ಬೆಂಗಳೂರು: SIT ತಂಡ ಸಿಬಿಐ ಮೂಲಕ ಇಂಟರ್ ಪೋಲ್ ಗೆ ಮನವಿ ಮಾಡಿದರೂ ಆರೋಪಿಯ ವಿರುದ್ಧ ಬ್ಲೂ ಕಾರ್ನರ್ ನೋಟಿಸ್ ಹೊರಡಿಸಿ ಕರೆತರುವಲ್ಲಿ ಕೇಂದ್ರ ಸರ್ಕಾರ ಸಹಕರಿಸುತ್ತಿಲ್ಲವೇಕೆ? ಎಂಬುದಾಗಿ ಕರ್ನಾಟಕ ಕಾಂಗ್ರೆಸ್ ಪ್ರಶ್ನಿಸಿದೆ.

ಇಂದು ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವಂತ ಕಾಂಗ್ರೆಸ್ ಪಕ್ಷವು, ಪ್ರಜ್ವಲ್ ರೇವಣ್ಣನ ವಿರುದ್ಧ SIT ತಂಡ ಬ್ಲೂ ಕಾರ್ನರ್ ನೋಟಿಸ್ ಗೆ ಇಂಟರ್ ಪೋಲ್ ಗೆ ಮನವಿ ಮಾಡಿದೆ, ಮಾತೃಶಕ್ತಿ, ನಾರಿಶಕ್ತಿಯ ಬಗ್ಗೆ ಪುಂಖಾನುಪುಂಖವಾಗಿ ಮಾತನಾಡುವ ಕೇಂದ್ರ ಸರ್ಕಾರ ಪ್ರಜ್ವಲ್ ರೇವಣ್ಣನ ಪರ ನಿಂತಿರುವುದೇಕೆ? ಎಂದು ಕೇಳಿದೆ.

ಕೇಂದ್ರ ಸರ್ಕಾರದ ರಾಜತಾಂತ್ರಿಕ ಇಲಾಖೆ ಮನಸು ಮಾಡಿದರೆ ಆರೋಪಿಯನ್ನು ಕರೆತರಬಹುದು, ಆದರೆ ಮೋದಿ ಸರ್ಕಾರ ಈ ಬಗ್ಗೆ ಯಾವುದೇ ಕ್ರಮ ಕೈಗೊಳ್ಳದೆ ತಮ್ಮ ರೇಪಿಸ್ಟ್ ಅಭ್ಯರ್ಥಿಯ ಪರ ನಿಂತಿದೆ ಎಂಬುದಾಗಿ ಆರೋಪಿಸಿದೆ.

ಪ್ರಧಾನಿ ಮೋದಿಗೆ ಮಹಿಳೆಯರ ಹಿತಾಸಕ್ತಿ ಬೇಕಿಲ್ಲ ಎನ್ನುವುದು ಮಣಿಪುರದ ಘಟನೆಯಿಂದ ಹಿಡಿದು ಪ್ರಜ್ವಲ್ ರೇವಣ್ಣನ ಪ್ರಕರಣದವರೆಗೂ ಸಾಬೀತಾಗಿದೆ ಎಂದು ವಾಗ್ಧಾಳಿ ನಡೆಸಿದೆ.

ಹಾಸನ ಸಂಸದರಿಗೂ ನನಗೂ ಸಂಪರ್ಕವಿಲ್ಲ, ಈ ಪ್ರಕರಣಕ್ಕೂ ನನಗೂ ಸಂಬಂಧವಿಲ್ಲ- ನಿಖಿಲ್ ಕುಮಾರ್ ಸ್ಪಷ್ಟನೆ

ಹಾಸನ ಸಂಸದರಿಗೂ ನನಗೂ ಸಂಪರ್ಕವಿಲ್ಲ, ಈ ಪ್ರಕರಣಕ್ಕೂ ನನಗೂ ಸಂಬಂಧವಿಲ್ಲ- ನಿಖಿಲ್ ಕುಮಾರ್ ಸ್ಪಷ್ಟನೆ

Share.
Exit mobile version