ಮುಂಬೈ : ಪಹಲ್ಗಾಮ್ ನಲ್ಲಿ ಭಯೋತ್ಪಾದಕರ ಹೇಯ ಕೃತ್ಯದಿಂದ 28 ಜನರ ಪ್ರಾಣ ಹೋಗಿದ್ದು, ದೇಶಾದ್ಯಂತ ಶೋಕದ ವಾತಾವರಣ ನಿರ್ಮಾಣ ಆಗಿದೆ. ಉಗ್ರರ ದಾಳಿಯನ್ನು ಸೆಲೆಬ್ರಿಟಿಗಳು ಕೂಡ ಖಂಡಿಸಿದ್ದಾರೆ. ನಿನ್ನೆ ನಡೆದ ಭಯೋತ್ಪಾದಕ ದಾಳಿಯಿಂದಾಗಿ ಎಲ್ಲರಲ್ಲೂ ಆತಂಕ ಮೂಡಿದೆ. ಭೂಮಿ ಮೇಲಿನ ಸ್ವರ್ಗದ ರೀತಿ ಇರುವ ಕಾಶ್ಮೀರವನ್ನು ನೋಡಲು ತೆರಳಿದ್ದ ಪ್ರವಾಸಿಗರನ್ನೇ ಗುರಿಯಾಗಿಸಿ ಉಗ್ರರು ದಾಳಿ ಮಾಡಿದ್ದಾರೆ. ಈ ಬಗ್ಗೆ ಸಲ್ಮಾನ್ ಖಾನ್ ಅವರು ಸಂತಾಪ ಸೂಚಿಸಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣ X ನಲ್ಲಿ ಖಂಡನೆ ವ್ಯಕ್ತಪಡಿಸಿದ ಅವರು, ಕಾಶ್ಮೀರ, ಭೂಮಿಯ ಮೇಲಿನ ಸ್ವರ್ಗ ನರಕವಾಗಿ ಬದಲಾಗುತ್ತಿದೆ. ಅಮಾಯಕರನ್ನು ಗುರಿಯಾಗಿಸಲಾಗುತ್ತಿದೆ, ನನ್ನ ಹೃದಯವು ಅವರ ಕುಟುಂಬಗಳಿಗೆ ಮಿಡಿಯುತ್ತಿದೆ. ‘ಏಕ್ ಭೀ ಮುಗ್ಧ ಕೋ ಮರ್ನಾ ಪುರಿ ಕೈನಾಥ ಕೋ ಮರ್ನೆ ಕೆ ಬರಾಬರ್ ಹೈ’ (ಓರ್ವ ಅಮಾಯಕನನ್ನು ಕೊಲ್ಲುವುದು ಎಂದರೆ ಇಡೀ ಜಗತ್ತನ್ನು ಕೊಂದಂತೆ) ಎಂದು ಬರೆದುಕೊಂಡಿದ್ದಾರೆ.
Kashmir,heaven on planet earth turning into hell. Innocent people being targeted, my heart goes out to their families . Ek bhi innocent ko marna puri kainath ko marne ke barabar hai
— Salman Khan (@BeingSalmanKhan) April 23, 2025