ಬೆಂಗಳೂರು: ರಾಜ್ಯದ ಎಲ್ಲಾ ಕೃಷಿ, ತೋಟಗಾರಿಕೆ ಮತ್ತು ಪಶು ಸಂಗೋಪನಾ ವಿಶ್ವವಿದ್ಯಾನಿಲಯಗಳ ಸ್ನಾತಕ ಪದವಿಗಳ 2025-26ನೇ ಸಾಲಿನ ಪ್ರವೇಶಾತಿ ಪ್ರಕ್ರಿಯೆಯು ಕೆಸಿಇಟಿ (ಏಅಇಖಿ) ಮೂಲಕ ದಿನಾಂಕ: 23.01.2025ರಿಂದ ಆರಂಭಿಸಿರುವುದು ಸರಿಯಷ್ಟೆ. ಮುಂದುವರೆದು, ಇದಕ್ಕೆ ಪೂರಕವಾಗಿ ನಡೆಸಲಾಗುವ ಕೃಷಿ ಕೋಟಾದಡಿಯ ಪ್ರಾಯೋಗಿಕ ಪರೀಕ್ಷೆಗೆ ಅಭ್ಯರ್ಥಿಗಳಿಂದ ದಾಖಲಾತಿಗಳನ್ನು ಆನ್‍ಲೈನ್ ಮೂಲಕ ಅಪ್‍ಲೋಡ್ ಮಾಡುವ ಮತ್ತು ಪ್ರವೇಶಾತಿಗೆ ಸಂಬಂಧಿಸಿದ ಇತರ ಎಲ್ಲಾ ಪ್ರಕ್ರಿಯೆಗಳು ಪರಿಷ್ಕøತಗೊಂಡಿದ್ದು, ಪ್ರಾಯೋಗಿಕ ಪರೀಕ್ಷೆಯನ್ನು ಏಪ್ರಿಲ್ 29 ರ ಬದಲಾಗಿ ಮೇ 09 ರಂದು ಬೆಳಗ್ಗೆ 9.00 ಗಂಟೆಗೆ ಪ್ರಾರಂಭಿಸಲಾಗುವುದು.
ಹೆಚ್ಚಿನ ಮಾಹಿತಿಗಾಗಿ ಜಾಲತಾಣ www.uasbangalore.edu.in, www.uasd.edu.in/ www.uasd.edu, www.uhsbagalkot.edu.in/uhsbagalkot.karnataka.gov.in, www.uahs.edu.in, www.uasraichur.edu.in/raichur.karnataka.gov.in www.kvafsu.edu.in, http://kea.kar.nic.in ನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.