ಬೆಂಗಳೂರು: ದಿನಾಂಕ 30-03-2026ರಂದು ನಡೆಯಬೇಕಿದ್ದ ತೃತೀಯ ಭಾಷಾ ವಿಷಯವಾದಂತ ಹಿಂದಿ ಪರೀಕ್ಷೆಯನ್ನು ದಿನಾಂಕ 31-03-2026ಕ್ಕೆ ಮುಂದೂಡಿಕೆ ಮಾಡಿರುವುದಾಗಿ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯಿಂದ ತಿಳಿಸಲಾಗಿದೆ.
ಈ ಕುರಿತಂತೆ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿರುವಂತ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯ ಅಧ್ಯಕ್ಷರು, 2026ರ ಎಸ್ಎಸ್ಎಲ್ಸಿ ಪರೀಕ್ಷೆ-1ನ್ನು ದಿನಾಂಕ:18.03.2026 ರಿಂದ 02.04.2026ರವರೆಗೆ ನಡೆಸಲು ದಿನಾಂಕ:04.11.2025ರಂದು ಅಂತಿಮ ವೇಳಾಪಟ್ಟಿಯನ್ನು ಪ್ರಕಟಿಸಲಾಗಿತ್ತು, ಅದರಂತೆ ಈಗಾಗಲೇ ಪರೀಕ್ಷೆಯು ಪ್ರಾರಂಭವಾಗಿರುತ್ತದೆ. ಸದರಿ ವೇಳಾಪಟ್ಟಿಯನ್ವಯ ತೃತೀಯ ಭಾಷೆ ಪರೀಕ್ಷೆಯನ್ನು ದಿನಾಂಕ:30.03.2026ರಂದು ನಿಗಧಿಪಡಿಸಲಾಗಿತ್ತು, ಆದರೆ ಉಲ್ಲೇಖಿತ-10 ಸರ್ಕಾರದ ಆದೇಶದಲ್ಲಿ ಮಹಾವೀರ ಜಯಂತಿ ಪ್ರಯುಕ್ತ ಘೋಷಿಸಲಾಗಿರುವ ಸಾರ್ವತ್ರಿಕ ರಜಾ ದಿನವನ್ನು ದಿನಾಂಕ:31.03.2026ರ ಮಂಗಳವಾರ ಬದಲಾಗಿ ದಿನಾಂಕ:30.03.2026ರ ಸೋಮವಾರ ಎಂದು ಮಾರ್ಪಡಿಸಿ ಆದೇಶಿಲಾಗಿದೆ. ಈ ಸಂಬಂಧ ದಿನಾಂಕ 30.03.2026ರಂದು ನಿಗಧಿಪಡಿಸಲಾಗಿದ್ದ ತೃತೀಯ ಭಾಷೆ ವಿಷಯದ ಪರೀಕ್ಷೆಯನ್ನು ದಿನಾಂಕ:31.03.2026ರ ಮಂಗಳವಾರ ಈಗಾಗಲೇ ನಿಗಧಿಪಡಿಸಿರುವ ಅವಧಿಯಲ್ಲಿ ನಡೆಸಲಾಗುವುದು, ಉಳಿದ ವಿಷಯದ ಪರೀಕ್ಷೆಗಳು ವೇಳಾಪಟ್ಟಿಯಂತೆ ಯಥಾವತ್ತಾಗಿ ನಡೆಯುವುದು ಎಂದಿದ್ದಾರೆ.
ಈ ಹಿನ್ನಲೆಯಲ್ಲಿ ರಾಜ್ಯದ ಎಲ್ಲಾ ಉಪನಿರ್ದೇಶಕರು (ಆಡಳಿತ)ರವರು ತಮ್ಮ ಜಿಲ್ಲಾ ವ್ಯಾಪ್ತಿಗೆ ಒಳಪಡುವ ಜಿಲ್ಲೆ ಮತ್ತು ತಾಲ್ಲೂಕು ಖಜಾನಾಧಿಕಾರಿಗಳಿಗೆ ಸದರಿ ಮಾಹಿತಿಯನ್ನು ನೀಡಿ ತೃತೀಯ ಭಾಷೆ ಪರೀಕ್ಷೆಯ ಪ್ರಶ್ನೆಪತ್ರಿಕೆಯನ್ನು ದಿನಾಂಕ:31.03.2026ರಂದು ಪಡೆಯಲು ಕಮವಹಿಸತಕ್ಕದ್ದು, ಪುಶ್ನೆಪತ್ರಿಕೆಯ ಪ್ಯಾಕೇಟ್ ಮೇಲ್ಮಾಗದಲ್ಲಿ ಮತ್ತು ಪ್ರಶ್ನೆಪತ್ರಿಕೆಯಲ್ಲಿ ತೃತೀಯ ಭಾಷಾ ವಿಷಯದ ಪರೀಕ್ಷೆ ದಿನಾಂಕ:30.03.2026ರಂದು ಎಂದು ನಮೂದಾಗಿದ್ದು, ಸದರಿ ಪ್ರಶ್ನೆಪತ್ರಿಕೆಗಳನ್ನು ವಿತರಿಸುವ ಸಂದರ್ಭದಲ್ಲಿ ಈ ಕುರಿತು ಎಲ್ಲಾ ಪರೀಕ್ಷಾ ಕೇಂದ್ರಗಳ ಮುಖ್ಯ ಅಧೀಕ್ಷಕರು ಒಳಗೊಂಡಂತೆ ಪರೀಕ್ಷಾ ಕಾರ್ಯಕ್ಕೆ ನಿಯೋಜಿಸಿರುವ ಎಲ್ಲಾ ಅಧಿಕಾರಿಗಳು / ಸಿಬ್ಬಂದಿಗಳು / ಶಿಕ್ಷಕರುಗಳಿಗೆ ಮಾಹಿತಿ ನೀಡುವುದು. ತೃತೀಯ ಭಾಷೆ ವಿಷಯದ ಪರೀಕ್ಷೆ ದಿನಾಂಕವು ಬದಲಾಗಿರುವ ಕುರಿತು ವಿದ್ಯಾರ್ಥಿಗಳು ಮತ್ತು ಪೋಷಕರ ಗಮನಕ್ಕೆ ತರುವುದು.
ತಮ್ಮ ಜಿಲ್ಲೆಯ ಜಿಲ್ಲಾಧಿಕಾರಿಗಳಿಗೆ ಮತ್ತು ಜಿಲ್ಲಾ ಪೊಲೀಸ್ ವರಿಷ್ಕಾಧಿಕಾರಿಗಳಿಗೆ ಕೂಡಲೇ ಮನವಿ ಸಲ್ಲಿಸಿ ಪರೀಕ್ಷೆ ದಿನಾಂಕ ಬದಲಾವಣೆ ಮತ್ತು ಸದರಿ ಪರೀಕ್ಷಾ ದಿನದಂದು ಸೂಕ್ತ ಭದ್ರತೆ ನೀಡುವ ಕುರಿತು ಕ್ರಮಕೈಗೊಳ್ಳಲು ತಿಳಿಸಿದ್ದಾರೆ.

ಬಂಗಾರ ಪ್ರಿಯರಿಗೆ ಭರ್ಜರಿ ಗುಡ್ ನ್ಯೂಸ್: ಪಾತಾಳಕ್ಕೆ ಕುಸಿಯುತ್ತಿದೆ ಚಿನ್ನ-ಬೆಳ್ಳಿ ದರ!








