ಬೆಂಗಳೂರು : ನಟ ಪುನೀತ್ ರಾಜ್ ಕುಮಾರ್ ಅವರಿಗೆ ರಾಜ್ಯ ಸರ್ಕಾರದಿಂದ ನೀಡುತ್ತಿರುವ ಮರಣೋತ್ತರ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಕಾರ್ಯಕ್ರಮಕ್ಕೆ ಇನ್ನು ಸೂಪರ್ ಸ್ಟಾರ್ ತಮಿಳು ನಟ ರಜನಿಕಾಂತ್, ತೆಲಗು ನಟ ಜೂ.ಎನ್ ಟಿ ಆರ್ ವಿಶೇಷ ಅತಿಥಿಯಾಗಿ ಆಗಮಿಸಲಿದ್ದಾರೆ.
ತೆಲಗು ನಟ ಜೂ.ಎನ್ ಟಿ ಆರ್ ಮಧ್ಯಾಹ್ನ 2 ಗಂಟೆಗೆ ಬೆಂಗಳೂರಿಗೆ ಆಗಮಿಸಲಿದ್ದು, ಬಳಿಕ ಪುನೀತ್ ನಿವಾಸಕ್ಕೆ ಭೇಟಿ ನೀಡುವ ಸಾಧ್ಯತೆ ಇದೆ. ಇನ್ನು ಸೂಪರ್ ಸ್ಟಾರ್ ತಮಿಳು ನಟ ರಜನಿಕಾಂತ ಅವರು ಕೂಡ ಬೆಳಗ್ಗೆ 11.30ಕ್ಕೆ ಬೆಂಗಳೂರಿಗೆ ಆಗಮಿಸಿ ಖಾಸಗಿ ಹೋಟೆಲ್ ಗೆ ತೆರಳಲಿದ್ದಾರೆ ಎನ್ನಲಾಗಿದೆ. ಡಾ.ರಾಜ್ ಕುಟುಂಬಸ್ಥರು ಇಂದು ಸಂಜೆ 4ಕ್ಕೆ ವಿಧಾನಸೌಧದತ್ತ ಆಗಮಿಸಲಿದ್ದಾರೆ.
ಇಂದು ದಿವಂಗತ ನಟ ಪುನೀತ್ ರಾಜ್ ಕುಮಾರ್ ಅವರಿಗೆ ರಾಜ್ಯ ಸರ್ಕಾರ ಘೋಷಣೆ ಮಾಡಿದಂತ ಕರ್ನಾಟಕ ರತ್ನ ಪ್ರಶಸ್ತಿಯನ್ನು ಪ್ರದಾನ ಮಾಡಲಿದೆ. ಈ ಕಾರ್ಯಕ್ರಮಕ್ಕೆ ಆಗಮಿಸುವಂತೆ ರಾಜ್ಯ ಸರ್ಕಾರದಿಂದ ರಾಜ್ ಕುಟುಂಬಕ್ಕೆ ಪ್ರೀತಿಯ ಆಹ್ವಾನ ನೀಡಲಾಯಿತು.
ಈ ಹಿನ್ನೆಲೆ ಇಂದು ಮಧ್ಯಾಹ್ನ 2 ಗಂಟೆಗೆ ಮೆರವಣಿಗೆ ಮೂಲಕ ವಿಧಾನಸೌಧಕ್ಕೆ ಪುನೀತ್ ಅಭಿಮಾನಿಗಳು ಬರಲಿದ್ದಾರೆ. ಪ್ರೀಡಂ ಪಾರ್ಕ್ ನಿಂದ ವಿಧಾನಸೌಧದವರೆಗೆ ಪುನೀತ್ ಅಭಿಮಾನಿಗಳು ಬೃಹತ್ ಮೆರವಣಿಗೆ ನಡೆಸಲಿದ್ದಾರೆ. ಸಂಜೆ 4 ಗಂಟೆಗೆ ವಿಧಾನಸೌಧದ ಮುಂಭಾಗದಲ್ಲಿ ದಿವಂಗತ ಪುನೀತ್ ರಾಜ್ ಕುಮಾರ್ ಗೆ ಕರ್ನಾಟಕ ರತ್ನ ಪ್ರಶಸ್ತಿಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರದಾನ ಮಾಡಲಿದ್ದಾರೆ.
BIG NEWS: ನೆರೆಯ ರಾಷ್ಟ್ರ ಪಾಕ್ನಲ್ಲಿ ಭೂಕಂಪ: 4.8 ತೀವ್ರತೆ ದಾಖಲು | Earthquake in Pakistan
BIG NEWS: ನೆರೆಯ ರಾಷ್ಟ್ರ ಪಾಕ್ನಲ್ಲಿ ಭೂಕಂಪ: 4.8 ತೀವ್ರತೆ ದಾಖಲು | Earthquake in Pakistan