Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಮದುವೆಯಿಂದ `ಕ್ಯಾನ್ಸರ್’ ಅಪಾಯ ಕಡಿಮೆಯಾಗಬಹುದು : ಅಧ್ಯಯನ

09/04/2026 10:51 AM

BIG NEWS : ಚಾರಣಿಗರ ಸುರಕ್ಷತೆಗಾಗಿ ಟ್ರ್ಯಾಕಿಂಗ್ ಆಪ್, ವಿಮೆ : ಅರಣ್ಯ ಸಚಿವ ಈಶ್ವರ ಖಂಡ್ರೆ ಸೂಚನೆ

09/04/2026 10:42 AM

SHOCKING : `AC’ ಕವರ್ ತೆಗೆದ ಮೆಕ್ಯಾನಿಕ್‌ ಗೆ ಕಾದಿತ್ತು ಬಿಗ್ ಶಾಕ್ : ಒಳಗಿತ್ತು ‘ಇಲಿರಾಯನ’ ಹೈಟೆಕ್ ಬಂಗಲೆ | WATCH VIDEO

09/04/2026 10:35 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಅವಿವಾಹಿತ ಯುವಕ ಮೃತಪಟ್ಟರೆ ಒಡಹುಟ್ಟಿದವರಿಗೂ ಪರಿಹಾರ : ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು
KARNATAKA

ಅವಿವಾಹಿತ ಯುವಕ ಮೃತಪಟ್ಟರೆ ಒಡಹುಟ್ಟಿದವರಿಗೂ ಪರಿಹಾರ : ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು

By kannadanewsnow5703/10/2025 6:27 AM

ಬೆಂಗಳೂರು : ಅವಿವಾಹಿತ ಯುವಕ ಮೃತಪಟ್ಟರೆ ಆತನ ಕುಟುಂಬ ಸದಸ್ಯರಿಗೂ ಪರಿಹಾರ ನೀಡಬೇಕೆಂದು ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.

ಅಪಘಾತದಲ್ಲಿ ಮೃತಪಟ್ಟ ಯುವಕ ಅವಿವಾಹಿತ ಎನ್ನುವ ಕಾರಣಕ್ಕೆ ಆತನ ಕುಟುಂಬ ಸದಸ್ಯರಿಗೆ ಅವಲಂಬನೆಯ ನಷ್ಟ ಪರಿಹಾರ ನೀಡದ ಅಧೀನ ನ್ಯಾಯಾಲಯದ ಆದೇಶವನ್ನು ಮಾರ್ಪಡಿಸಿರುವ ಹೈಕೋರ್ಟ್ ಕುಟುಂಬದ ಆದಾಯಕ್ಕೆ ಮೃತನೂ ಸಹ ಕೊಡುಗೆ ನೀಡುತ್ತಿದ್ದ ಅಂಶ ಪರಿಗಣಿಸಿ 22.88 ಲಕ್ಷ ರೂಪಾಯಿ ಪರಿಹಾರ ಘೋಷಿಸಿದೆ.

ಮೃತ ಯುವಕನ ತಂದೆ, ತಾಯಿ ಮಾತ್ರವಲ್ಲ ಆತನ ಸಹೋದರಿಯರು ಮತ್ತು ಸಹೋದರರು ಸಹ ಮೃತರ ಅವಲಂಬಿತರಾಗಿರುತ್ತಾರೆ. ಪರಿಹಾರ ಮೊತ್ತವನ್ನು ಪ್ರಕರಣದಲ್ಲಿ ಮೃತಪಟ್ಟಿರುವ ಯುವಕನ ಕುಟುಂಬದ ಸದಸ್ಯರು ಸಮಾನವಾಗಿ ಪಡೆಯಲು ಅರ್ಹರಾಗಿದ್ದಾರೆ. ಆ ಮೂಲಕ ಮೃತನ ಪೋಷಕರೊಂದಿಗೆ ಒಡಹುಟ್ಟಿದವರಿಗೆ ಪರಿಹಾರ ನೀಡಬೇಕು ಎಂದು ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.

ಬಿ.ಕಾಂ. ಪದವಿ ಪೂರ್ಣಗೊಳಿಸಿ ಉದ್ಯೋಗ ಮಾಡುತ್ತಿದ್ದ 24 ವರ್ಷದ ಅವಿವಾಹಿತ ಪುತ್ರ ರೋಶನ್ ಅಪಘಾತದಲ್ಲಿ ಮೃತಪಟ್ಟಿದ್ದರು. ಆತನ ಮೇಲೆ ಅವಲಂಬಿತರಾಗಿದ್ದ ನಮಗೆ ಮೋಟಾರ್ ವಾಹನ ಅಪಘಾತ ಪರಿಹಾರ ಕ್ಲೇಮು ನ್ಯಾಯಾಧೀಕರಣ ಪರಿಹಾರ ನೀಡಿಲ್ಲ ಎಂದು ಆಕ್ಷೇಪಿಸಿ ಕಲಬುರ್ಗಿ ನಿವಾಸಿ ಕಲ್ಪನಾ ಹೈಕೋರ್ಟಿಗೆ ಮೇಲ್ಮನವಿ ಸಲ್ಲಿಸಿದ್ದರು. ಅವರ ಮನವಿಯನ್ನು ಪುರಸ್ಕರಿಸಿದ ನ್ಯಾಯಮೂರ್ತಿ ಹೆಚ್.ಪಿ. ಸಂದೇಶ್ ಅವರ ನೇತೃತ್ವದ ವಿಭಾಗೀಯ ಪೀಠ ಸದ್ಯ ಕಾನೂನು ವಿಕಸನಗೊಂಡಿದೆ. ಸಮಾಜ ರೂಪಾಂತರಗೊಂಡಿದೆ.

ಭಾರತೀಯ ಸಮಾಜದಲ್ಲಿ ಕುಟುಂಬ ಸಾಮಾನ್ಯವಾಗಿ ಪೋಷಕರು ಮತ್ತು ಮಕ್ಕಳನ್ನು ಒಳಗೊಂಡಿರುತ್ತದೆ. ಪ್ರಕರಣದಲ್ಲಿ ಪೋಷಕರು ಸಹೋದರ ಸಹೋದರಿಯರೊಂದಿಗೆ ಮೃತ ರೋಶನ್ ವಾಸಿಸುತ್ತಿದ್ದ. ಆತ ಅವಿವಾಹಿತನಾಗಿದ್ದ. ತನ್ನ ಆದಾಯವನ್ನು ಕುಟುಂಬಕ್ಕಾಗಿ ಕೊಡುಗೆ ನೀಡುತ್ತಿದ್ದ. ಅದನ್ನು ಸಾಮಾಜಿಕ ಅಭಿವೃದ್ಧಿಗೆ ಕುಟುಂಬದ ಆದಾಯವೆಂದು ಪರಿಗಣಿಸಲಾಗುತ್ತದೆ ಎಂದು ಕೋರ್ಟ್ ಹೇಳಿದೆ.

ಮೃತರ ಆದಾಯವನ್ನು ಪಡೆಯಲು ವಿವಾಹಿತ ಪುತ್ರರು, ವಿವಾಹಿತ ಹೆಣ್ಣು ಮಕ್ಕಳು ಮತ್ತು ಅವಲಂಬಿತ ಅತ್ತೆಯಂದಿರು ಅರ್ಹರಾಗಿರುತ್ತಾರೆ ಎಂದು ಸುಪ್ರೀಂ ಕೋರ್ಟ್ ಆದೇಶಿಸಿದೆ. ಹೀಗಾಗಿ ಈ ಪ್ರಕರಣದಲ್ಲಿ ಪೋಷಕರು ಸಹೋದರಿಯರು ಮತ್ತು ಸಹೋದರನೊಂದಿಗೆ ವಾಸವಾಗಿದ್ದರಿಂದ ಅವಲಂಬನೆ ನಷ್ಟ ನೀಡಬಹುದಾಗಿದೆ ಎಂದು ಕೋರ್ಟ್ ಆದೇಶದಲ್ಲಿ ತಿಳಿಸಿದೆ.

compensation to siblings Karnataka High Court gives important verdict on death of unmarried youth
Share. Facebook Twitter LinkedIn WhatsApp Email

Related Posts

BIG NEWS : ಚಾರಣಿಗರ ಸುರಕ್ಷತೆಗಾಗಿ ಟ್ರ್ಯಾಕಿಂಗ್ ಆಪ್, ವಿಮೆ : ಅರಣ್ಯ ಸಚಿವ ಈಶ್ವರ ಖಂಡ್ರೆ ಸೂಚನೆ

09/04/2026 10:42 AM1 Min Read

SHOCKING : `AC’ ಕವರ್ ತೆಗೆದ ಮೆಕ್ಯಾನಿಕ್‌ ಗೆ ಕಾದಿತ್ತು ಬಿಗ್ ಶಾಕ್ : ಒಳಗಿತ್ತು ‘ಇಲಿರಾಯನ’ ಹೈಟೆಕ್ ಬಂಗಲೆ | WATCH VIDEO

09/04/2026 10:35 AM1 Min Read

SHOCKING : ಗಂಡ ಸತ್ತು ಹುಳು ಬಿದ್ದರೂ ಅರಿಯದ ಪತ್ನಿ: ಕೊಳೆತ ಪತಿಯ ಶವದೊಂದಿಗೆ 10 ದಿನ ಕಳೆದ ಮಾನಸಿಕ ಅಸ್ವಸ್ಥ ಪತ್ನಿ!

09/04/2026 10:30 AM1 Min Read
Recent News

ಮದುವೆಯಿಂದ `ಕ್ಯಾನ್ಸರ್’ ಅಪಾಯ ಕಡಿಮೆಯಾಗಬಹುದು : ಅಧ್ಯಯನ

09/04/2026 10:51 AM

BIG NEWS : ಚಾರಣಿಗರ ಸುರಕ್ಷತೆಗಾಗಿ ಟ್ರ್ಯಾಕಿಂಗ್ ಆಪ್, ವಿಮೆ : ಅರಣ್ಯ ಸಚಿವ ಈಶ್ವರ ಖಂಡ್ರೆ ಸೂಚನೆ

09/04/2026 10:42 AM

SHOCKING : `AC’ ಕವರ್ ತೆಗೆದ ಮೆಕ್ಯಾನಿಕ್‌ ಗೆ ಕಾದಿತ್ತು ಬಿಗ್ ಶಾಕ್ : ಒಳಗಿತ್ತು ‘ಇಲಿರಾಯನ’ ಹೈಟೆಕ್ ಬಂಗಲೆ | WATCH VIDEO

09/04/2026 10:35 AM

21 ವರ್ಷ ದೇಶ ಸೇವೆ ಮಾಡಿದೆ, ಈಗ ನನ್ನ ಪೌರತ್ವವನ್ನೇ ಶಂಕಿಸಲಾಗುತ್ತಿದೆ”: ಮತದಾರರ ಪಟ್ಟಿಯಿಂದ ಕಾರ್ಗಿಲ್ ಯುದ್ಧ ವೀರನ ಹೆಸರು ಡಿಲೀಟ್!

09/04/2026 10:33 AM
State News
KARNATAKA

BIG NEWS : ಚಾರಣಿಗರ ಸುರಕ್ಷತೆಗಾಗಿ ಟ್ರ್ಯಾಕಿಂಗ್ ಆಪ್, ವಿಮೆ : ಅರಣ್ಯ ಸಚಿವ ಈಶ್ವರ ಖಂಡ್ರೆ ಸೂಚನೆ

By kannadanewsnow0509/04/2026 10:42 AM KARNATAKA 1 Min Read

ಬೆಂಗಳೂರು, ಏ.9: ರಾಜ್ಯದ ಗಿರಿಶ್ರೇಣಿಗಳಿಗೆ ಬರುವ ಚಾರಣಿಗರ ಸುರಕ್ಷತೆಯ ದೃಷ್ಟಿಯಿಂದ ದೇಶಕ್ಕೆ ಮಾದರಿಯಾಗುವಂತಹ ಪ್ರಮಾಣಿತ ಮಾನದಂಡ (ಎಸ್.ಓ.ಪಿ.) ರೂಪಿಸುವಂತೆ ಅರಣ್ಯ,…

SHOCKING : `AC’ ಕವರ್ ತೆಗೆದ ಮೆಕ್ಯಾನಿಕ್‌ ಗೆ ಕಾದಿತ್ತು ಬಿಗ್ ಶಾಕ್ : ಒಳಗಿತ್ತು ‘ಇಲಿರಾಯನ’ ಹೈಟೆಕ್ ಬಂಗಲೆ | WATCH VIDEO

09/04/2026 10:35 AM

SHOCKING : ಗಂಡ ಸತ್ತು ಹುಳು ಬಿದ್ದರೂ ಅರಿಯದ ಪತ್ನಿ: ಕೊಳೆತ ಪತಿಯ ಶವದೊಂದಿಗೆ 10 ದಿನ ಕಳೆದ ಮಾನಸಿಕ ಅಸ್ವಸ್ಥ ಪತ್ನಿ!

09/04/2026 10:30 AM

ಗಂಡಸರಿಗೂ ಬಂತಾ ‘ಶಕ್ತಿ ಯೋಜನೆ’? ಚಾಮರಾಜನಗರದಲ್ಲಿ ಪುರುಷ ಪ್ರಯಾಣಿಕನಿಗೆ ಉಚಿತ ಟಿಕೆಟ್ ನೀಡಿದ ಕಂಡಕ್ಟರ್!

09/04/2026 10:30 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.