿದೆ. ಇಲ್ಲಿನ ಡಯಾಲಿಸಿಸ್ ಕೇಂದ್ರದಲ್ಲಿ 2014 ರಿಂದ ಈವರೆಗೆ 38,000 ಕ್ಕೂ ಹೆಚ್ಚು ಉಚಿತ ಡಯಾಲಿಸಿಸ್ ಗಳನ್ನು ಮಾಡಲಾಗಿದೆ. ಮಧುಮೇಹ ಮತ್ತು ಅಧಿಕ ರಕ್ತದೊತ್ತಡದಂತಹ ಸಮಸ್ಯೆಗಳಿಂದ ಬಳಲುತ್ತಿರುವವರಿಗೆ 1.1 ಲಕ್ಷಕ್ಕೂ ಹೆಚ್ಚು ಆರೋಗ್ಯ ಸಮಾಲೋಚನೆಗಳನ್ನು ಒದಗಿಸಲಾಗಿದೆ. 1.20 ಲಕ್ಷಕ್ಕೂ ಹೆಚ್ಚು ನಾಗರಿಕರು ನಮ್ಮ ಲ್ಯಾಬ್ ಮತ್ತು ಉಚಿತ ಔಷಧ ಸೌಲಭ್ಯ ಪಡೆದಿದ್ದಾರೆ. 30,000 ಕ್ಕೂ ಹೆಚ್ಚು ನೋಂದಾಯಿತ ಹೊರರೋಗಿಗಳು ಅನುಕೂಲ ಪಡೆದುಕೊಂಡಿದ್ದಾರೆ. ಸಮುದಾಯ ಆರೋಗ್ಯ ಸಹಾಯಕರು 80,000ಕ್ಕೂ ಹೆಚ್ಚು ಮನೆಗಳಿಗೆ ಭೇಟಿ ನೀಡಿ, ಕುಟುಂಬಗಳಿಗೆ ಆರೋಗ್ಯ ರಕ್ಷಣೆ, ಪಿಂಚಣಿ ಮತ್ತು ಕಲ್ಯಾಣ ಯೋಜನೆಗಳನ್ನು ಪಡೆಯಲು ಸಹಾಯ ಮಾಡುತ್ತಿದ್ದಾರೆ,” ಎಂದು ಸುಜಾ ಕೆ.ಜೆ.ಜಾರ್ಜ್ ಮಾಹಿತಿ ನೀಡಿದರು.

“ಆರೋಗ್ಯ ಮಾತ್ರವಲ್ಲದೆ ಕಂಪ್ಯೂಟರ್‌ ತರಬೇತಿ, ಟೈಲರಿಂಗ್, ಕರಕುಶಲ ವಸ್ತುಗಳು ಮತ್ತು ಆಭರಣ ತಯಾರಿಕೆಯಲ್ಲಿ 1600ಕ್ಕೂ ಹೆಚ್ಚು ಮಹಿಳೆಯರು ಕೌಶಲ್ಯ ಪಡೆದಿದ್ದಾರೆ, ಡೇಟಾ ಎಂಟ್ರಿ, ಎಲೆಕ್ಟ್ರೀಷಿಯನ್ ಕೆಲಸ ಮತ್ತು ಮೊಬೈಲ್ ರಿಪೇರಿಗಳಲ್ಲಿ 800ಕ್ಕೂ ಹೆಚ್ಚು ಯುವಕರು ತರಬೇತಿ ಹೊಂದಿದ್ದಾರೆ. ಇದಲ್ಲೆ, ಶಾಲೆಗಳು, ಆಟದ ಮೈದಾನಗಳನ್ನು ಮೇಲ್ದರ್ಜೆಗೇರಿಸುವ ಮೂಲಕ ಶಿಕ್ಷಣ ಮತ್ತು ಕ್ರೀಡೆಗೂ ಆದ್ಯತೆ ನೀಡಲಾಗಿದೆ. ಉದ್ಯಾನಗಳನ್ನು ಅಭಿವೃದ್ಧಿಪಡಿಸಿ ಹಸಿರೀಕರಣಕ್ಕೆ ಒತ್ತು ನೀಡಲಾಗುತ್ತಿದೆ,” ಎಂದರು.

ಹೆಣ್ಣೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಎ. ಪುಲಿಕೇಶಿ, ಮಾರುತಿ ಸೇವಾನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಘ ದೇವರಾಜ್, ಜೀವನಹಳ್ಳಿ ಕೌಶಲ್ಯ ಅಭಿವೃದ್ಧಿ ಕೇಂದ್ರದ ಸಂಯೋಜಕಿ ಲತಾ ಗಣೇಶ್, ಕೆ.ಜಿ. ಹಳ್ಳಿ ಕೌಶಲ್ಯ ಅಭಿವೃದ್ಧಿ ಕೇಂದ್ರದ ಸಂಯೋಜಕಿ ಡಾ. ತ್ರಿವೇಣಿ, ಸಚಿವ ಕೆ.ಜೆ.ಜಾರ್ಜ್ ಅವರ ರಾಜಕೀಯ ಕಾರ್ಯದರ್ಶಿ ಮೆನನ್ ಮತ್ತಿತರರು ಪಾಲ್ಗೊಂಡಿದ್ದರು.

ಕೇಳಚಂದ್ರ ಫೌಂಡೇಷನ್ ನಿಂದ ಆರೋಗ್ಯ, ಶಿಕ್ಷಣ, ಕೌಶಲ್ಯ ತರಬೇತಿ ಸೇರಿದಂತೆ ವಿವಿಧ ಜನರ ಕಾರ್ಯಕ್ರಮಗಳನ್ನು ಕೈಗೊಳ್ಳುವ ಮೂಲಕ ಸರ್ವಜ್ಞನಗರ ಕ್ಷೇತ್ರದ ಜನರನ್ನು ಸುಶಿಕ್ಷತರು, ಆರೋಗ್ಯವಂತರು ಮತ್ತು ಕೌಶಲ್ಯವಂತರನ್ನಾಗಿ ಮಾಡಿ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಕಾರ್ಯಕ್ರಮಗಳನ್ನು ರೂಪಿಸಲಾಗುತ್ತಿದೆ. ಆ ಮೂಲಕ ಸರ್ವಜ್ಞನಗರ ಕ್ಷೇತ್ರವನ್ನು ಮಾದರಿ ಕ್ಷೇತ್ರವಾಗಿ ರೂಪಿಸಲಾಗುತ್ತಿದೆ. ಅದರ ಒಂದು ಭಾಗವಾಗಿ ಕೌಶಲ್ಯ ತರಬೇತಿ ಪಡೆದವರಿಗೆ ಪ್ರಮಾಣಪತ್ರ ವಿತರಿಸಿ, ಅವರ ಭವಿಷ್ಯಕ್ಕೆ ಭದ್ರ ಬುನಾದಿ ಹಾಕಲಾಗುತ್ತಿದೆ. – ಕೆ.ಜೆ.ಜಾರ್ಜ್, ಇಂಧನ ಸಚಿವರು.

BREAKING: ಮಾ.6ಕ್ಕೆ ‘ಕರ್ನಾಟಕ ಬಜೆಟ್‌’ ಮಂಡನೆ, ದಾಖಲೆ ಹೊಸ್ತಿಲಿನಲ್ಲಿ ‘ಸಿಎಂ ಸಿದ್ದರಾಮಯ್ಯ’ | Karnataka Budget

ಗ್ರಾಮಾಭಿವೃದ್ಧಿಗೆ ವಿಬಿ-ಜಿ ರಾಮ್‌ ಜಿ ಕಾಯಿದೆ ಸಹಕಾರಿ: ಬಿಜೆಪಿ ರೈತ ಮೋರ್ಚಾ ರಾಜ್ಯ ಕಾರ್ಯದರ್ಶಿ ಅಶೋಕ್

Share. Facebook Twitter LinkedIn WhatsApp Email

Related Posts

GOOD NEWS: ಮೃತ ಕಟ್ಟಡ ಕಾರ್ಮಿಕರ ಮಕ್ಕಳಿಗೆ ಶೈಕ್ಷಣಿಕ ಸಹಾಯಧನ ಸೌಲಭ್ಯ: ರಾಜ್ಯ ಸರ್ಕಾರ ಆದೇಶ

06/03/2026 4:49 PM1 Min Read

ರಾಜ್ಯ ಬಜೆಟ್ ನಲ್ಲಿ ಆರ್ಥಿಕ ಬೆಳವಣಿಗೆ, ಕಲ್ಯಾಣ, ಮೂಲಸೌಕರ್ಯಕ್ಕೆ ಒತ್ತು- ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್

06/03/2026 4:32 PM3 Mins Read

BIG NEWS ಮಲ್ಲಿಕಾರ್ಜುನ ಮುತ್ಯಾ ವಿರುದ್ಧ ಪೋಕ್ಸೋ ಪ್ರಕರಣ : ಮಾ.9ಕ್ಕೆ ಆದೇಶ ಕಾಯ್ದಿರಿಸಿದ ಕೋರ್ಟ್

06/03/2026 4:32 PM1 Min Read
Recent News

GOOD NEWS: ಮೃತ ಕಟ್ಟಡ ಕಾರ್ಮಿಕರ ಮಕ್ಕಳಿಗೆ ಶೈಕ್ಷಣಿಕ ಸಹಾಯಧನ ಸೌಲಭ್ಯ: ರಾಜ್ಯ ಸರ್ಕಾರ ಆದೇಶ

06/03/2026 4:49 PM

BREAKING : ಇ-ಕಾಮರ್ಸ್ ದೈತ್ಯ ‘ಫ್ಲಿಪ್ ಕಾರ್ಟ್’ನಿಂದ 300 ಉದ್ಯೋಗಿಗಳು ವಜಾ

06/03/2026 4:45 PM

ರಾಜ್ಯ ಬಜೆಟ್ ನಲ್ಲಿ ಆರ್ಥಿಕ ಬೆಳವಣಿಗೆ, ಕಲ್ಯಾಣ, ಮೂಲಸೌಕರ್ಯಕ್ಕೆ ಒತ್ತು- ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್

06/03/2026 4:32 PM

BIG NEWS ಮಲ್ಲಿಕಾರ್ಜುನ ಮುತ್ಯಾ ವಿರುದ್ಧ ಪೋಕ್ಸೋ ಪ್ರಕರಣ : ಮಾ.9ಕ್ಕೆ ಆದೇಶ ಕಾಯ್ದಿರಿಸಿದ ಕೋರ್ಟ್

06/03/2026 4:32 PM
State News
KARNATAKA

GOOD NEWS: ಮೃತ ಕಟ್ಟಡ ಕಾರ್ಮಿಕರ ಮಕ್ಕಳಿಗೆ ಶೈಕ್ಷಣಿಕ ಸಹಾಯಧನ ಸೌಲಭ್ಯ: ರಾಜ್ಯ ಸರ್ಕಾರ ಆದೇಶ

By kannadanewsnow0906/03/2026 4:49 PM KARNATAKA 1 Min Read

ಬೆಂಗಳೂರು: ನೋಂದಾಯಿತ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರು ಕಟ್ಟಡ ಮತ್ತು ಇತರೆ ನಿರ್ಮಾಣ ಕಾಮಗಾರಿಗಳ ಸ್ಥಳಗಳಲ್ಲಿ ಅಪಘಾತದಿಂದ ಮೃತಪಟ್ಟರೆ…

ರಾಜ್ಯ ಬಜೆಟ್ ನಲ್ಲಿ ಆರ್ಥಿಕ ಬೆಳವಣಿಗೆ, ಕಲ್ಯಾಣ, ಮೂಲಸೌಕರ್ಯಕ್ಕೆ ಒತ್ತು- ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್

06/03/2026 4:32 PM

BIG NEWS ಮಲ್ಲಿಕಾರ್ಜುನ ಮುತ್ಯಾ ವಿರುದ್ಧ ಪೋಕ್ಸೋ ಪ್ರಕರಣ : ಮಾ.9ಕ್ಕೆ ಆದೇಶ ಕಾಯ್ದಿರಿಸಿದ ಕೋರ್ಟ್

06/03/2026 4:32 PM

ಸಿಎಂ ಸಿದ್ಧರಾಮಯ್ಯ ಬಜೆಟ್ ನಲ್ಲಿ ಖಾಲಿ ಚೊಂಬನ್ನು ಜನತೆಗೆ ನೀಡಿದ್ದಾರೆ: ವಿಪಕ್ಷ ನಾಯಕ ಆರ್.ಅಶೋಕ್

06/03/2026 4:27 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.