ರಾಯಚೂರು: ಜಿಲ್ಲೆಯ ಸಿರವಾರ ತಾಲೂಕು ಹಳ್ಳಿಹೊಸೂರು ಗ್ರಾಮದ ಘನ ಗುರು ಬೀರಲಿಂಗೇಶ್ವರ ಜಾತ್ರೆ ಅದ್ಧೂರಿಯಾಗಿ ನಡೆಯಿತು. ಈ ವೇಳೆ ಮುಂದಿನ ಮಳೆ, ಬೆಳೆ ಬಗ್ಗೆ ಕಾರಣಿಕ ಭವಿಷ್ಯ ನುಡಿದಿದ್ದಾರೆ.
BIG NEWS: ತನ್ನ ವಿಚ್ಛೇದಿತ ಪತ್ನಿ ಮತ್ತು ಅಪ್ರಾಪ್ತ ಮಕ್ಕಳಿಗೆ ಜೀವನಾಂಶ ನೀಡುವುದು ಗಂಡನ ಕರ್ತವ್ಯ: ಸುಪ್ರೀಂ ಕೋರ್ಟ್
ಅರ್ಚಕರಾದ ಬೀರಪ್ಪ ಪೂಜಾರಿ ‘ಮುಂಗಾರಿಗೆ ತುರ್ತು ಹುಡಿ ಕಟ್ಯಾನು ಹಿಂಗಾರಿಗೆ ಮುತ್ತು ಹೊಳೆದಿತು ಪಕ್ಷಿ ಕಲಕಲ ಮಾಡಿತು’ ಎಂದು ಕಾರಣಿಕ ನುಡಿದರು.ಜಾತ್ರೆಗೆ ಸೇರಿದ್ದ ಸಾವಿರಾರು ಭಕ್ತರು ‘ಹೋ’ ಎಂದು ದೊಡ್ಡ ಧ್ವನಿ ಮಾಡುತ್ತಾ ಕಾರಣಿಕವನ್ನು ಸ್ವಾಗತಿಸಿದರು.
ಇನ್ನು ನಿನ್ನೆ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನಲ್ಲೂ ಸಹ ಬೀರೂರು ಮೈಲಾರಲಿಂಗ ಸ್ವಾಮಿಯ ಕಾರಣಿಕ ನಡೆಯಿತು. ವಿಜಯದಶಮಿ ಮಾರನೇ ದಿನ ನುಡಿಯುವ ಕಾರಣಿಕವನ್ನು ಜನರು ಆಸ್ಥೆಯಿಂದ ನಂಬುತ್ತಾರೆ. ನಸುಕಿನಲ್ಲಿ ಬೆಣ್ಣೆ ಮೆತ್ತಿದ್ದ ಬಿಲ್ಲನ್ನು ಏರಿದ ಪೂಜಾರಿ ‘ಭೂಮಿಗೆ ವರುಣ ಸಿಂಚನವಾಯಿತು, ಕುರುಪಾಂಡವರ ಕಾದಾಡಿದರು, ಧರ್ಮದ ಜ್ಯೋತಿ ಬೆಳಗಿದರು’ ಎಂದು ಕಾರಣಿಕ ನುಡಿದರು.