Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BIG NEWS : ವಾಹನ ಸವಾರರಿಗೆ ಗುಡ್ ನ್ಯೂಸ್ : ವಿಧಾನಸಭೆಯಲ್ಲಿ ನೊಂದಣಿ ತೆರಿಗೆ ಇಳಿಸುವ ತಿದ್ದುಪಡಿ ವಿಧೇಯಕ ಅಂಗೀಕಾರ!

26/03/2026 10:15 AM

ನೀರವ್ ಮೋದಿಗೆ ಬ್ರಿಟನ್ ಕೋರ್ಟ್‌ನಲ್ಲಿ ಭಾರೀ ಹಿನ್ನಡೆ: ಭಾರತಕ್ಕೆ ಹಸ್ತಾಂತರ ತಪ್ಪಿಸಿಕೊಳ್ಳುವ ಕೊನೆಯ ಪ್ರಯತ್ನವೂ ವಿಫಲ!

26/03/2026 10:13 AM

ವಿಶ್ವದ ನಂಬರ್ 1 ಲೀಡರ್ ಆಗಿ ನರೇಂದ್ರ ಮೋದಿ ಅಧಿಪತ್ಯ: ಶೇ. 68ರಷ್ಟು ರೇಟಿಂಗ್‌ನೊಂದಿಗೆ ಜಾಗತಿಕವಾಗಿ ಮೋದಿಯೇ ಬಾಸ್!

26/03/2026 10:09 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಕರ್ನಾಟಕದ ಹೆಮ್ಮೆಯ ‘ನಂದಿನಿ’ ಉತ್ತರ ಪ್ರದೇಶಕ್ಕೂ ಎಂಟ್ರಿ: ‘ಹತ್ರಾಸ್’ನಲ್ಲಿ ‘ಹಾಲು ಮಾರಾಟ’ ಆರಂಭ | Nandini Milk
KARNATAKA

ಕರ್ನಾಟಕದ ಹೆಮ್ಮೆಯ ‘ನಂದಿನಿ’ ಉತ್ತರ ಪ್ರದೇಶಕ್ಕೂ ಎಂಟ್ರಿ: ‘ಹತ್ರಾಸ್’ನಲ್ಲಿ ‘ಹಾಲು ಮಾರಾಟ’ ಆರಂಭ | Nandini Milk

By kannadanewsnow0905/03/2025 6:47 PM

ಬೆಂಗಳೂರು: ಕರ್ನಾಟಕದ ಹೆಮ್ಮೆಯ ನಂದಿನಿ ಉತ್ಪನ್ನಗಳು ದೂರದ ಉತ್ತರ ಪ್ರದೇಶಕ್ಕೂ ಕಾಲಿಟ್ಟಿದೆ. ಉತ್ತರ ಪ್ರದೇಶದ ಹತ್ರಾಸ್ ಜಿಲ್ಲೆಯಲ್ಲಿ ನಂದಿನಿ ಹಾಲಿನ ಕೋ-ಪ್ಯಾಕಿಂಗ್ ಮತ್ತು ಮಾರಾಟವನ್ನು ಪ್ರಾರಂಭಿಸಲಾಗಿದೆ.

ಈ ಕುರಿತಂತೆ ಕರ್ನಾಟಕ ಹಾಲು ಮಹಾಮಂಡಳದ ನಿರ್ದೇಶಕರು ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದು, ಹೈನೋದ್ಯಮದಲ್ಲಿ ಕರ್ನಾಟಕ ಸಹಕಾರ ಹಾಲು ಉತ್ಪಾದಕರ ಮಹಾಮಂಡಳ (ಕೆಎಂಎಫ್) ಸಂಸ್ಥೆಯು ರಾಷ್ಟ್ರದಲ್ಲಿಯೇ ಎರಡನೇಯ ದೊಡ್ಡ ಹಾಲು ಸಹಕಾರ ಸಂಸ್ಥೆಯಾಗಿದೆ. ಕೆಎಂಎಫ್ ಸಂಸ್ಥೆಯು ಸದಸ್ಯ ಜಿಲ್ಲಾ ಹಾಲು ಒಕ್ಕೂಟಗಳ ಮೂಲಕ 26 ಲಕ್ಷಕ್ಕೂ ಹೆಚ್ಚಿನ ಹೈನುಗಾರ ರೈತರಿಂದ ಹಾಲನ್ನು ಖರೀದಿಸಿ, ಸಂಸ್ಕರಿಸಿ “ಗೋವಿನಿಂದ ಗ್ರಾಹಕರವರೆಗೆ” ಎಂಬ ಶೀರ್ಷಿಕೆಯನ್ನು ಹೊತ್ತು “ನಂದಿನಿ” ಬ್ರಾಂಡ್ ಅಡಿಯಲ್ಲಿ ಉತ್ಕೃಷ್ಟ ಗುಣಮಟ್ಟದ ವಿವಿಧ ಮಾದರಿಯ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಸ್ಪರ್ಧಾತ್ಮಕ ಬೆಲೆಗಳಲ್ಲಿ ಕಳೆದ 05 ದಶಕಗಳಿಂದ ಮಾರಾಟ ಮಾಡಲಾಗುತ್ತಿದೆ ಎಂದಿದ್ದಾರೆ.

ಕೆಎಂಎಫ್ ಸಂಸ್ಥೆಯು “ನಂದಿನಿ” ಬ್ರಾಂಡ್‌ ಉತ್ಪನ್ನಗಳ ಮಾರಾಟವನ್ನು ಕರ್ನಾಟಕ ರಾಜ್ಯಕ್ಕೆ ಮಾತ್ರ ಸಿಮೀತಗೊಳಿಸದೇ ಹೊರರಾಜ್ಯ ಹಾಗೂ ಹೊರದೇಶಗಳಲ್ಲಿಯೂ ಸಹ ಮಾರಾಟ ಜಾಲ ವಿಸ್ತರಣೆಯನ್ನು ಸತತವಾಗಿ ನಡೆಯುತ್ತಾ ಬರುತ್ತಿದೆ. ಇದೇ ನಿಟ್ಟಿನಲ್ಲಿ ಇತ್ತೀಚಿಗಷ್ಟೇ ಕೆಎಂಎಫ್ ಸಂಸ್ಥೆಯು ರಾಷ್ಟ್ರ ರಾಜಧಾನಿ ‘ದೆಹಲಿ’ ಮಾರುಕಟ್ಟೆಯಲ್ಲಿ ನಂದಿನಿ ಸ್ಯಾಚೆ ಹಾಲು, ಮೊಸರು ಮತ್ತು ಮಜ್ಜಿಗೆ ಮಾರಾಟ ಪ್ರಾರಂಭಿಸಿದ್ದು, ಸದರಿ ಮಾರುಕಟ್ಟೆ ಪ್ರದೇಶಗಳ ಸುತ್ತಮುತ್ತಲಿನ ನಗರಗಳಿಗೆ ಮಾರಾಟ ಜಾಲ ವಿಸ್ತರಣೆ ಕಾರ್ಯಚಟುವಟಿಕೆಗೆ ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ.

ಪ್ರಸ್ತುತ, ದೆಹಲಿ ನಗರಕ್ಕೆ ಸಮೀಪದ ಉತ್ತರಪ್ರದೇಶ ರಾಜ್ಯದ “ಹತ್ರಾಸ್” ಜಿಲ್ಲೆಯಲ್ಲಿ ನೂತನ ಹಾಲು ಸಂಸ್ಕರಣಾ ಘಟಕವನ್ನು ಗುರುತಿಸಲಾಗಿದ್ದು, ಸದರಿ ಘಟಕದ ಸುತ್ತಮುತ್ತಲಿನ ನಗರಪ್ರದೇಶಗಳಾದ ಆಗ್ರಾ, ಮಥುರ, ಮೀರತ್, ಅಲಿಗರ್‌ (Mathura, Agra, Meerut, Alighar) ಪ್ರದೇಶಗಳಲ್ಲಿ ನಂದಿನಿ ಹಾಲು ಮಾರಾಟವನ್ನು ಪ್ರಾರಂಭಿಸುವ ಸಂಬಂಧ ಅಲ್ಲಿನ ಮಾರಾಟಗಾರರ ಸಭೆಯನ್ನು ದಿನಾಂಕ 05.03.2025 ರಂದು ಮಾನ್ಯ ವ್ಯವಸ್ಥಾಪಕ ನಿರ್ದೇಶಕರಾದ ಬಿ.ಶಿವಸ್ವಾಮಿ ಕೆ.ಎ.ಎಸ್ ರವರು ನೇರವೇರಿಸಿ, ಸದರಿ ಪ್ರದೇಶಗಳಲ್ಲಿ ದಿನಾಂಕ: 16.03.2025 ರಿಂದ ನಂದಿನಿ ಹಾಲು ಮತ್ತು ಮೊಸರು ಮಾರಾಟಕ್ಕೆ ಎಲ್ಲಾ ಪೂರಕ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಜೊತೆಗೆ ರಾಜಸ್ಥಾನದ ಜೈಪುರ್‌ನಲ್ಲಿ ಸಹ ಈ ಮಾಹೆಯಲ್ಲಿಯೇ ಹಾಲು ಮಾರಾಟ ಪ್ರಾರಂಭಿಸಲು ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಸಭೆಗೆ ತಿಳಿಸಿದರು.

ಈ ಸಭೆಯಲ್ಲಿ ಕಹಾಮದ ಹಿರಿಯ ಅಧಿಕಾರಿಗಳು ಮತ್ತು ಸ್ಥಳೀಯ ಮಾರಾಟಗಾರರು ಭಾಗವಹಿಸಿದ್ದರು.

BIG NEWS: ರಾಜ್ಯದ ಜನತೆಗೆ ಮತ್ತೊಂದು ಬಿಗ್ ಶಾಕ್: ‘ಸ್ಮಾರ್ಟ್ ಮೀಟರ್’ ದರ ಶೇ.400ರಿಂದ 800ರಷ್ಟು ಏರಿಕೆ

BREAKING NEWS: ಮಾಜಿ ಸ್ಪೀಕರ್ ರಮೇಶ್ ಕುಮಾರ್ ಗೆ ಬಿಗ್ ರಿಲೀಫ್: ಅರಣ್ಯ ಭೂಮಿ ಒತ್ತುವರಿ ಪ್ರಕರಣದ ಅರ್ಜಿ ವಜಾ

Share. Facebook Twitter LinkedIn WhatsApp Email

Related Posts

BIG NEWS : ವಾಹನ ಸವಾರರಿಗೆ ಗುಡ್ ನ್ಯೂಸ್ : ವಿಧಾನಸಭೆಯಲ್ಲಿ ನೊಂದಣಿ ತೆರಿಗೆ ಇಳಿಸುವ ತಿದ್ದುಪಡಿ ವಿಧೇಯಕ ಅಂಗೀಕಾರ!

26/03/2026 10:15 AM1 Min Read

BREAKING : ಮಕ್ಕಳಿಗೆ ಮದ್ಯ ಕೊಟ್ಟರೆ ಪಬ್, ಬಾರ್ ಗಳೇ ಹೊಣೆ : ಹೈಕೋರ್ಟ್ ಖಡಕ್ ಆದೇಶ

26/03/2026 10:03 AM1 Min Read

ALERT : ಚಿನ್ನ ಖರೀದಿಸುವ ಮುನ್ನ ಎಚ್ಚರ: ಅಸಲಿ ಮತ್ತು ನಕಲಿ ಬಂಗಾರ ಪತ್ತೆ ಹಚ್ಚುವುದು ಹೇಗೆ? ಇಲ್ಲಿದೆ ಉಪಯುಕ್ತ ಮಾಹಿತಿ

26/03/2026 9:46 AM2 Mins Read
Recent News

BIG NEWS : ವಾಹನ ಸವಾರರಿಗೆ ಗುಡ್ ನ್ಯೂಸ್ : ವಿಧಾನಸಭೆಯಲ್ಲಿ ನೊಂದಣಿ ತೆರಿಗೆ ಇಳಿಸುವ ತಿದ್ದುಪಡಿ ವಿಧೇಯಕ ಅಂಗೀಕಾರ!

26/03/2026 10:15 AM

ನೀರವ್ ಮೋದಿಗೆ ಬ್ರಿಟನ್ ಕೋರ್ಟ್‌ನಲ್ಲಿ ಭಾರೀ ಹಿನ್ನಡೆ: ಭಾರತಕ್ಕೆ ಹಸ್ತಾಂತರ ತಪ್ಪಿಸಿಕೊಳ್ಳುವ ಕೊನೆಯ ಪ್ರಯತ್ನವೂ ವಿಫಲ!

26/03/2026 10:13 AM

ವಿಶ್ವದ ನಂಬರ್ 1 ಲೀಡರ್ ಆಗಿ ನರೇಂದ್ರ ಮೋದಿ ಅಧಿಪತ್ಯ: ಶೇ. 68ರಷ್ಟು ರೇಟಿಂಗ್‌ನೊಂದಿಗೆ ಜಾಗತಿಕವಾಗಿ ಮೋದಿಯೇ ಬಾಸ್!

26/03/2026 10:09 AM

BREAKING : ಮಕ್ಕಳಿಗೆ ಮದ್ಯ ಕೊಟ್ಟರೆ ಪಬ್, ಬಾರ್ ಗಳೇ ಹೊಣೆ : ಹೈಕೋರ್ಟ್ ಖಡಕ್ ಆದೇಶ

26/03/2026 10:03 AM
State News
KARNATAKA

BIG NEWS : ವಾಹನ ಸವಾರರಿಗೆ ಗುಡ್ ನ್ಯೂಸ್ : ವಿಧಾನಸಭೆಯಲ್ಲಿ ನೊಂದಣಿ ತೆರಿಗೆ ಇಳಿಸುವ ತಿದ್ದುಪಡಿ ವಿಧೇಯಕ ಅಂಗೀಕಾರ!

By kannadanewsnow0526/03/2026 10:15 AM KARNATAKA 1 Min Read

ಬೆಂಗಳೂರು : ವಾಹನಗಳ ತೆರಿಗೆ ಪರಿಷ್ಕರಿಸುವ ಕರ್ನಾಟಕ ಮೋಟಾರು ವಾಹನಗಳ ತೆರಿಗೆ ನಿರ್ಧರಣೆ ತಿದ್ದುಪಡಿ ವಿಧೇಯಕ ವಿಧಾನಸಭೆಯಲ್ಲಿ ಬುಧವಾರ ಅಂಗೀಕಾರವಾಗಿದೆ.…

BREAKING : ಮಕ್ಕಳಿಗೆ ಮದ್ಯ ಕೊಟ್ಟರೆ ಪಬ್, ಬಾರ್ ಗಳೇ ಹೊಣೆ : ಹೈಕೋರ್ಟ್ ಖಡಕ್ ಆದೇಶ

26/03/2026 10:03 AM

ALERT : ಚಿನ್ನ ಖರೀದಿಸುವ ಮುನ್ನ ಎಚ್ಚರ: ಅಸಲಿ ಮತ್ತು ನಕಲಿ ಬಂಗಾರ ಪತ್ತೆ ಹಚ್ಚುವುದು ಹೇಗೆ? ಇಲ್ಲಿದೆ ಉಪಯುಕ್ತ ಮಾಹಿತಿ

26/03/2026 9:46 AM

BREAKING : ಬಿ.ಎಸ್. ಯಡಿಯೂರಪ್ಪ ರಾಜಕಾರಣಕ್ಕೆ 50 ವರ್ಷ : ಮೇ ತಿಂಗಳಲ್ಲಿ ಚಿತ್ರದುರ್ಗದಲ್ಲಿ ‘ಅಭಿಮಾನೋತ್ಸವ’ ಸಮಾವೇಶ!

26/03/2026 9:22 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.