ಬೆಂಗಳೂರು: ಕರ್ನಾಟಕದ ಹೆಮ್ಮೆಟ ಕೆ ಎಸ್ ಆರ್ ಟಿ ಸಿ ಗೆ ಅಂತರರಾಷ್ಟ್ರೀಯ ಮಟ್ಟದ 03 ಬ್ರಾಂಡ್ ಕೌನ್ಸಿಲ್ ರೇಟಿಂಗ್ಸ್ ಪ್ರಶಸ್ತಿ ಲಭಿಸಿದೆ. ಈ ಮೂಲಕ ಪ್ರಶಸ್ತಿಗಳ ಸರಮಾಲೆ ಕೆ ಎಸ್ ಆರ್ ಟಿ ಸಿ ಗೆ ಮುಂದುವರೆದಿದೆ.
ಈ ಕುರಿತಂತೆ ಕೆ ಎಸ್ ಆರ್ ಟಿಸಿ ಮಾಹಿತಿ ನೀಡಿದ್ದು, ನಿಗಮದ ಅಶ್ವಮೇಧ ಬ್ರ್ಯಾಂಡಿಗಾಗಿ ವರ್ಷದ ಐಕಾನಿಕ್ ಬ್ರ್ಯಾಂಡ್ ಪ್ರಶಸ್ತಿ, ಕೆಎಸ್ಆರ್ಟಿಸಿ ಆರೋಗ್ಯ ಉಪಕ್ರಮಕ್ಕಾಗಿ ವರ್ಷದ ಅತ್ಯುತ್ತಮ ಉಪಕ್ರಮ ಪ್ರಶಸ್ತಿ ಮತ್ತು ಉತ್ತಮ, ಕಾರ್ಮಿಕ ಕಲ್ಯಾಣ ಉಪಕ್ರಮಗಳಿಗಾಗಿ, ಉತ್ತಮ ಸಂಸ್ಥೆ ಪ್ರಶಸ್ತಿ ಲಭಿಸಿದೆ.
ದಿನಾಂಕ 21/03/2025 ರಂದು ಇಂಡಿಯಾ ಥಾಯ್ ಚೇಂಬರ್ ಆಫ್ ಕಾಮರ್ಸ್, ಬ್ಯಾಂಕಾಕ್, ಥೈಲ್ಯಾಂಡ್ನಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ನಿಗಮಕ್ಕೆ ಪ್ರಶಸ್ತಿ ಪ್ರಧಾನ ಮಾಡಲಾಯಿತು ಎಂದು ತಿಳಿಸಿದೆ.
ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಯಾವುದಕ್ಕೂ ಸರಿಯಾದ ಉತ್ತರ ನೀಡಿಲ್ಲ: ಆರ್.ಅಶೋಕ್
BREAKING : ನಾನು ಸೇರಿದಂತೆ ಎಲ್ಲಾ ವಿರೋಧ ಪಕ್ಷದ ನಾಯಕರ ‘ಫೋನ್ ಟ್ಯಾಪಿಂಗ್’ ಆಗ್ತಿದೆ : ಆರ್ ಅಶೋಕ್ ಸ್ಪೋಟಕ ಹೇಳಿಕೆ!