ಚಿತ್ರದುರ್ಗ: ಅಪ್ರಾಪ್ತ ಬಾಲಕಿಯರ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನದಲ್ಲಿರುವ
ಶಿವಮೂರ್ತಿ ಮುರುಘಾ ಶರಣರಿಗೆ ಚೆಕ್ ಹಾಗೂ ಇತರ ದಾಖಲೆಗಳಿಗೆ ಸಹಿ ಹಾಕಲು ಅವಕಾಶ ನೀಡಬೇಕು ಎಂದು ಕೋರಿರುವ ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್ ನಡೆಯುತ್ತಿದೆ.
BIGG NEWS: ದೇಶದಲ್ಲಿ PFI ಬ್ಯಾನ್; ಕೇಂದ್ರ ಸರ್ಕಾರದ ನಿರ್ಧಾರ ಸ್ವಾಗತಿಸಿದ ಕಾಂಗ್ರೆಸ್
ಈ ವೇಳೆ ಮುರುಘಾ ಶರಣರ ಪರ ವಕೀಲ ಸಂದೀಪ್ ಪಾಟೀಲ್ ವಾದ ಮಂಡಿಸಿದರು.ಮಠದ ಸಿಬ್ಬಂದಿ ಮತ್ತು ಶಿಕ್ಷಣ ಸಂಸ್ಥೆಯ ಸಿಬ್ಬಂದಿಗೆ ವೇತನ ಪಾವತಿ ಹಾಗೂ ಇತರ ಖರ್ಚುಗಳಿಗಾಗಿ ಪ್ರತಿತಿಂಗಳು 200ಕ್ಕೂ ಚೆಕ್ಗಳಿಗೆ ಮುರುಘಾ ಶರಣರು ಸಹಿ ಹಾಕಬೇಕಿದೆ. ಇಲ್ಲದಿದ್ದರೆ ವೇತನ ಪಾವತಿ ಸಾಧ್ಯವಾಗುವುದಿಲ್ಲ ಎಂದು ಹೇಳಿದ್ದಾರೆ.
BIGG NEWS: ದೇಶದಲ್ಲಿ PFI ಬ್ಯಾನ್; ಕೇಂದ್ರ ಸರ್ಕಾರದ ನಿರ್ಧಾರ ಸ್ವಾಗತಿಸಿದ ಕಾಂಗ್ರೆಸ್
ವಾದ ಆಲಿಸಿದ ಹೈಕೋರ್ಟ್ ‘ನಿಮ್ಮ ಸಮಸ್ಯೆಯಿಂದ ಯಾವುದೇ ಸಿಬ್ಬಂದಿಯನ್ನು ಉಪವಾಸಕ್ಕೆ ದೂಡಬಾರದು. ಬಂಧನಕ್ಕೆ ಮೊದಲು ಹೇಗೆ ಸಂಬಳ ನೀಡಲಾಗುತ್ತಿತ್ತು ಎನ್ನುವ ಬಗ್ಗೆ ವಿವರವಾದ ಮಾಹಿತಿ ಇರುವ ಮೆಮೊ ಸಲ್ಲಿಸಿ’ ಎಂದು ಮುರುಘಾ ಶರಣರ ಪರ ವಕೀಲರಿಗೆ ಸೂಚನೆ ನೀಡಿತು.