ಬೆಂಗಳೂರು: ಕರ್ನಾಟಕದ ಬಳ್ಳಾರಿ, ಚಿತ್ರದುರ್ಗ ಮತ್ತು ತುಮಕೂರು ಜಿಲ್ಲೆಗಳ ವಾರ್ಷಿಕ ಕಬ್ಬಿಣದ ಅದಿರು ಉತ್ಪಾದನಾ ಮಿತಿಯನ್ನು ಸುಪ್ರೀಂ ಕೋರ್ಟ್ ಶುಕ್ರವಾರ ಹೆಚ್ಚಿಸಿದೆ.
ಶುಕ್ರವಾರ(ನಿನ್ನೆ) ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ ನೇತೃತ್ವದ ಪೀಠವು ಚಿತ್ರದುರ್ಗ ಮತ್ತು ತುಮಕೂರು ಜಿಲ್ಲೆಗಳಿಗೆ ವಾರ್ಷಿಕ ಕಬ್ಬಿಣದ ಅದಿರು ಉತ್ಪಾದನಾ ಮಿತಿಯನ್ನು 7 ಎಂಎಂಟಿಯಿಂದ 15 ಎಂಎಂಟಿಗೆ ಹೆಚ್ಚಿಸಿದೆ. ಬಳ್ಳಾರಿಗೆ ಈ ಮಿತಿಯನ್ನು ವರ್ಷಕ್ಕೆ 28 ಎಂಎಂಟಿಯಿಂದ 35 ಎಂಎಂಟಿಗೆ ಹೆಚ್ಚಿಸಲಾಗಿದೆ.
ಎನ್ವಿ ರಮಣ ನೇತೃತ್ವದ ಪೀಠವು ಇತರ ರಾಜ್ಯಗಳ ಮಾದರಿಯಲ್ಲಿ ಕಬ್ಬಿಣದ ಅದಿರು ಉತ್ಖನನದ ಮೇಲಿನ ಸೀಲಿಂಗ್ ಮಿತಿಗಳನ್ನು ತೆಗೆದುಹಾಕಲು ಕೋರಿ ಸಲ್ಲಿಸಿದ ಅರ್ಜಿಗಳ ಮೇಲೆ ಈ ಆದೇಶವನ್ನು ನೀಡಿದೆ.