ಬೆಂಗಳೂರು : ಅಪ್ಪುಗೆ ‘ಕರ್ನಾಟಕ ರತ್ನ’ ಪ್ರಶಸ್ತಿ ಪ್ರದಾನ ಕಾರ್ಯಕ್ರಮಕ್ಕೆ ಆಗಮಿಸಿದ ಸೂಪರ್ ಸ್ಟಾರ್ ರಜನಿಕಾಂತ್ ಹಾಗೂ ನಟ ಜ್ಯೂ.ಎನ್.ಟಿ.ಆರ್ ಗೆ ಸಿಎಂ ಬೊಮ್ಮಾಯಿ ಧನ್ಯವಾದ ತಿಳಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿದ ಸಿಎಂ ಬೊಮ್ಮಾಯಿ ನಮ್ಮ ಪ್ರೀತಿಯ ಕರೆಗೆ ಓಗೊಟ್ಟು, ದಿ. ಪುನೀತ್ ರಾಜ್ ಕುಮಾರ್ ರವರಿಗೆ “ಕರ್ನಾಟಕ ರತ್ನ” ಪ್ರಶಸ್ತಿ ಪ್ರದಾನ ಮಾಡಲು ಕರ್ನಾಟಕ್ಕೆ ಆಗಮಿಸಿ, ಕನ್ನಡದಲ್ಲಿಯೇ ಮಾತನಾಡಿ ತಮ್ಮ ಕನ್ನಡ ಪ್ರೀತಿ ತೋರಿದ ಮಹಾನ ನಟರಾದ ಶ್ರೀ ರಜನಿಕಾಂತ್ ಹಾಗೂ ಶ್ರೀ ಜೂನಿಯರ್ ಎನ್.ಟಿ.ಆರ್. ರವರಿಗೆ ನನ್ನ ಹೃದಯಾಂತರಾಳದಿಂದ ಧನ್ಯವಾದಗಳು ಎಂದು ಟ್ವೀಟ್ ಮಾಡಿದ್ದಾರೆ.
ಇಂದು ನಟ ಪುನೀತ್ ರಾಜ್ ಕುಮಾರ್ ಗೆ ಮರಣೋತ್ತರ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಮಾಡಲಾಯಿತು. ಈ ವೇಳೆ ಪ್ರಶಸ್ತಿಯನ್ನು ಪುನೀತ್ ರಾಜ್ ಕುಮಾರ್ ಅವರ ಪತ್ನಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರಿಗೆ ನೀಡಿ ಗೌರವಿಸಲಾಯಿತು.
ಪುನೀತ್ ರಾಜ್ ಕುಮಾರ್ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ನೀಡಿದ್ದಕ್ಕಾಗಿ ಪುನೀತ್ ಪತ್ನಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಸರಕಾರಕ್ಕೆ ಕೃತಜ್ಞತೆ ಸಲ್ಲಿಸಿದರು. ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಅವರು ನಮ್ಮ ಕುಟುಂಬಕ್ಕೆ ಆತ್ಮೀಯರು. ಅವರು ಮತ್ತು ಅವರು ಸರಕಾರ ಪುನೀತ್ ಅವರಿಗಾಗಿ ಸಾಕಷ್ಟು ಕೆಲಸ ಮಾಡಿದೆ. ಹಾಗಾಗಿ ಎಲ್ಲರಿಗೂ ನಮ್ಮ ಕುಟುಂಬದ ಪರವಾಗಿ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು. ಪುನೀತ್ ಪರವಾಗಿ ಪತ್ನಿ ಅಶ್ವಿನಿ ಪುನೀತ್ ರಾಜ್ ಕುಮಾರ್ (Ashwini Rajkumar ) ಈ ಪ್ರಶಸ್ತಿಯನ್ನು ಸ್ವೀಕರಿಸಿ, ಭಾವುಕರಾದರು.
ನಮ್ಮ ಪ್ರೀತಿಯ ಕರೆಗೆ ಓಗೊಟ್ಟು, ದಿ. ಪುನೀತ್ ರಾಜ್ ಕುಮಾರ್ ರವರಿಗೆ "ಕರ್ನಾಟಕ ರತ್ನ" ಪ್ರಶಸ್ತಿ ಪ್ರದಾನ ಮಾಡಲು ಕರ್ನಾಟಕ್ಕೆ ಆಗಮಿಸಿ, ಕನ್ನಡದಲ್ಲಿಯೇ ಮಾತನಾಡಿ ತಮ್ಮ ಕನ್ನಡ ಪ್ರೀತಿ ತೋರಿದ ಮಹಾನ ನಟರಾದ ಶ್ರೀ ರಜನಿಕಾಂತ್ ಹಾಗೂ ಶ್ರೀ ಜೂನಿಯರ್ ಎನ್.ಟಿ.ಆರ್. ರವರಿಗೆ ನನ್ನ ಹೃದಯಾಂತರಾಳದಿಂದ ಧನ್ಯವಾದಗಳು. @rajinikanth @tarak9999 pic.twitter.com/9g6ExOzFb4
— Basavaraj S Bommai (@BSBommai) November 1, 2022