ಬೆಂಗಳೂರು: ಕರ್ನಾಟಕದ ಹೆಮ್ಮೆಯ KSRTCಗೆ ಪ್ರಶಸ್ತಿಗಳ ಸರಮಾಲೆ ಮುಂದುವರೆದಿದೆ. ಈಗಾಗಲೇ ಹಲವು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದಂತ ಕೆ ಎಸ್ ಆರ್ ಟಿಸಿ ಇದೀಗ 9 ರಾಷ್ಟ್ರ ಮಟ್ಟದ ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿದೆ.
ಈ ಕುರಿತಂತೆ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿಯನ್ನು ನಿಗಮ ಹಂಚಿಕೊಂಡಿದ್ದು, ಕೆ ಎಸ್ ಆರ್ ಟಿ ಸಿ ಗೆ 9 ರಾಷ್ಟ್ರ ಮಟ್ಟದ ಪ್ರಶಸ್ತಿಗಳನ್ನು ಪಡೆದಿದೆ. ಅವುಗಳಲ್ಲಿ 6 AdWorld Showdown ಚಿನ್ನದ ಪ್ರಶಸ್ತಿ, 2 Grow Care India ಹಾಗೂ 1 PRSI ರಾಷ್ಟ್ರೀಯ ಪ್ರಶಸ್ತಿ-2024 ಸೇರಿವೆ ಎಂದಿದೆ.
AdWorld Showdown ಪ್ರಶಸ್ತಿಗಳು ಈ ಕೆಳಗಿನ ವಿಭಾಗಗಳಲ್ಲಿ ಲಭಿಸಿರುತ್ತದೆ ಎಂದು ಹೇಳಿದೆ.
1. ಅಶ್ವಮೇಧ ಕ್ಲಾಸಿಕ್ ಬಸ್ಸುಗಳ ಪರಿಚಯ- ಪರಿಣಾಮಕಾರಿ ಸಾರ್ವಜನಿಕ ಸಂಪರ್ಕ ಉಪಕ್ರಮ
2. ಅಂಬಾರಿ ಉತ್ಸವ ಬಸ್ ಅತ್ಯುತ್ತಮ ಬ್ರಾಂಡ್ ಅನುಭವ.
3. ಅಶ್ವಮೇಧ ಕ್ಲಾಸಿಕ್ ಬಸ್ಸುಗಳು- ಅತ್ಯುತ್ತಮ ಕಾರ್ಪೊರೇಟ್ ಸಂವಹನ ಹಾಗೂ ನಿರ್ವಹಣೆ
4. ಪಲ್ಲಕ್ಕಿ ಬಸ್ಸುಗಳ -ಅತ್ಯುತ್ತಮ ಗ್ರಾಹಕ ಸ್ವೀಕೃತಿ
5. ಪ್ರತಿಷ್ಠಿತ ಬಸ್ಸು ಸೇವೆಗಳ ಬ್ರಾಂಡಿಂಗ್- ಅತ್ಯುತ್ತಮ ಸಾರ್ವಜನಿಕ ಸಂಪರ್ಕ
6. ಅಶ್ವಮೇಧ ಕ್ಲಾಸಿಕ್ ಬಸ್ಸುಗಳು- ವರ್ಷದ ಅತ್ಯುತ್ತಮ ಬ್ರ್ಯಾಂಡ್
ನಿಗಮವು ಅತ್ಯುತ್ತಮ ಪರಿಸರ ನಿರ್ವಹಣೆ ಹಾಗೂ ವಿನೂತನ ಮಾನವ ಸಂಪನ್ಮೂಲ ಯೋಜನೆಗಳ ಅನುಷ್ಟಾನಕ್ಕಾಗಿ ಗ್ರೋ ಕೇರ್ ಇಂಡಿಯಾ ಪ್ರಶಸ್ತಿ ಎರಡು ವಿಭಾಗದಲ್ಲಿ ಪಡೆದಿರುತ್ತದೆ. PRSI ರಾಷ್ಟ್ರೀಯ ಪ್ರಶಸ್ತಿಯನ್ನು ನಿಗಮಕ್ಕೆ ಕಾರ್ಪೋರೇಟ್ ಚಿತ್ರ ವಿಭಾಗದಲ್ಲಿ ಲಭಿಸಿರುತ್ತದೆ.
ನಿಗಮಕ್ಕೆ AdWorld ಪ್ರಶಸ್ತಿಗಳನ್ನು ನವದೆಹಲಿಯಲ್ಲಿ, ಗ್ರೋ ಕೇರ್ ಇಂಡಿಯಾ ಪ್ರಶಸ್ತಿಗಳನ್ನು ಗೋವಾದಲ್ಲಿ ಹಾಗೂ ಪಿ.ಆರ್.ಎಸ್.ಐ ಪ್ರಶಸ್ತಿಯನ್ನು ರಾಯಪುರದಲ್ಲಿ ಪ್ರದಾನ ಮಾಡಲಾಯಿತು ಎಂದು ತಿಳಿಸಿದೆ.
BIG NEWS: ಬೆಂಗಳೂರಲ್ಲಿ ಹೊಸ ವರ್ಷಾಚರಣೆ ಎಫೆಕ್ಟ್: MG ರಸ್ತೆ ಸುತ್ತಮುತ್ತ ’15 ಮೆಟ್ರಿಕ್ ಟನ್ ಕಸ’ ಸಂಗ್ರಹ
ಜ.5ರಂದು ಸಾಗರದಲ್ಲಿ ‘ಸಾಗರೋತ್ಸವ-2025’: ಭೂಮಣ್ಣಿ ಬುಟ್ಟಿ ಸ್ಪರ್ಧೆ, ಪವಾಡ ಬಯಲು ಕಾರ್ಯಕ್ರಮ ಆಯೋಜನೆ