ಬೆಂಗಳೂರು: ಸದ್ಯ ಕೇಂದ್ರ ಸರ್ಕಾರ ಪಿಎಫ್ ಐ ಸಂಘಟನೆ ಬ್ಯಾನ್ ಮಾಡಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರವು ರಾಜ್ಯದಲ್ಲಿರುವ ಮದರಸಾಗಳ ಮೇಲೆ ಹದ್ದಿನಕಣ್ಣಿಟ್ಟಿದೆ.
ಮದರಸಾಗಳಲ್ಲಿ ಉಗ್ರ ಚಟುವಟಿಕೆಆರೋಪದ ಬಳಿಕ ಎಚ್ಚರ ವಹಿಸಿಕೊಂಡಿದ್ದಾರೆ. ರಾಜ್ಯದ ಮದರಸಾಗಳ ಚಟುವಟಿಕೆ ಅಧ್ಯಯನಕ್ಕೆ ಸಮತಿ ರಚನೆ ಮಾಡಲಾಗಿದೆ. ಉತ್ತರಪ್ರದೇಶ ಮಾದರಿಯಲ್ಲಿ ಮದರಸಾಗಳ ಚಟುವಟಿಕೆ ಅಧ್ಯಯನಕ್ಕೆ ಮುಂದಾಗಿದ್ದಾರೆ. ಇದೀಗ ಮದರಸಾಗಳ ಚಟುವಟಿಕೆ ಕುರಿತು ಸಮಿತಿ ವರದಿ ನೀಡಲಿದ್ದಾರೆ. ಮದರಸಾ ಸಹ ಬ್ಯಾನ್ ಮಾಡುಬೇಕು ಎಂಬ ಒತ್ತಾಯದ ಬೆನ್ನಲ್ಲೇ ಅಧ್ಯಯನಕ್ಕೆ ಶಿಕ್ಷಣ ಇಲಾಖೆ ಪ್ರಕ್ರಿಯೆಗೆ ಮುಂದಾಗಿದೆ.
ಮದರಸಾಗಳಲ್ಲಿ ಉಗ್ರ ಚಟುವಟಿಕೆ ನಡೆಯುತ್ತಿದೆ. ಹಾಗಾಗಿ ಮದರಸಾಗಳ ಬ್ಯಾನ್ ಮಾಡುವಂತೆ ಶಿಕ್ಷಣ ಇಲಾಖೆಗೆ ದೂರುಗಳು ಬಂದ ಹಿನ್ನೆಲೆ ಸರ್ಕಾರ ಅಲರ್ಟ್ ಆಗಿದೆ. ರಾಜ್ಯದ ಮದರಸಾಗಳ ಚಟುವಟಿಕೆ ಅಧ್ಯಯನಕ್ಕೆ ಶಿಕ್ಷಣ ಇಲಾಖೆಯ ಕಮಿಷನರ್ ನೇತೃತ್ವದಲ್ಲಿ ಸಮಿತಿ ರಚನೆ ಮಾಡಿದೆ.