ಬೆಂಗಳೂರು: ಕಾಸರಗೋಡು ಕೂಡಲೇ ಕರ್ನಾಟಕಕ್ಕೆ ಸೇರಬೇಕು. ಈ ಬಗ್ಗೆ ಕೇಂದ್ರ ಸರ್ಕಾರ ಗಮನಹರಿಸಬೇಕು ಎಂಬುದಾಗಿ ಆಗ್ರಹಿಸಿ ನಾಳೆ ಕನ್ನಡ ಚಳುವಳಿ ವಾಟಾಳ್ ಪಕ್ಷದ ಅಧ್ಯಕ್ಷರಾದಂತ ವಾಟಾಳ್ ನಾಗರಾಜ್ ಅವರ ನೇತೃತ್ವದಲ್ಲಿ ರಾಜಭವನ ಮುತ್ತಿಗೆ ಹಾಕಲಾಗುತ್ತಿದೆ.
ಈ ಕುರಿತಂತೆ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿರುವಂತ ಅವರು, ಕಾಸರಗೋಡು ಕೂಡಲೇ ಕರ್ನಾಟಕಕ್ಕೆ ಸೇರಬೇಕು. ಕೇಂದ್ರ ಸರ್ಕಾರ ಗಮನಹರಿಸಬೇಕು. ಕಾಸರಗೋಡಿನಲ್ಲಿ ಕನ್ನಡ ಶಾಲಾ ಮಕ್ಕಳ ಮೇಲೆ ಮಲೆಯಾಳಿ ದಬ್ಬಾಳಿಕೆ ಸರಿಯಲ್ಲ ಎಂದಿದ್ದಾರೆ.
ಕರ್ನಾಟಕದಲ್ಲಿ ಪರಭಾಷೆಯವರ ದಬ್ಬಾಳಿಕೆ ಅತಿಯಾಗಿದೆ. ಹೊರನಾಡು ಕನ್ನಡಿಗರ ಬಗ್ಗೆ ಸರ್ಕಾರ ತೀವ್ರ ಗಮನ ಹರಿಸಬೇಕಾಗಿದೆ. ಹೊರನಾಡ ಕನ್ನಡಿಗರು ಕಣ್ಣೀರಿನಲ್ಲಿ ಬದುಕುತ್ತಿದ್ದಾರೆ. ಮಹಾಜನ್ ವರದಿ ಜಾರಿಯಾಗಬೇಕು. ಕಾಸರಗೋಡು, ಸೊಲ್ಲಾಪುರ ಕರ್ನಾಟಕಕ್ಕೆ ಸೇರಬೇಕೆಂದು ಸ್ಪಷ್ಟವಾಗಿ ನೇರವಾಗಿ ಹೇಳಿದ್ದಾರೆ. ಸರ್ಕಾರ ಈ ಬಗ್ಗೆ ತೀವ್ರ ಗಮನಹರಿಸಬೇಕು ಎಂದು ವಾಟಾಳ್ ನಾಗರಾಜ್ ತಿಳಿಸಿದ್ದಾರೆ.
ಕಾಸರಗೋಡಿನಲ್ಲಿ ಕನ್ನಡ ಶಾಲಾ ಮಕ್ಕಳಿಗೆ ಮಲೆಯಾಳಿ ಭಾಷೆಯನ್ನು ಹೇರುತ್ತಿರುವುದನ್ನು ಖಂಡಿಸಿ ದಿನಾಂಕ 12-01-2026ರ ಸೋಮವಾರದಂದು ಮಧ್ಯಾಹ್ನ 12.30 ಗಂಟೆಗೆ ಕನ್ನಡ ಚಳುವಳಿ ವಾಟಾಳ್ ಪಕ್ಷದಿಂದ ರಾಜಭವನಕ್ಕೆ ಮುತ್ತಿಗೆ ಹಾಕೋದಾಗಿ ಹೇಳಿದ್ದಾರೆ.
ರಾಜ್ಯದ `ಪಡಿತರ ಚೀಟಿದಾರರೇ’ ಗಮನಿಸಿ : ‘ರೇಷನ್ ಕಾರ್ಡ್’ನಲ್ಲಿ ಹೆಸರು ಸೇರ್ಪಡೆ, ತಿದ್ದುಪಡಿಗೆ ಮತ್ತೆ ಅವಕಾಶ.!
ಈಗ ಗ್ರಾಮ ಪಂಚಾಯ್ತಿಯಲ್ಲೇ ದೊರೆಯಲಿದೆ ’11ಇ ನಕ್ಷೆ’ ಸೇರಿದಂತೆ ಈ ಭೂ ದಾಖಲೆಗಳು: ಇಷ್ಟು ಶುಲ್ಕ ನಿಗದಿ








