ಕಾರವಾರ: ಸೀಬರ್ಡ್ ನಿರಾಶ್ರಿತ ಮಹಿಳೆಗೆ ಪರಿಹಾರ ನೀಡದೆ ಸತಾಯಿಸುತ್ತಿದ್ದರು. ಈ ಹಿನ್ನೆಲೆಯಲ್ಲಿ ಉತ್ತರ ಕನ್ನಡ ಜಿಲ್ಲೆ ಕಾರವಾರ ನ್ಯಾಯಾಲಯ ಇದೀಗ ಸರ್ಕಾರಿ ಕಚೇರಿಯ ಚರಾಸ್ತಿ ಜಪ್ತಿ ಮಾಡಲು ಆದೇಶ ಹೊರಡಿಸಿದೆ.
BIG BREAKI NEWS: ಗುಂಡ್ಲುಪೇಟೆ ʼRTOʼ ಚೆಕ್ ಪೋಸ್ಟ್ ಮೇಲೆ ಲೋಕಾಯುಕ್ತ ದಾಳಿ; 94,950 ರೂ. ಹಣ ಪತ್ತೆ
ಇಂದು ವಿಶೇಷ ಭೂ ಸ್ವಾಧೀನ ಕಚೇರಿಯ ಚರಾಸ್ತಿ ಜಪ್ತಿ ಮಾಡಲು ಇಂದು ಕೋರ್ಟ್ ಆದೇಶಿಸಿದೆ. ನ್ಯಾಯಲಯದ ತೀರ್ಪಿನಂತೆ ಕಚೇರಿಯಲ್ಲಿದ್ದ ಟೇಬಲ್, ಚೇರ್ಗಳನ್ನು ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.
ಇನ್ನು ಈ ಬಗ್ಗೆ ವಕೀಲ ಕೆ.ಆರ್.ದೇಶಾಯಿ ಪ್ರತಿಕ್ರಿಯೆ ನೀಡಿ, ಹೈಕೋರ್ಟ್ ಮತ್ತು ಸುಪ್ರೀಂಕೋಟ್೯ ಆದೇಶದ ಪ್ರಕಾರ ಪರಿಹಾರ ಹಣದಲ್ಲಿ ಯಾವುದೇ ಡಿಡೆಕ್ಷನ್ ಮಾಡುವಂತಿಲ್ಲ ಎನ್ನುವುದಿದೆ. ಆದರೆ ಕಾನೂನು ಬಾಹಿರವಾಗಿ ಹಣ ಡಿಡಕ್ಷನ್ ಮಾಡಿದೆ. ಅಲ್ಲದೇ ಡಿಡಕ್ಷನ್ ಹಣ ಮರುಪಾವತಿ ಮಾಡದೇ ಸರ್ಕಾರ ನಿರ್ಲಕ್ಷ ಮಾಡಿದೆ. ಇದರಿಂದ ಇಂದು ಕಚೇರಿಯ ಚರಾಸ್ತಿ ಜಪ್ತಿ ಮಾಡುವಂತೆ ಕೋರ್ಟ್ ಆದೇಶಿಸಿದೆ ಎಂದರು.