ಬೆಂಗಳೂರು : ಇತ್ತೀಚಿಗೆ ರಾಜಧಾನಿ ಬೆಂಗಳೂರಿನಲ್ಲಿ ಕನ್ನಡಿಗರ ಮೇಲೆ ಬೇರೆ ರಾಜ್ಯದವರ ದಬ್ಬಾಳಿಕೆ, ದೌರ್ಜನ್ಯ ಹೆಚ್ಚಾಗುತ್ತಿದೆ.ಕಳೆದ ಕೆಲವು ದಿನಗಳ ಹಿಂದೆ ಉತ್ತರ ಪ್ರದೇಶ ಮೂಲದ ಕಾರ್ಮಿಕರು ಕನ್ನಡ ಮಾತನಾಡಿದಕ್ಕೆ ಕನ್ನಡಿಗನ ಮೇಲೆ ಹಲ್ಲೆ ಮಾಡಿದ್ದರು. ಇದೀಗ ಉತ್ತರ ಭಾರತದವರು ಇಲ್ಲದಿದ್ರೆ ಬೆಂಗಳೂರು ಖಾಲಿಯಾಗುತ್ತೆ ಎಂಬ ಮಹಿಳೆಗೆ ಕರವೇ ಅಧ್ಯಕ್ಷ ನಾರಾಯಣಗೌಡ ಖಡಕ್ ಎಚ್ಚರಿಕೆ ಕೊಟ್ಟಿದ್ದಾರೆ.
ಉತ್ತರ ಭಾರತದವರು ಇಲ್ಲದಿದ್ರೆ ಬೆಂಗಳೂರು ಖಾಲಿಯಾಗುತ್ತೆ ಎಂಬ ಮಹಿಳೆಯೊಬ್ಬಳ ವಿಡಿಯೋ ವೈರಲ್ ಆಗಿದ್ದು, ಮಹಿಳೆ ಮಾತು ಕೇಳಿ ಕನ್ನಡಿಗರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಈ ಹಿನ್ನಲೆ ಮಾತನಾಡಿದ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ನಾರಾಯಣಗೌಡ, ‘ಕರ್ನಾಟಕ ಖಾಲಿ ಆಗೋದಿಲ್ಲ, ಬದಲಾಗಿ ಕ್ಲೀನ್ ಆಗುತ್ತದೆ. ಇರೋದಾದ್ರೆ ಸುಮ್ನೀರಿ, ಇಲ್ಲದಿದ್ರೆ ಮೂಟೆ ಕಟ್ಕೋಂಡು ಹೊರಡಿ ಎಂದು ಉತ್ತರ ಭಾರತ ಮೂಲದ ಮಹಿಳೆಗೆ ಟಿ.ಎ.ನಾರಾಯಣಗೌಡ ಖಡಕ್ ಎಚ್ಚರಿಕೆ ಕೊಟ್ಟಿದ್ದಾರೆ.
ಯುವತಿ ಹೇಳಿದ್ದೇನು?
ಉತ್ತರ ಭಾರತದವರಾದ ನಾವೂ ಬೆಂಗಳೂರನ್ನು ಬಿಟ್ಟು ಹೋದ್ರೆ ನಿಮ್ಮ ಸಿಟಿ ಫುಲ್ ಖಾಲಿ ಆಗುತ್ತದೆ. ಇದಕ್ಕೂ ಮೊದಲು ಬೆಂಗಳೂರಿನ ಪಿಜಿಗಳು ಫುಲ್ ಖಾಲಿ ಆಗುತ್ತವೆ. ಕೋರಮಂಗಲ ಕ್ಲಬ್ ಗಳು ಖಾಲಿಯಾಗುತ್ತವೆ ಕಣ್ರೋ. ಕ್ಲಬ್ ಗಳಲ್ಲಿ ಡ್ಯಾನ್ಸ್ ಮಾಡಲು ಹುಡುಗಿಯರೇ ಇರುವುದಿಲ್ಲ. ಯೋಚನೆ ಮಾಡಿ ನಮ್ಮ ಬಗ್ಗೆ ಮಾತನಾಡಿ ಎಂದು ಹೇಳಿರುವ ವಿಡಿಯೋಗೆ ಕನ್ನಡಿಗರು ಆಕ್ರೋಶಗೊಂಡಿದ್ದಾರೆ. ಈ ಯುವತಿಯ ವಿರುದ್ಧ ಕನ್ನಡದ ನಟ-ನಟಿಯರು ಕೆಂಡಕಾರಿದ್ದು, ಮೊದಲು ಆ ಯುವತಿಗೆ ರಾಜ್ಯದಿಂದ ಹೊರಗೆ ಹೋಗಲು ಹೇಳಿ ಎನ್ನುವ ಮಾತು ಶುರುವಾಗಿದೆ.
So these northies are calling themselves as just bar/club dancers in Bengaluru 😭
ತಿರ್ಬೋಕಿಗಳು😂pic.twitter.com/1skCEBFZ2S— Rekha 🌸 (@detached_98) September 21, 2024