ಬೆಂಗಳೂರು : ಕರ್ನಾಟಕ ಲೋಕಸೇವಾ ಆಯೋಗವು ಮಹತ್ವದ ನಿರ್ಧಾರವೊಂದು ಕೈಗೊಂಡಿದ್ದು, ಇನ್ಮುಂದೆ ಭಾನುವಾರಗಳಂದು ನಡೆಯುವ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳೊಂದಿಗೆ ದಿನಾಂಕ ಘರ್ಷಣೆ ತಪ್ಪಿಸಲು ವಾರದ ದಿನಗಳಂದು ಪರೀಕ್ಷೆ ನಡೆಸಲು ಮುಂದಾಗಿದೆ.
ಹೌದು, ಲೋಕಸೇವಾ ಆಯೋಗವು ಅಧಿಸೂಚನೆ ಹೊರಡಿಸಿರುವ 7 ಪರೀಕ್ಷೆಗಳು ಮತ್ತು ಅಧಿಸೂಚನೆ ಹೊರಡಿಸಬೇಕಿರುವ 2 ಪರೀಕ್ಷೆಗಳು ಸೆರಿದಂತೆ ಒಟ್ಟು 9 ಅಧಿಸೂಚನೆಗಳ ಪರೀಕ್ಷಾ ದಿನಾಂಕಗಳನ್ನು ಪ್ರಕಟಿಸಿದೆ.
ಸೆಪ್ಟೆಂಬರ್ ನಿಮದ ಡಿಸೆಂಬರ್ ವರೆಗೆ ಒಟ್ಟು 23 ಪರೀಕ್ಷೆಗಳು ನಡೆಯಲಿದ್ದು, ಅದರಲ್ಲಿ 2 ಭಾನುವಾರ ನಿಗದಿಯಾಗಿದ್ದರೆ, ಉಳಿದ ಪರೀಕ್ಷೆಗಳು ಶನಿವಾರ ಹಾಗೂ ಇತರ ವಾರದ ದಿನಗಳಂದು ನಡೆಯಲಿದೆ.