ಬೆಂಗಳೂರು: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದಲ್ಲಿ 2019-20, 2020-21, 2021-22, 2022-23ರ ಜುಲೈ ಆವೃತ್ತಿಗಳಲ್ಲಿ ಪ್ರಥಮ/ದ್ವಿತೀಯ ಸಾಲಿಗೆ ಪ್ರವೇಶ ಪಡೆದ ವಿದ್ಯಾರ್ಥಿಗಳು 2023-24ನೇ ಸಾಲಿಗೆ (ಜುಲೈ ಆವೃತ್ತಿ) ದ್ವಿತೀಯ/ತೃತೀಯ ಬಿ.ಎ.,/ಬಿ.ಕಾಂ., ಬಿ.ಎಸ್ಸಿ. (ಜನರಲ್/ ಹೋಮ್ ಸೈನ್ಸ್/ ಐಟಿ), ಬಿ.ಸಿ.ಎ., ಬಿ.ಬಿ.ಎ. ಹಾಗೂ 2021-22, 2022-23ರ ಅಂತಿಮ ಎಂ.ಎ.(ಎಂ.ಸಿ.ಜೆ)/ಎಂ.ಕಾಂ., ಎಂ.ಬಿ.ಎ., ಎಂ.ಎಸ್ಸಿ., ಕೋರ್ಸ್‍ಗಳಿಗೆ ಬೋಧನಾ ಶುಲ್ಕ ರೂ. 400/-ಗಳ ದಂಡ ಶುಲ್ಕದೊಂದಿಗೆ ವರೆಗೆ ಜನವರಿ 20ರ ಪಾವತಿಸಲು ದಿನಾಂಕವನ್ನು ವಿಸ್ತರಿಸಲಾಗಿದೆ

ವಿದ್ಯಾರ್ಥಿಗಳು ಆನ್‍ಲೈನ್ www.ksoumysuru.ac.in ಮೂಲಕ ಬೋಧನಾ ಶುಲ್ಕವನ್ನು ಪಾವತಿಸಿಕೊಂಡು, ಶುಲ್ಕ ಪಾವತಿಸಿದ ರಶೀದಿ ಮತ್ತು ಅರ್ಜಿಯನ್ನು 15 ದಿನಗಳ ಒಳಗಾಗಿ ಪ್ರವೇಶಾತಿ ಪಡೆದ ಪ್ರಾದೇಶಿಕ ಕೇಂದ್ರಕ್ಕೆ ಖುದ್ಧಾಗಿ ಭೇಟಿ ನೀಡಿ ಪ್ರವೇಶಾತಿ ಹಾಗೂ ಗುರುತಿನ ಚೀಟಿ ನವೀಕರಣ ಪ್ರಕ್ರಿಯೆಯನ್ನು ಪೂರ್ಣಗೊಳಿಸಿಕೊಳ್ಳಬೇಕು.

ಹೆಚ್ಚಿನ ವಿವರಗಳಿಗೆ ಅಧಿಕೃತ ವೆಬ್‍ಸೈಟ್ www.ksoumysuru.ac.in ಮತ್ತು ಪ್ರಾದೇಶಿಕ ನಿರ್ದೇಶಕರು, ಬೆಂಗಳೂರು ಪ್ರಾದೇಶಿಕ ಕೇಂದ್ರ-01, ಮೊದಲನೇ ಮಹಡಿ, ಸ್ಯಾಟಲೈಟ್ ಬಸ್ ನಿಲ್ದಾಣ, ಮೈಸೂರುರಸ್ತೆ, ಬಾಪೂಜಿನಗರ, ಬೆಂಗಳೂರು-26, ಕಛೇರಿ ದೂರವಾಣಿ ಸಂಖ್ಯೆ: 080-26603664 ಹಾಗೂ 98449-65515 ಅನ್ನು ಸಂಪರ್ಕಿಸಬಹುದಾಗಿದೆ ಎಂದು ಪ್ರಾದೇಶಿಕ ನಿರ್ದೇಶಕರಾದ ದಿಲೀಪ. ಡಿ. ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Share.
Exit mobile version