ಬೆಂಗಳೂರು: ಇಂದು ಕೇಂದ್ರದಲ್ಲಿ ಮತ್ತೊಮ್ಮೆ ಮೋದಿ ಸರ್ಕಾರ ರಚನೆಯಾಗಲಿದೆ. ಮೋದಿ 3ನೇ ಬಾರಿಗೆ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಮೋದಿ ಸಂಪುಟದಲ್ಲಿ ಕರ್ನಾಟಕಕ್ಕೆ 3+2 ಸಚಿವ ಸ್ಥಾನ ನೀಡುವ ಸುಳಿವು ದೊರೆತಿದೆ.
ಹೌದು. ಈ ಬಾರಿ ಮೋದಿ ಸಂಪುಟದಲ್ಲಿ ಕರ್ನಾಟಕದಿಂದ ಐವರು ಸಚಿವರಾಗುವ ಸಾಧ್ಯೆತಗಳಿವೆ. ಮೂವರಿಗೆ ಕ್ಯಾಬಿನೆಟ್ ದರ್ಜೆ ಸಿಕ್ಕರೆ, ಇನ್ನುಳಿದಂತೆ ಇಬ್ಬರಿಗೆ ರಾಜ್ಯ ದರ್ಜೆ ಖಾತೆ ಸಿಗುವ ಸಾಧ್ಯತೆಗಳಿವೆ.
ನಿರ್ಮಲಾ ಸೀತಾರಾಮನ್(ಕರ್ನಾಟ ರಾಜ್ಯಸಭಾ ಸದಸ್ಯೆ), ಪ್ರಹ್ಲಾದ್ ಜೋಶಿ, ಎಚ್.ಡಿ.ಕುಮಾರಸ್ವಾಮಿಗೆ ಅವರಿಗೆ ಕ್ಯಾಬಿನೆಟ್ ದರ್ಜೆ ಸಚಿವ ಸ್ಥಾನ ದೊರೆಯುವ ಸಾಧ್ಯೆತೆಗಳಿವೆ, ಇನ್ನು ರಾಜ್ಯ ದರ್ಜೆ ಸಚಿವರಾಗಿ ಶೋಭಾ ಕರಂದ್ಲಾಜೆ ಮತ್ತು ತುಮಕೂರು ಸಂಸದ ಸೋಮಣ್ಣಗೆ ಅವಕಾಶ ಸಿಗುವ ನಿರೀಕ್ಷೆಗಳಿವೆ. ಆ ಬಗ್ಗೆ ಸಂಜೆ ಅಧಿಕೃತ ಮಾಹಿತಿ ಹೊರ ಬೀಳಲಿದೆ.
BREAKING : ಮೋದಿ ಸಂಪುಟದಲ್ಲಿ ಕುಮಾರಸ್ವಾಮಿಗೆ ಮಂತ್ರಿಗಿರಿ ಫಿಕ್ಸ್ : ಕೃಷಿ ಖಾತೆ ಮೇಲೆ ಕಣ್ಣಿಟ್ಟ ʻHDKʼ!