2026 ರಲ್ಲಿ ಜರುಗಲಿರುವ ಕರ್ನಾಟಕ ವಿಧಾನ ಪರಿಷತ್ತಿನ ಪಶ್ಚಿಮ ಪದವಿಧರರ ಮತಕ್ಷೇತ್ರದ ಮತದಾರರ ಪಟ್ಟಿ ತಯಾರಿಕೆ ಆರಂಭವಾಗಲಿದ್ದು, ಅರ್ಹ ಮತದಾರರು ಸೆರ್ಪಡೆಗೆ ಅವಕಾಶವಿದೆ. ಮತದಾರರ ಪಟ್ಟಿಯು ಕ್ರಮಬದ್ಧವಾಗಿ ಮತ್ತು ನ್ಯಾಯಬದ್ಧವಾಗಿ ತಯ್ಯಾರಾಗುವಂತೆ ಮಾಡುವಲ್ಲಿ ರಾಜಕೀಯ ಪಕ್ಷಗಳು, ಸಾರ್ವಜನಿಕರು ಸಹಕಾರ ನೀಡಬೇಕೆಂದು ಪಶ್ಚಿಮ ಪದವಿಧರ ಮತಕ್ಷೇತ್ರದ ಸಹಾಯಕ ಮತದಾರರ ನೋಂದಣಾಧಿಕಾರಿ ಆಗಿರುವ ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ತಿಳಿಸಿದರು.
ಅವರು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಸಭೆ ಜರುಗಿಸಿ, ಅಧ್ಯಕ್ಷತೆ ವಹಿಸಿ, ಮಾತನಾಡಿದರು.
ಕರ್ನಾಟಕ ಪಶ್ಚಿಮ ಪದವಿಧರ ಮತಕ್ಷೇತ್ರದ ಮತದಾರರ ನೋಂದಣಾಧಿಕಾರಿ ಆಗಿರುವ ಬೆಳಗಾವಿ ವಿಭಾಗದ ಪ್ರಾದೇಶಿಕ ಆಯುಕ್ತರು ಮತದಾರರ ಪಟ್ಟಿ ತಯಾರಿಕೆ ಕುರಿತು ಸೂಚನೆಗಳನ್ನು ಹೊರಡಿಸಿದ್ದು, ಅವುಗಳ ಪ್ರತಿಯನ್ನು ಎಲ್ಲ ನೋಂದಾಯಿತ ರಾಜಕೀಯ ಪಕ್ಷಗಳ ಪ್ರತಿನಿಧಿಗಳಿಗೆ ನೀಡಲಾಗಿದೆ. ಈ ಕುರಿತು ಅರ್ಹ ಪದವಿಧರ ಮತದಾರರಲ್ಲಿ ಜಾಗೃತಿ ಮೂಡಿಸಿ, ಅವರು ನಿಯಮಾನುಸಾರ ಸದರಿ ಮತದಾರರ ಪಟ್ಟಿಗೆ ಸೆರ್ಪಡೆ ಆಗುವಂತೆ ಮಾಹಿತಿ ನೀಡಬೇಕು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಮತದಾರರ ನೋಂದಣಾಧಿಕಾರಿಗಳ ಸೂಚನೆಯಂತೆ, ಮತದಾರರ ಪಟ್ಟಿ ಸೆರ್ಪಡೆಗೆ ಅಗತ್ಯ ದಾಖಲೆಗಳೊಂದಿಗೆ ಸಲ್ಲಿಸುವ ನಮೂನೆಯನ್ನು ಈಗಾಗಲೇ ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ಹಾಗೂ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ನಿಯೋಜಿಸಿರುವ ಸಹಾಯಕ ಮತದಾರರ ನೋಂದಣಾಧಿಕಾರಿಗಳ ಕಚೇರಿಗಳಲ್ಲಿ ಲಭ್ಯಗೊಳಿಸಲಾಗುತ್ತದೆ. ಮತದಾರರ ಪಟ್ಟಿ ತಯಾರಿಕೆ ನಂತರ ನವೆಂಬರ 25, 2025 ರಂದು ಕರ್ನಾಟಕ ಪಶ್ಚಿಮ ಪದವಿಧರ ಮತಕ್ಷೇತ್ರದ ಮತದಾರರ ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸಲಾಗುತ್ತದೆ. ಮತ್ತು ನವೆಂಬರ 25, 2025 ರಿಂದ ಡಿಸೆಂಬರ 10, 2025 ವರೆಗೆ ಆಕ್ಷೇಪಣೆ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.
ಸ್ವೀಕೃತ ಆಕ್ಷೇಪಣೆಗಳನ್ನು ಡಿಸೆಂಬರ 25, 2025 ರೊಳಗೆ ವಿಲೇವಾರಿ ಮಾಡಲಾಗುತ್ತದೆ. ಮತ್ತು ಡಿಸೆಂಬರ 30, 2025 ರಂದು ಕರ್ನಾಟಕ ಪಶ್ಚಿಮ ಪದವಿಧರ ಮತಕ್ಷೇತ್ರದ ಮತದಾರರ ಅಂತಿಮ ಮತದಾರರ ಪಟ್ಟಿ ಪ್ರಕಟವಾಗುತ್ತದೆ ಎಂದು ಪಶ್ಚಿಮ ಪದವಿಧರ ಮತಕ್ಷೇತ್ರದ ಸಹಾಯಕ ಮತದಾರರ ನೋಂದಣಾಧಿಕಾರಿ ಆಗಿರುವ ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ತಿಳಿಸಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ., ಭಾರತೀಯ ಜನತಾ ಪಕ್ಷದ ಪ್ರತಿನಿಧಿ ಆರ್. ಎಂ.ಕಲ್ಯಾಣಶೆಟ್ಟಿ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪ್ರತಿನಿಧಿ ಪ್ರಕಾಶ ಹಳಿಯಾಳ, ಜನತಾದಳ (ಜಾ) ಮಹಾನಗರ ಅಧ್ಯಕ್ಷ ಗುರುರಾಜ ಹುಣಸಿಮರದ, ದೇವರಾಜ ಕಂಬಳಿ, ಬಹುಜನ ಸಮಾಜ ಪಕ್ಷ ಪ್ರತಿನಿಧಿ ನಿಂಗಪ್ಪ, ಆಮ್ ಆದ್ಮಿ ಪಕ್ಷದ ಪ್ರತಿನಿಧಿ ಅವಿನಾಶ, ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳ ಪ್ರಮುಖರು ಭಾಗವಹಿಸಿದ್ದರು.
ಜಿಲ್ಲೆಯ ಸಹಾಯಕ ಮತದಾರರ ನೋಂದಣಾಧಿಕಾರಿಗಳು: ಕರ್ನಾಟಕ ಪಶ್ಚಿಮ ಪದವಿಧರ ಮತಕ್ಷೇತ್ರದ ಮತದಾರರ ಸಹಾಯಕ ಮತದಾರರ ನೋಂದಣಾಧಿಕಾರಿಗಳಾಗಿ ಧಾರವಾಡ ಜಿಲ್ಲೆಗೆ ಜಿಲ್ಲಾಧಿಕಾರಿ ದಿವ್ಯ ಪ್ರಭು (0836-2233840) ಅವರು ಹಾಗೂ ನವಲಗುಂದ, ಅಣ್ಣಿಗೇರಿ ಮತ್ತು ಹುಬ್ಬಳ್ಳಿ ತಾಲ್ಲೂಕಿನ ಶಿರಗುಪ್ಪಿ ಹೊಬಳಿ ವ್ಯಾಪ್ತಿಗೆ ವಿಶೇಷ ಭೂಸ್ವಾಧೀನಾಧಿಕಾರಿ ದೇವರಾಜ ಆರ್. (9901075459), ಕುಂದಗೋಳ ತಾಲ್ಲೂಕು ಮತ್ತು ಹುಬ್ಬಳ್ಳಿ ತಾಲ್ಲೂಕಿನ ಛಬ್ಬಿ ಹೊಬಳಿ ವ್ಯಾಪ್ತಿಗೆ ಜಿಲ್ಲಾ ಪಂಚಾಯತ ಉಪ ಕಾರ್ಯದರ್ಶಿ ಮಲ್ಲಪ್ಪ ತೋದಲಬಾಗಿ (9480864002).
ಹುಬ್ಬಳ್ಳಿ ತಾಲ್ಲೂಕು ಮತ್ತು ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ವಾರ್ಡ್ ನಂ. 01 ರಿಂದ 09 ರವರಿಗೆ ಉಪವಿಭಾಗಾಧಿಕಾರಿ ಶಾಲಂ ಹುಸೇನ (8197375687), ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ವಾರ್ಡ್ ನಂ. 60 ರಿಂದ 82 ರವರಿಗೆ ವಿಶೇಷ ಭೂಸ್ವಾಧೀನಾಧಿಕಾರಿ ಕವಿತಾ ಯೋಗಪ್ಪನವರ (9663312844), ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ವಾರ್ಡ್ ನಂ. 35 ರಿಂದ 59 ರವರಿಗೆ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಆಯುಕ್ತ ಡಾ. ರುದೇಶ ಘಾಳಿ (8277911530), ಹು-ಧಾ ಮಹಾನಗರ ಪಾಲಿಕೆ ವಾರ್ಡ್ ನಂ. 10 ರಿಂದ 34 ರವರಿಗೆ ವಿಶೇಷ ಭೂಸ್ವಾಧೀನಾಧಿಕಾರಿ ಇಸ್ಮಾಯಿಲ್ ಸಾಹೇಬ ಶಿರಹಟ್ಟಿ (9986468381), ಕಲಘಟಗಿ, ಅಳ್ಳಾವರ ಮತ್ತು ಧಾರವಾಡ ತಾಲ್ಲೂಕಿನ ಧಾರವಾಡ ಹೋಬಳಿ ವ್ಯಾಪ್ತಿಗೆ ಹೆಸ್ಕಾಂ ಪ್ರಧಾನ ವ್ಯವಸ್ಥಾಪಕ ಮೊಹಮ್ಮದ ಖಿಝರ್ (9164055006), ನವಲಗುಂದ ತಾಲ್ಲೂಕ ವ್ಯಾಪ್ತಿಗೆ ನವಲಗುಂದ ತಹಶೀಲ್ದಾರ ಎಸ್.ಪಿ.ಸಾವಕಾರ (9845297783), ಅಣ್ಣಿಗೇರಿ ತಾಲ್ಲೂಕ ವ್ಯಾಪ್ತಿಗೆ ಅಣ್ಣಿಗೇರಿ ತಹಶೀಲ್ದಾರ ಎಂ.ಜಿ.ದಾಸಪ್ಪನವರ (9448337063), ಹುಬ್ಬಳ್ಳಿ ಗ್ರಾಮೀಣ ತಾಲ್ಲೂಕ ವ್ಯಾಪ್ತಿಗೆ ಹುಬ್ಬಳ್ಳಿ ಗ್ರಾಮೀಣ ತಹಶೀಲ್ದಾರ ಜೆ.ಬಿ. ಮಜ್ಜಗಿ (9620972112). ಕುಂದಗೋಳ ತಾಲ್ಲೂಕ ವ್ಯಾಪ್ತಿಗೆ ಕುಂದಗೋಳ ತಹಶೀಲ್ದಾರ ರಾಜು ಮಾವರಕರ (9740218079), ಧಾರವಾಡ ತಾಲೂಕು ಮತ್ತು ಹು-ಧಾ ಮಹಾನಗರ ಪಾಲಿಕೆ ವಾರ್ಡ್ ನಂ. 01 ರಿಂದ 09 ರವರಿಗೆ ಧಾರವಾಡ ತಾಲ್ಲೂಕ ವ್ಯಾಪ್ತಿಗೆ ಧಾರವಾಡ ತಹಶೀಲ್ದಾರ ಡಾ. ದೊಡ್ಡಪ್ಪ ಹೂಗಾರ (7022294555), ಹು-ಧಾ ಮಹಾನಗರ ಪಾಲಿಕೆ ವಾರ್ಡ್ ನಂ. 60 ರಿಂದ 82 ರವರಿಗೆ ಮತ್ತು ಹುಬ್ಬಳ್ಳಿ ನಗರ ತಾಲ್ಲೂಕ ವ್ಯಾಪ್ತಿಗೆ ಹುಬ್ಬಳ್ಳಿ ನಗರ ತಹಶೀಲ್ದಾರ ಮಹೇಶ ಘಸ್ತೆ (7676711656), ಹು-ಧಾ ಮಹಾನಗರ ಪಾಲಿಕೆ ವಾರ್ಡ್ ನಂ. 35 ರಿಂದ 59 ರವರಿಗೆ ಹು-ಧಾ ಮಹಾನಗರ ಪಾಲಿಕೆಯ ಪರಿಷತ್ ಕಾರ್ಯದರ್ಶಿ (ಪ್ರ) ಉಮೇಶ ಸವಣೂರ (9844271166), ಹು-ಧಾ ಮಹಾನಗರ ಪಾಲಿಕೆ ವಾರ್ಡ್ ನಂ. 10 ರಿಂದ 34 ರವರಿಗೆ ಹು-ಧಾ ಮಹಾನಗರ ಪಾಲಿಕೆಯ (ಪ್ರ) ಕಂದಾಯ ಅಧಿಕಾರಿ ಉಮೇಶ ಸವಣೂರ (9844271166), ಕಲಘಟಗಿ ತಾಲ್ಲೂಕ ವ್ಯಾಪ್ತಿಗೆ ಕಲಘಟಗಿ ತಹಶೀಲ್ದಾರ ಬವಸರಾಜ ಹೊಂಕಣದವರ (9449549986), ಅಳ್ಳಾವರ ತಾಲ್ಲೂಕ ವ್ಯಾಪ್ತಿಗೆ ಅಳ್ಳಾವರ ತಹಶೀಲ್ದಾರ ಬಸವರಾಜ ಬೆಣ್ಣೆಶಿರೂರ (9448332349) ಅವರನ್ನು ಸಹಾಯಕ ಮತದಾರರ ನೋಂದಣಾಧಿಕಾರಿಗಳನ್ನಾಗಿ ನೇಮಿಸಿ ಆದೇಶಿಸಲಾಗಿದೆ.
ನಿಯೋಜಿತ ಅಧಿಕಾರಿಗಳನ್ನಾಗಿ ನವಲಗುಂದ ತಾಲೂಕಿಗೆ ನವಲಗುಂದ ತಾಲ್ಲೂಕು ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಭಾಗ್ಯಶ್ರೀ ಜಹಗೀರದಾರ (9916870834), ಅಣ್ಣಿಗೇರಿ ತಾಲ್ಲೂಕಿಗೆ ಅಣ್ಣಿಗೇರಿ ತಾಲ್ಲೂಕು ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಪಿ.ಆರ್. ಬಡೇಖಾನನವರ (9880162589), ಹುಬ್ಬಳ್ಳಿ ಗ್ರಾಮೀಣ ತಾಲೂಕಿಗೆ ಹುಬ್ಬಳ್ಳಿ ಗ್ರಾಮೀಣ ತಾಲ್ಲೂಕು ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ರಾಮಚಂದ್ರ ಹೊಸಮನಿ (9480864105), ಕುಂದಗೋಳ ತಾಲ್ಲೂಕಿಗೆ ಕುಂದಗೋಳ ತಾಲ್ಲೂಕು ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಜಗದೀಶ ಕುಮಾರ (9845954772), ಧಾರವಾಡ ತಾಲೂಕು ಹು-ಧಾ ಮಹಾನಗರ ಪಾಲಿಕೆ ವಾರ್ಡ್ ನಂ. 01 ರಿಂದ 09 ರವರಿಗೆ ಧಾರವಾಡ ತಹಶೀಲ್ದಾರ ಗ್ರೇಡ್-2 ಹನುಮಂತ ಕೊಚ್ಚರಗಿ (8722959773), ಹು-ಧಾ ಮಹಾನಗರ ಪಾಲಿಕೆ ವಾರ್ಡ್ ನಂ. 60 ರಿಂದ 82 ರವರಿಗೆ ಹುಬ್ಬಳ್ಳಿ ಗ್ರಾಮೀಣ ತಹಶೀಲ್ದಾರ ಗ್ರೇಡ್-2 ಎಸ್.ಪಿ. ಹೆಬ್ಬಳ್ಳಿ (8073199654), ಹು-ಧಾ ಮಹಾನಗರ ಪಾಲಿಕೆ ವಾರ್ಡ್ ನಂ. 35 ರಿಂದ 59 ರವರಿಗೆ ಹು-ಧಾ ಮಹಾನಗರ ಪಾಲಿಕೆಯ ಸಹಾಯಕ ಕಂದಾಯ ಅಧಿಕಾರಿ ಶಿವಶಂಕರ ಗಂಗಾವತಿ (9739548466), ಹು-ಧಾ ಮಹಾನಗರ ಪಾಲಿಕೆ ವಾರ್ಡ್ ನಂ. 10 ರಿಂದ 34 ರವರಿಗೆ ಹು-ಧಾ. ಮ. ಪಾಲಿಕೆಯ ಹುಬ್ಬಳ್ಳಿ ವಲಯ ಕಛೇರಿ-10 ಕಂದಾಯ ಅಧಿಕಾರಿ ವಿವೇಕಾನಂದ ಮರಳ್ಳವರ (9611969953), ಕಲಘಟಗಿ ತಾಲೂಕು ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಪರಶುರಾಮ ಸಾವಂತ (9480864116), ಅಳ್ನಾವರ ತಾಲೂಕು ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಪ್ರಶಾಂತ ತುರಕೊಣಿ (9480864350) ಅವರನ್ನು ನಿಯೋಜಿತ ಅಧಿಕಾರಿಗಳನ್ನಾಗಿ ನೇಮಿಸಿ ಆದೇಶಿಸಲಾಗಿದೆ.
ಸಪ್ಟೆಂಬರ 28, 2020 ರಲ್ಲಿದ್ದಂತೆ ಕರ್ನಾಟಕ ಪಶ್ಚಿಮ ಪದವೀಧರರ ಕ್ಷೇತ್ರದ ಮತದಾರರು: ಕರ್ನಾಟಕ ಪಶ್ಚಿಮ ಪದವಿಧರ ಮತಕ್ಷೇತ್ರದ ಸಪ್ಟೆಂಬರ 28, 2020 ರ ಅಂತಿಮ ಮತದಾರರ ಪಟ್ಟಿಯಲ್ಲಿರುವಂತೆ ಧಾರವಾಡ ತಾಲೂಕಿನಲ್ಲಿ 7,367, ಹುಬ್ಬಳ್ಳಿ ಶಹರದಲ್ಲಿ 8,885, ಕಲಘಟಗಿ ತಾಲೂಕಿನಲ್ಲಿ 771, ಕುಂದಗೋಳ ತಾಲೂಕಿನಲ್ಲಿ 1,441, ಅಣ್ಣಿಗೇರಿ ತಾಲ್ಲೂಕಿನಲ್ಲಿ 944, ನವಲಗುಂದ ತಾಲೂಕಿನಲ್ಲಿ 1,173, ಅಳ್ನಾವರ ತಾಲೂಕಿನಲ್ಲಿ 265 ಪದವೀಧರ ಮತದಾರರಿದ್ದರು. ಒಟ್ಟಾರೆಯಾಗಿ ಧಾರವಾಡ ಜಿಲ್ಲೆಯಲ್ಲಿ 20,846 ಪದವಿಧರ ಮತದಾರಲ್ಲಿ 12,829 ಪುರುಷರು ಹಾಗೂ 8,013 ಮಹಿಳಾ ಮತದಾರರಿದ್ದರು.
ಮತದಾರರ ನೋಂದಣಿ ನಿಯಮಗಳು-1960ರ ನಿಯಮ-31(3)ರ ಸೂಚನೆಗಳು: ಮತದಾರರರ ನೋಂದಣೆ ನಿಯಮಗಳು, 1960ರ 31(3)ನೇ ನಿಯಮದ ಅನುಸಾರ, ಮೊದಲನೇ ಅನುಸೂಚಿ ಅಡಿಯಲ್ಲಿ ಯಾರ ವಿವರಗಳನ್ನು ನೀಡಲಾಗಿದೆಯೋ ಅಂತಹ ಪ್ರತಿಯೊಬ್ಬ ಮತದಾರರರ ನೋಂದಣೆ ಅಧಿಕಾರಿಗಳು, ಅನುಸೂಚಿಯಲ್ಲಿ ನಮೂದಿಸಿರುವ ಮತಕ್ಷೇತ್ರದ ಮತದಾರರರ ಪಟ್ಟಿಯಲ್ಲಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಲು ಹಕ್ಕುಳ್ಳ ಪ್ರತಿಯೊಬ್ಬ ವ್ಯಕ್ತಿಗೆ ಮತದಾರರ ಪಟ್ಟಿಯಲ್ಲಿ ಹೆಸರನ್ನು ಸೇರಿಸುವ ಸಲುವಾಗಿ ಮತದಾರರರ ನೋಂದಣಿ ನಿಯಮಗಳು, 1960ಕ್ಕೆ ಲಗತ್ತಿಸಲಾದ ಹಾಗೂ ಎರಡನೆಯ ಅನುಸೂಚಿಯಲ್ಲಿ ಯಥಾವತ್ತಾಗಿ ಪುನರುಚ್ಛರಿಸಿರುವ ನಮೂನೆ-18 ರಲ್ಲಿನ ಅರ್ಜಿಯನ್ನು ಭರ್ತಿ ಮಾಡಿ 6 ನೇ ನವಂಬರ್ 2025 ರಂದು ಅಥವಾ ಅದಕ್ಕೂ ಮೊದಲು ಮೊದಲನೇ ಅನುಸೂಚಿಯಲ್ಲಿ ನಮೂದಿಸಿರುವ ಅಧಿಕಾರಿಗಳಿಗೆ ಕಳುಹಿಸಲು ಅಥವಾ ತಲುಪಿಸಲು ತಿಳಿಸಲಾಗಿದೆ.
ಅರ್ಜಿಗಳನ್ನು ಮೊದಲನೇ ಅನುಸೂಚಿಯಲ್ಲಿ ನಮೂದಿಸಲಾದ ಸಹಾಯಕ ಮತದಾರರರ ನೋಂದಣಾಧಿಕಾರಿಗಳು ಹಾಗೂ ನಿಯೋಜಿತ ಅಧಿಕಾರಿಗಳಿಗೂ ಸಹ ಸಲ್ಲಿಸಬಹುದಾಗಿದೆ. ಪದವೀಧರರ ಕ್ಷೇತ್ರದ ಮತದಾರರರ ಪಟ್ಟಿಯನ್ನು ಪ್ರತಿ ಚುನಾಚಣೆಯ ಮೊದಲು ಹೊಸದಾಗಿ ತಯಾರಿಸಬೇಕಾಗಿದ್ದು, ಈ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಅಸ್ತಿತ್ವದಲ್ಲಿರುವ ಮತದಾರರರ ಪಟ್ಟಿಯಲ್ಲಿರುವ ಎಲ್ಲಾ ವ್ಯಕ್ತಿಗಳೂ ಸಹ ನಿಗದಿತ ನಮೂನೆಯಲ್ಲಿ ಹೊಸದಾಗಿ ಅರ್ಜಿಗಳನ್ನು ಸಲ್ಲಿಸತಕ್ಕದ್ದು.
ಅರ್ಹತೆಗಳು: ಭಾರತದ ಪ್ರಜೆಯಾಗಿರುವ, ಆಯಾ ಮತಕ್ಷೇತ್ರದೊಳಗಡೆ ಸಾಮಾನ್ಯವಾಗಿ ವಾಸಿಸುತ್ತಿರುವ ಹಾಗೂ 1 ನೇ ನವಂಬರ್ 2025 ಕ್ಕೆ ಮುಂಚೆ (ಅರ್ಹತಾ ದಿನಾಂಕ) ಕನಿಷ್ಠ ಮೂರು ವರ್ಷಗಳಷ್ಟು ಮೊದಲು ಭಾರತದಲ್ಲಿರುವ ಯಾವುದಾದರೊಂದು ವಿಶ್ವವಿದ್ಯಾಲಯದ ಪದವೀಧರನಾಗಿರುವ ಅಥವಾ ತತ್ಸಮಾನ ವಿದ್ಯಾರ್ಹತೆಯನ್ನು ಹೊಂದಿರುವ ಪ್ರತಿಯೊಬ್ಬ ವ್ಯಕ್ತಿಯೂ ಮತದಾರರರ ಪಟ್ಟಿಯಲ್ಲಿ ತನ್ನ ಹೆಸರನ್ನು ಸೇರಿಸಲು ಅರ್ಹನಾಗಿರುತ್ತಾನೆ.
ಸದರಿ ತತ್ಸಮಾನ ವಿದ್ಯಾರ್ಹತೆಗಳ ಪಟ್ಟಿಯು ಅಧಿಕಾರಿಗಳ ಬಳಿ ಇರುತ್ತದೆ. 3 ವರ್ಷಗಳ ಅವಧಿಯನ್ನು ಅರ್ಹತಾ ಪದವಿ ಪರೀಕ್ಷೆಯ ಫಲಿತಾಂಶವನ್ನು ವಿಶ್ವವಿದ್ಯಾಲಯ ಅಥವಾ ಸಂಬಂಧಪಟ್ಟ ಇತರ ಪ್ರಾಧಿಕಾರವು ಘೋಷಿಸಿ ಪ್ರಕಟಿಸಿದ ದಿನಾಂಕದಿಂದ ಗಣನೆಗೆ ತೆಗೆದುಕೊಳ್ಳಲಾಗುತ್ತದೆ.
ನಮೂನೆ 18 ರಲ್ಲಿರುವ ಅರ್ಜಿಯನ್ನು ಎಲ್ಲಾ ಪ್ರಕರಣಗಳಲ್ಲಿ ದಸ್ತಾವೇಜು ಪುರಾವೆಯ ರೂಪದ ಮೂಲಕ ಸೂಕ್ತ ರೀತಿಯಲ್ಲಿ ಸಮರ್ಥಿಸತಕ್ಕದ್ದು.
ವಿಶ್ವವಿದ್ಯಾಲಯ ಅಥವಾ ಸಂಬಂಧಪಟ್ಟ ಸಂಸ್ಥೆಯಿಂದ ನೀಡಲಾದ ಪದವಿ, ಡಿಪೆÇ್ಲೀಮಾ ಅಥವಾ ಪ್ರಮಾಣಪತ್ರ ಕೋರ್ಸ್‍ಗಳ ಮೂಲ ಪ್ರತಿ ಅಥವಾ ನಕಲು ಪ್ರತಿಯ ಸ್ವಯಂ ದೃಢೀಕರಿಸಿದ ಹಾಗೂ ಅಪರ ನಿಯೋಜಿತ ಅಧಿಕಾರಿಗಳಾದ ತಹಸೀಲ್ದಾರ್, ಪದವಿ ಕಾಲೇಜುಗಳ, ಇಂಟರ್ ಕಾಲೇಜುಗಳ ಪ್ರಾಂಶುಪಾಲರುಗಳು, ಬಾಲಕಿಯರ ಪ್ರಥಮ ದರ್ಜೆ ಕಾಲೇಜುಗಳ ಪ್ರಾಂಶುಪಾಲರುಗಳು, ಇಂಟರ್ ಕಾಲೇಜುಗಳ ಪ್ರಾಂಶುಪಾಲರುಗಳು, ಎಲ್ಲಾ ಬ್ಲಾಕುಗಳ ಜಂಟಿ ಬ್ಲಾಕ್ ಅಭಿವೃದ್ಧಿ ಅಧಿಕಾರಿಗಳು, ನಗರ ಪಾಲಿಕೆ ಮತ್ತು ನಗರ ಪಂಚಾಯತ್‍ಗಳ ಕಾರ್ಯನಿರ್ವಾಹಕ ಅಧಿಕಾರಿ (ಪತ್ರಾಂಕಿತ), ಸಂಬಂಧಪಟ್ಟ ಜಿಲ್ಲೆಯಲ್ಲಿನ ಪತ್ರಾಂಕಿತ ಅಧಿಕಾರಿಗಳು (ಗೆಜೆಟೆಡ್) ಹಾಗೂ ನೋಟರಿ ಪಬ್ಲಿಕ್‍ಗಳಿಂದ ದೃಢೀಕೃತ ಪ್ರತಿ ಸಲ್ಲಿಸಬೇಕು.
ಅಥವಾ ಸರ್ಕಾರಿ ಕಛೇರಿಗಳ ಪತ್ರಾಂಕಿತ ಮುಖ್ಯಸ್ಥನು, ತನ್ನ ಅಭಿರಕ್ಷೆಯಲ್ಲಿರುವ ಸರ್ಕಾರಿ ದಾಖಲೆಗಳಲ್ಲಿನ ನಮೂದುಗಳ ಆಧಾರದ ಮೇಲೆ ಮೂರನೇ ಅನುಸೂಚಿಯಲ್ಲಿ ಯಥಾವತ್ತಾಗಿ ನೀಡಲಾಗಿರುವಂತಹ ನಿರ್ದಿಷ್ಟಪಡಿಸಿದ ನಮೂನೆಯಲ್ಲಿ ಪದವೀಧರ ನೌಕರನಿಗೆ ನೀಡಲಾದ ಸರ್ಕಾರಿ ದಾಖಲೆಯಲ್ಲಿನ ನಮೂದಿನ ಒಂದು ದೃಢೀಕೃತ ಪ್ರತಿ ಅಥವಾ ಪ್ರಮಾಣಪತ್ರ ಅಥವಾ ಅರ್ಜಿದಾರರು ಹೊಂದಿರುವ ಪದವಿ, ಡಿಪೆÇ್ಲೀಮಾ ಅಥವಾ ಪ್ರಮಾಣಪತ್ರ ಕೋರ್ಸ್ ಅನ್ನು ಸ್ಪಷ್ಟಪಡಿಸಿರುವ ಶಾಸನಬದ್ಧ ಸಂಸ್ಥೆ, ನಿಗಮ ಅಥವಾ ಸಾರ್ವಜನಿಕ ಉದ್ಯಮದ ದಾಖಲೆಯಲ್ಲಿನ ನಮೂದಿನ ಒಂದು ಪ್ರತಿಯನ್ನು ಸಂಬಂಧಪಟ್ಟ ಕಚೇರಿಯ ಮುಖ್ಯಸ್ಥನು ಯುಕ್ತವಾಗಿ ದೃಢೀಕರಿಸಿರುವ ಪ್ರತಿ ಸಲ್ಲಿಸಬೆಕು.
ಅಥವಾ ವಿಶ್ವವಿದ್ಯಾಲಯವು ನೋಂದಾಯಿತ ಪದವೀಧರನೆಂಬುದಾಗಿ ನೀಡಿದ ನೋಂದಣೆ ಕಾರ್ಡಿನ ದೃಢೀಕೃತ ಪ್ರತಿ ನೋಂದಾಯಿತ ಪದವೀದರರ ಪಟ್ಟಿ ವಕೀಲರ ಪಟ್ಟಿ, ವೈದ್ಯಕೀಯ ವೃತ್ತಿ ನಿರತರ ರಿಜಿಸ್ಟರ್, ಚಾರ್ಟಡ್ ಅಕೌಂಟೆಂಟ್ರವರುಗಳ ರಿಜಿಸ್ಟರ್, ಇಂಜಿನಿಯರ್ಗಳ ಸಂಸ್ಥೆಯಿಂದ ನಿರ್ವಹಿಸಲಾಗುವ ಇಂಜಿನಿಯರುಗಳ ರಿಜಿಸ್ಟರ್ ಇತ್ಯಾದಿಗಳಲ್ಲಿನ ಸಂಬಂಧಪಟ್ಟ ನಮೂದನೆಯ ಪ್ರಮಾಣಿಕೃತ ಪ್ರತಿ ಸಲ್ಲಿಸಬೇಕು
ಅಥವಾ ಅರ್ಜಿದಾರನಿಂದ, ಆತ ಓದಿದ ವಿಶ್ವವಿದ್ಯಾಲಯದ ರಿಜಿಸ್ಟ್ರಾರರು (ಕುಲಸಚಿವರು) ಅಥವಾ ಯಾವುದೇ ವಿಶ್ವವಿದ್ಯಾಲಯಕ್ಕೆ ಸಂಯೋಜಿತವಾಗಿರುವ ಕಾಲೇಜಿನ ಪ್ರಾಂಶುಪಾಲರು ಅಥವಾ ಅಂತಹ ಕಾಲೇಜಿನ ವಿಭಾಗದ ಮುಖ್ಯಸ್ಥರು ಅರ್ಜಿದಾರನು ತಮ್ಮ ಸಂಸ್ಥೆಯಲ್ಲಿ ವ್ಯಾಸಂಗ ಮಾಡಿದ್ದಾನೆಂದು ನೀಡಿದ ಪ್ರಮಾಣಪತ್ರದೊಂದಿಗೆ ಸಮರ್ಥಿಸಿದಂತ ಅಫಿಡವಿಟ್ ಸಲ್ಲಿಸಬೇಕು.
ಅಥವಾ ಸಂಬಂಧಪಟ್ಟ ವಿಶ್ವವಿದ್ಯಾಲಯ ಅಥವಾ ಸಂಸ್ಥೆಯಿಂದ ನೀಡಿರುವ ಮೂಲ ಅಂಕಪಟ್ಟಿ ಅಥವಾ ಸ್ವಯಂ ದೃಢೀಕರಿಸಲ್ಪಟ್ಟ ಅದರ ಯಾವುದೇ ಪ್ರತಿಯನ್ನು ಅಪರ ನಿಯೋಜಿತ ಅಧಿಕಾರಿಯಿಂದ ಪ್ರಮಾಣಿಕರಿಸತಕ್ಕದ್ದು, ಅಲ್ಲದೆ ಅರ್ಜಿದಾರನು ಸಂಬಂಧಪಟ್ಟ ಪರೀಕ್ಷೆಯಲ್ಲಿ ಉತ್ತೀರ್ಣನಾಗಿರುವುದಕ್ಕೆ ಸ್ಪಷ್ಟವಾದ ಗುರುತು/ನಮೂದು ಇರಬೇಕು.
ಅರ್ಹ ವ್ಯಕ್ತಿಗಳು ತಮ್ಮ ಹೆಸರುಗಳನ್ನು ನೋಂದಾಯಿಸಲು ನಿಗದಿತ ನಮೂನೆ-18ರಲ್ಲಿ ಮೇಲಿನ ಕಂಡಿಕೆ 3ರಲ್ಲಿನ ಪಟ್ಟಿಯಲ್ಲಿ ಸೂಚಿಸಿರುವ ದಾಖಲೆಗಳೊಂದಿಗೆ ಈ ಕೆಳಕಂಡ ನಿಯಮದ ಪ್ರಕಾರ ಸಲ್ಲಿಸತಕ್ಕದ್ದು. ಅರ್ಜಿಯನ್ನು ಅಂಚೆ ಮೂಲಕ ಮತದಾರರರ ನೋಂದಣಾಧಿಕಾರಿ, ಸಹಾಯಕ ಮತದಾರರರ ನೋಂದಣಾಧಿಕಾರಿ, ನಿಯೋಜಿತ ಅಧಿಕಾರಿಗೆ ಸಲ್ಲಿಸಿದ ಪಕ್ಷದಲ್ಲಿ, ಅರ್ಜಿದಾರರು ಅರ್ಜಿಯೊಂದಿಗೆ ಪದವಿ ಪ್ರಮಾಣಪತ್ರದ ಪ್ರತಿ, ಅಂಕ ಪಟ್ಟಿಯ ಪ್ರತಿಯನ್ನು ಸ್ವಯಂ ದೃಢೀಕರಿಸಿ ಮತ್ತು ಯಥೋಕ್ತವಾಗಿ ಅಪರ ನಿಯೋಜಿತ ಅಧಿಕಾರಿಯವರಿಂದ ದೃಢೀಕರಿಸಲ್ಪಟ್ಟ ಅಡಕದೊಂದಿಗೆ ಸಲ್ಲಿಸಬೇಕು.
ಒಂದು ಪಕ್ಷ ಅರ್ಜಿದಾರನು ಅರ್ಜಿಯನ್ನು ನೇರವಾಗಿ ಸದರಿ ಕಾರ್ಯಕ್ಕೆ ನಿಯೋಜಿಸಲ್ಪಟ್ಟಿರುವ ಅಧಿಕಾರಿಯ ಮುಂದೆ ಹಾಜರುಪಡಿಸಿದಲ್ಲಿ ಅರ್ಜಿದಾರರು ತಮ್ಮ ಪದವಿ ಪ್ರಮಾಣಪತ್ರ, ಸರ್ಟಿಫಿಕೇಟ್, ಅಂಕಪಟ್ಟಿಯ ಮೂಲ ಪ್ರತಿಯನ್ನು ಹಾಜರುಪಡಿಸತಕ್ಕದ್ದು. ಮೇಲ್ಕಂಡ ನಿಯಮಗಳನ್ನು ಅನುಸರಿಸದೇ ಸಲ್ಲಿಸುವ ಯಾವುದೇ ಅರ್ಜಿಯನ್ನು ಮತದಾರರರ ನೋಂದಣಾಧಿಕಾರಿಯ ಅರ್ಜಿಯು ಅಪೂರ್ಣವಾಗಿದೆ ಎಂದು ತಿರಸ್ಕರಿಸಲಾಗುವುದು.
ಖುದ್ದಾಗಿ ಅಥವಾ ಅಂಚೆ ಮುಖಾಂತರ ಒಟ್ಟಾರೆಯಾಗಿ ಸಲ್ಲಿಸಿದ ಅರ್ಜಿಗಳನ್ನು ಮತದಾರರರ ನೋಂದಣಿ ಅಧಿಕಾರಿಯು ಮತದಾರರರ ಪಟ್ಟಿಯಲ್ಲಿ ಸೇರ್ಪಡೆಗಾಗಿ ಪರಿಗಣಿಸಲಾಗುವುದಿಲ್ಲ. ಆದರೆ ಸಂಸ್ಥೆಯ ಮುಖ್ಯಸ್ಥರು ಅವರ ಸಿಬ್ಬಂದಿಯ ಎಲ್ಲಾ ಅರ್ಜಿಗಳನ್ನು ಒಟ್ಟಾಗಿ ಕಳುಹಿಸಬಹುದು. ಒಂದೇ ಕುಟುಂಬದ ಎಲ್ಲಾ ಸದಸ್ಯರ ನಮೂನೆ-18ರ ಅರ್ಜಿಗಳನ್ನು ಕುಟುಂಬದ ಯಾವುದಾದರೂ ಸದಸ್ಯರು ಸಲ್ಲಿಸಬಹುದು. ಆದರೆ ಪ್ರತಿ ಸದಸ್ಯನಿಗೆ ಸಂಬಂಧಿಸಿದಂತೆ ಮೂಲ ಪ್ರಮಾಣಪತ್ರಗಳನ್ನು ಒದಗಿಸಿ, ಪ್ರಮಾಣಪತ್ರವನ್ನು ಪರಿಶೀಲಿಸಿಕೊಳ್ಳಬೇಕು ಹಾಗೂ ಅಪರ ನಿಯೋಜಿತ ಅಧಿಕಾರಿಯಿಂದ ಯಥೋಕ್ತವಾಗಿ ದೃಢೀಕರಿಸಲ್ಪಟ್ಟಿರಬೇಕು.
ಅರ್ಜಿಯಲ್ಲಿ ತಪ್ಪು ಅಥವಾ ತಪ್ಪೆಂದು ಅವನು ತಿಳಿದಿರುವ ಅಥವಾ ನಂಬುವಂಥ ಅಥವಾ ಸತ್ಯವೆಂದು ನಂಬಲಾಗದಿರುವಂತಹ ಹೇಳಿಕೆಗಳನ್ನು ಅಥವಾ ಘೋಷಣೆಗಳನ್ನು ಮಾಡುವ ಯಾವುದೇ ವ್ಯಕ್ತಿಯನ್ನು ಪ್ರಜಾ ಪ್ರಾತಿನಿಧ್ಯ ಅಧಿನಿಯಮ, 1950 ರ 31 ನೇ ಪ್ರಕರಣದ ಮೇರೆಗೆ ಶಿಕ್ಷೆಗೆ ಗುರಿಪಡಿಸಲಾಗುವುದೆಂಬುದನ್ನು ಗಮನಿಸತಕ್ಕದ್ದು.
ನಮೂನೆ 18 ರಲ್ಲಿರುವ ಮುದ್ರಿತ ಅರ್ಜಿಗಳನ್ನು ಮತದಾರರರ ನೋಂದಣಾಧಿಕಾರಿ, ಸಹಾಯಕ ಮತದಾರರರ ನೋಂದಣಾಧಿಕಾರಿ, ನಿಯೋಜಿತ ಅಧಿಕಾರಿಯವರಿಂದ ಪಡೆಯಬಹುದು. ಕೈಯಲ್ಲಿ ಬರೆದ, ಬೆರಳಚ್ಚು ಮಾಡಿದ, ಸೈಕ್ಲೋಸ್ಟೈಲು (ಕಲ್ಲಚ್ಚು) ಮಾಡಿದ ಅಥವಾ ಖಾಸಗಿಯಾಗಿ ಮುದ್ರಿಸಿದ ನಮೂನೆಗಳನ್ನು ಕೂಡ ಅಂಗೀಕರಿಸಲಾಗುವುದು ಎಂದು ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರ ಮತದಾರರ ನೋಂದಣಾಧಿಕಾರಿಗಳು ಹಾಗೂ ಬೆಳಗಾವಿ ವಿಭಾಗದ ಪ್ರಾದೇಶಿಕ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.








