ಬೆಂಗಳೂರು: ಗ್ರಾಹಕರಿಂದ ಸುಲಿಗೆ ಮಾಡುತ್ತಿದ್ದ ಓಲಾ, ಉಬರ್ ಕಂಪನಿಗಳು, ಇದೀಗ ಸರ್ಕಾರ ವಾರದಲ್ಲಿ ಹೊಸ ದರ ನಿಗದಿಪಡಿಸಲು ಮುಂದಾಗಿದೆ.
ಪೀಕ್ ಟೈಮ್ ಸೇರಿದಂತೆ ಹಲವು ನೆಪಗಳಲ್ಲಿ ಗ್ರಾಹಕರನ್ನು ಮತ್ತು ಚಾಲಕರನ್ನು ಸುಲಿಯುತ್ತಿದ್ದರು. ಈ ವಾರದಲ್ಲಿ ಹೊಸ ದರ ನಿಗದಿಯಾಲಿದೆ. ಈ ದರವು ಜಿಎಸ್ಟಿಯನ್ನೂ ಒಳಗೊಂಡಿರುತ್ತದೆ ಎಂದು ಮೂಲಗಳು ಹೇಳಿವೆ. ಪ್ರಸ್ತುತ 2 ಕಿಮೀಗೆ ₹ 30 ದರವನ್ನು ಸಾರಿಗೆ ಇಲಾಖೆ ನಿಗದಿಪಡಿಸಿದೆ. ಈ ಹಿಂದೆ ರಾಜ್ಯ ಸರ್ಕಾರವು ಎರಡೂ ಅಗ್ರಿಗೇಟರ್ ಆ್ಯಪ್ ಕಂಪನಿಗಳಿಗೆ ಹೊಸ ದರ ನಿಗದಿಪಡಿಸಲು 15 ದಿನಗಳ ಗಡುವು ನೀಡಿತ್ತು. ಗಡುವು ಸಮೀಪಿಸುತ್ತಿದ್ದಂತೆ ಇದೀಗ ಸರ್ಕಾರವೇ ಹೊಸ ದರ ನಿಗದಿಪಡಿಸಲು ಮುಂದಾಗಿದೆ.
ಗ್ರಾಹಕರಿಂದ ಹೆಚ್ಚುವರಿ ದರ ವಸೂಲು ಮಾಡುವವರ ವಿರುದ್ಧದ ಕಾರ್ಯಾಚರಣೆಯನ್ನು ಬೆಂಗಳೂರು ಪೊಲೀಸರು ಮುಂದುವರಿಸಿದ್ದಾರೆ. ಮಫ್ತಿಯಲ್ಲಿ ಸಾಮಾನ್ಯ ಜನರಂತೆ ಆಟೊಗಳನ್ನು ಬಾಡಿಗೆಗೆ ಕರೆದ ಪೊಲೀಸರು ದುಬಾರಿ ಹಣ ಕೇಳಿದ ಚಾಲಕರು, ಬಾಡಿಗೆಗೆ ಬರಲು ನಿರಾಕರಿಸಿದವರಿಗೆ ದಂಡ ವಿಧಿಸಿದರು.