ಬೆಂಗಳೂರು: ಹಾಸನ ಪೆನ್ ಡ್ರೈವ್ ಪ್ರಕರಣದಲ್ಲಿ ಆರೋಪಿಯಾಗಿರುವಂತ ಸಂಸದ ಪ್ರಜ್ವಲ್ ರೇವಣ್ಣ ಅವರು ಜರ್ಮನಿ, ದುಬೈ ಬಳಿಕ ಈಗ ಮತ್ತೊಂದು ದೇಶಕ್ಕೆ ಹಾರಿರೋದಾಗಿ ಹೇಳಲಾಗುತ್ತಿದೆ.

ತಮ್ಮ ವಿರುದ್ಧದ ಅಶ್ಲೀಲ ವೀಡಿಯೋ ವೈರಲ್ ಆಗುತ್ತಿದ್ದಂತೆ ಜರ್ಮನಿಗೆ ಸಂಸದ ಪ್ರಜ್ವಲ್ ರೇವಣ್ಣ ತೆರಳಿದ್ದರು. ಆ ನಂತ್ರ ದುಬೈಗೆ ಹಾರಿದ್ದರು. ಈಗ ಮತ್ತೊಂದು ದೇಶಕ್ಕೆ ಹಾರಿದ್ದಾರೆ ಎನ್ನಲಾಗುತ್ತಿದೆ. ಅವರು ಹಂಗೇರಿಯದ ಬುಡಾಪೆಸ್ಟ್ ಗೆ ತೆರಳಿ ತಂಗಿದ್ದಾರೆ ಎಂಬುದಾಗಿ ಹೇಳಲಾಗುತ್ತಿದೆ.

ಅಂದಹಾಗೇ ಈ ಎಲ್ಲಾ ಮಾಹಿತಿ ಪ್ರಜ್ವಲ್ ರೇವಣ್ಣ ಕುರಿತು ತನಿಖೆ ನಡೆಸುತ್ತಿರುವಂತ ಎಸ್ಐಟಿ ಅಧಿಕಾರಿಗಳಿಗೆ ಅವರ ಪಾಸ್ ಪೋರ್ಟ್ ಎಂಟ್ರಿ ಮಾಹಿತಿಯ ಮೇರೆಗೆ ಸುಳಿವು ಸಿಕ್ಕಿರೋದಾಗಿ ಹೇಳಲಾಗುತ್ತಿದೆ. ಪಾಸ್ ಪೋರ್ಟ್ ನಲ್ಲಿ ದಾಖಲಾಗಿರುವಂತ ಎಂಟ್ರಿಯ ಆಧಾರದ ಮೇಲೆ ಅವರೀಗ ಜರ್ಮನಿಯ ಬಳಿಕ ಹಂಗೇರಿಯಾದ ಬುಡಾಪೆಸ್ಟ್ ನಲ್ಲಿ ತಂಗಿದ್ದಾರೆ ಎನ್ನಲಾಗುತ್ತಿದೆ.

ಮತ್ತೊಂದೆಡೆ ಮಾಜಿ ಸಚಿವ ಹೆಚ್.ಡಿ ರೇವಣ್ಣ ವಿರುದ್ಧದ ಕಿಡ್ನ್ಯಾಪ್ ಪ್ರಕರಣ ಸಂಬಂಧ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ನಡೆಸುತ್ತಿದೆ. ಹೆಚ್ ಡಿ ರೇವಣ್ಣ ಪರ ವಕೀಲ ಮೂರ್ತಿ ಡಿ ನಾಯಕ್ ವಾದಿಸುತ್ತಿದ್ದರೇ, ಎಸ್ಐಟಿ ಪರವಾಗಿ ಎಸ್ ಪಿಪಿ ಜಗದೀಶ್ ತಮ್ಮ ವಾದವನ್ನು ಮಂಡಿಸುತ್ತಿದ್ದಾರೆ.

ಹಾಸನ ಸಂಸದರಿಗೂ ನನಗೂ ಸಂಪರ್ಕವಿಲ್ಲ, ಈ ಪ್ರಕರಣಕ್ಕೂ ನನಗೂ ಸಂಬಂಧವಿಲ್ಲ- ನಿಖಿಲ್ ಕುಮಾರ್ ಸ್ಪಷ್ಟನೆ

ಹಾಸನ ಸಂಸದರಿಗೂ ನನಗೂ ಸಂಪರ್ಕವಿಲ್ಲ, ಈ ಪ್ರಕರಣಕ್ಕೂ ನನಗೂ ಸಂಬಂಧವಿಲ್ಲ- ನಿಖಿಲ್ ಕುಮಾರ್ ಸ್ಪಷ್ಟನೆ

Share.
Exit mobile version