ನವದೆಹಲಿ: ಕಚ್ಚತೀವು ದ್ವೀಪ ವಿವಾದವನ್ನ ಆಡಳಿತಾರೂಢ ಬಿಜೆಪಿ “ಮತ ಸೆಳೆಯುವ” ರೀತಿಯಲ್ಲಿ ಬಳಸಿಕೊಳ್ಳುತ್ತಿದೆ ಎಂದು ಶ್ರೀಲಂಕಾದ ಮಾಜಿ ರಾಯಭಾರಿ ಆಸ್ಟಿನ್ ಫರ್ನಾಂಡೊ ಆರೋಪಿಸಿದ್ದಾರೆ. ಇನ್ನು ಸಾರ್ವತ್ರಿಕ ಚುನಾವಣೆಯ ನಂತ್ರ ಭಾರತ ಸರ್ಕಾರವು ಹಿಂದೆ ಸರಿಯದಿದ್ದರೆ ಸಮಸ್ಯೆಗಳನ್ನ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ, ಫರ್ನಾಂಡೊ, ಭಾರತವು ಶ್ರೀಲಂಕಾದ ಕಡಲ ಅಂತರರಾಷ್ಟ್ರೀಯ ಗಡಿ ರೇಖೆಯನ್ನ ದಾಟಿದರೆ, ಅದನ್ನ “ಶ್ರೀಲಂಕಾದ ಸಾರ್ವಭೌಮತ್ವದ ಉಲ್ಲಂಘನೆ” ಎಂದು ನೋಡಲಾಗುತ್ತದೆ ಎಂದು ಹೇಳಿದರು.
ಗೋವಾ ಬಳಿ ಪಾಕಿಸ್ತಾನ ಇಂತಹ ಸಮುದ್ರ ಅತಿಕ್ರಮಣವನ್ನ ಪ್ರಸ್ತಾಪಿಸಿದರೆ, ಭಾರತ ಅದನ್ನು ಸಹಿಸುತ್ತದೆಯೇ ಎಂದು ಫರ್ನಾಂಡೊ ಕೇಳಿದರು. ಅಥವಾ ಬಂಗಾಳಕೊಲ್ಲಿಯಲ್ಲಿ ಬಾಂಗ್ಲಾದೇಶ ಈ ರೀತಿ ಮಾಡಿದರೆ, ಭಾರತದ ಪ್ರತಿಕ್ರಿಯೆ ಏನು ಎಂದು ಅವರು ಪ್ರಶ್ನಿಸಿದರು.
“ತಮಿಳುನಾಡಿನಲ್ಲಿ ಬಿಜೆಪಿಗೆ ತುಲನಾತ್ಮಕವಾಗಿ ಹೆಚ್ಚಿನ ಹಿಡಿತವಿಲ್ಲ, ಆದ್ದರಿಂದ ಇದು ಮತಗಳನ್ನ ಸೆಳೆಯುವ ಪ್ರಚೋದನೆಯನ್ನ ಹುಟ್ಟುಹಾಕಿದೆ” ಎಂದು ಭಾರತಕ್ಕೆ ಶ್ರೀಲಂಕಾದ ಮಾಜಿ ರಾಯಭಾರಿ ಹೇಳಿದರು.
“ಅವ್ರು ನನ್ನನ್ನು ಖರೀದಿಸುವಷ್ಟು ಶ್ರೀಮಂತರಲ್ಲ” : ‘ಬಿಜೆಪಿ ಸೇರ್ಪಡೆ’ ವರದಿಗೆ ‘ಪ್ರಕಾಶ್ ರಾಜ್’ ಪ್ರತಿಕ್ರಿಯೆ
ನಾನು ಸಿಎಂ ಆಗಿದ್ದಾಗ ಕೇಂದ್ರ ಸರ್ಕಾರದ ಮುಂದೆ ಕೈಚಾಚಲಿಲ್ಲ, ಸಾಲಮನ್ನಾ ಮಾಡಿದ್ದೆ – HDK