ಶಿವಮೊಗ್ಗ : ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ದಿ ನಿಗಮದಡಿ 2022-23 ನೇ ಸಾಲಿಗೆ ಅನುಷ್ಟಾನಗೊಳಿಸುತ್ತಿರುವ ನೇರಸಾಲ ಯೋಜನೆ, ಉದ್ಯಮಶೀಲತೆ(ಐಎಸ್ಬಿ) ಯೋಜನೆ ಮತ್ತು ದ್ವಿಚಕ್ರ ವಾಹನ ಯೋಜನೆಗಳಡಿ ಸೌಲಭ್ಯ ಪಡೆಯಲು ಕರೆಯಲಾಗಿದ್ದ ಅರ್ಜಿ ಅವಧಿಯನ್ನು ಜನವರಿ 16 ರವರೆಗೆ ವಿಸ್ತರಿಸಲಾಗಿದೆ.
ಅರ್ಹ ಪರಿಶಿಷ್ಟ ಪಂಗಡದ ಫಲಾಪೇಕ್ಷಿಗಳು ಸೇವಾಸಿಂಧು ಪೋರ್ಟಲ್ https://sevasindhuservices.karnataka.gov.in ಮುಖಾಂತರ ಆನ್ಲೈನ್ ಅರ್ಜಿಗಳನ್ನು ಸಲ್ಲಿಸಬಹುದೆಂದು ನಿಗಮದ ಜಿಲ್ಲಾ ವ್ಯವಸ್ಥಾಪಕರು ತಿಳಿಸಿದ್ದಾರೆ.
ವಿಕಲಚೇತನ ವಿದ್ಯಾರ್ಥಿವೇತಕ್ಕೆ ಅರ್ಜಿ ಆಹ್ವಾನ
2022-23 ನೇ ಸಾಲಿಗೆ ವಿಕಲಚೇತನ ವಿದ್ಯಾರ್ಥಿವೇತನ ಯೋಜನೆಯನ್ನು ಸ್ಟೇಟ್ ಸ್ಕಾಲರ್ಶಿಪ್ ಪೋರ್ಟಲ್(ಎಸ್ಎಸ್ಪಿ) ನಲ್ಲಿ ಜಾರಿಗೊಳಿಸಿದ್ದು ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಜಿಲ್ಲಾ ವ್ಯಾಪ್ತಿಯಲ್ಲಿ 1 ರಿಂದ 10 ನೇ ತರಗತಿವರೆಗೆ(ಪ್ರಿ ಮೆಟ್ರಿಕ್) ವಿಕಲಚೇತನ ವಿದ್ಯಾರ್ಥಿಗಳು ವಿದ್ಯಾರ್ಥಿವೇತನದ ಅರ್ಜಿಗಳನ್ನು ಎಸ್ಎಸ್ಪಿ https://ssp.karnataka.gov.in ಮೂಲಕ ಮತ್ತು ಎಸ್ಎಸ್ಎಲ್ಸಿ ನಂತರದ(ಪೋಸ್ಟ್ ಮೆಟ್ರಿಕ್) ವಿದ್ಯಾರ್ಥಿಗಳು ಎಸ್ಎಸ್ಪಿ https://ssp.postmatric.karnataka.gov.in ಮೂಲಕ ಅರ್ಜಿ ಸಲ್ಲಿಸಿ ಹಾರ್ಡ್ ಕಾಪಿಯನ್ನು ಗ್ರಾಮ ಪಂಚಾಯಿತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ವಿ.ಆರ್.ಡಬ್ಲ್ಯುಗಳಿಗೆ, ನಗರ ಸ್ಥಳೀಯ ಸಂಸ್ಥೆಗಲಲ್ಲಿ ಕಾರ್ಯ ನಿರ್ವಹಿಸುತ್ತಿರುವ ಯು.ಆರ್.ಡಬ್ಲ್ಯುಗಳಿಗೆ ಹಾಗೂ ತಾಲ್ಲೂಕು ಪಂಚಾಯ್ತಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಎಂ.ಆರ್.ಡಬ್ಲ್ಯುಗಳಿಗೆ ಸಲ್ಲಿಸಬೇಕು.
ಅರ್ಜಿ ಸಲ್ಲಿಸಲು ಜನವರಿ 15 ಕಡೆಯ ದಿನ. ಅರ್ಜಿ ಸಲ್ಲಿಸುವ ವೇಳೆ ತಾಂತ್ರಿಕ ತೊಂದರೆ ಕಂಡುಬಂದಲ್ಲಿ ಸಹಾಯವಾಣಿ ಸಂಖ್ಯೆ 1902 ನ್ನು ಸಂಪರ್ಕಿಸಬಹುದು. ಹೆಚ್ಚಿನ ಮಾಹಿತಿಗೆ ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕ ಸಬಲೀಕರಣ ಇಲಾಖೆ, ಆಲ್ಕೊಳ ಸರ್ಕಲ್, ಬಿಎಸ್ಎನ್ಎಲ್ ಕಚೇರಿ ಪಕ್ಕ, ಸಾಗರ ರಸ್ತೆ, ಶಿವಮೊಗ್ಗ ದೂ.ಸಂ: 08182-295234/251676 ನ್ನು ಸಂಪರ್ಕಿಸಬಹುದೆಂದು ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಶಿಲ್ಪಾ ಎಂ ದೊಡ್ಡಮನಿ ತಿಳಿಸಿದ್ದಾರೆ.
BREAKING NEWS: ವಿಧಾನಸೌಧದಲ್ಲಿ ಅನಧಿಕೃತ 10.5 ಲಕ್ಷ ನಗದು ಪತ್ತೆ ಪ್ರಕರಣ: ವಿಚಾರಣೆಗೆ ಹಾಜರಾದ ಎಇ ಜಗದೀಶ್ ಬಂಧನ
ಬೆಂಗಳೂರು – ಮೈಸೂರು ದಶಪಥ ಹೆದ್ದಾರಿ ಫೆಬ್ರವರಿ ಅಂತ್ಯಕ್ಕೆ ಲೋಕಾರ್ಪಣೆ – ನಿತಿನ್ ಗಡ್ಕರಿ