ಬೆಂಗಳೂರು : ಕೇಂದ್ರ ಸರ್ಕಾರ ಕರ್ನಾಟಕ ರಾಜ್ಯಕ್ಕೆ ಅನುದಾನ ನೀಡುವಲ್ಲಿ ಮಲತಾಯಿದೋರಾಣೆ ಅನುಸರಿಸುತ್ತಿರುವುದನ್ನು ಖಂಡಿಸಿ ನಾಳೆ ಕಾಂಗ್ರೆಸ್ ಪಕ್ಷ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ನೇತೃತ್ವದಲ್ಲಿ ದೆಹಲಿಯ ಜಂತರ್ ಮಂತರ್ ನಲ್ಲಿ ಪ್ರತಿಭಟನೆ ಹಮ್ಮಿಕೊಂಡಿದೆ.
ಇದರ ಭಾಗವಾಗಿ ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಡಿಕೆ ಶಿವಕುಮಾರ್ ಸಿರಿಗಂತೆ 136 ಶಾಸಕರು ಸಚಿವರು ಸೇರಿದಂತೆ ಕಾಂಗ್ರೆಸ್ನ ಎಲ್ಲಾ ನಾಯಕರು ದೆಹಲಿಗೆ ತೆರಳಲಿದ್ದಾರೆ.ಈ ಒಂದು ಪ್ರತಿಭಟನೆಯಲ್ಲಿ ಭಾಗಿಯಾಗಲಿದ್ದಾರೆ ಅಲ್ಲದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೂಡ ರಾಜ್ಯಸಂಸದವರಿಗೆ ಪ್ರತಿಭಟನೆಗೆ ಬೆಂಬಲ ಸೂಚಿಸುವಂತೆ ಪತ್ರ ಬರೆದು ಮನವಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ.
ಕಾಂಗ್ರೆಸ್ ನಡೆಸುತ್ತಿರುವ ಈ ಪ್ರತಿಭಟನೆಗೆ ಕೇಂದ್ರ ಸಚಿವ ಪ್ರಹದ ಜೋಶಿ ಅವರು ತಮ್ಮ ಟ್ವೀಟ್ ಖಾತೆಯಲ್ಲಿ ಆಕ್ರೋಶ ಅವರ ಹಾಕಿದ್ದು ಕರ್ನಾಟಕ ಕಾಂಗ್ರೆಸಿಗರೇ ಯಾತಕ್ಕಾಗಿ ದಿಲ್ಲಿ ಚಲೋ ನಾಟಕ? ಎಂದು ಕಿಡಿ ಕಾರಿದ್ದಾರೆ.
1) ಗ್ಯಾರಂಟಿ ಹೆಸರಿನಲ್ಲಿ ಅಭಿವೃದ್ಧಿ ಯೋಜನೆಗಳಿಗೆ ಕನ್ನ ಹಾಕಿದ್ದೀರಲ್ಲಾ, ಅದಕ್ಕಾಗಿ ದಿಲ್ಲಿ ಚಲೋ ನಾಟಕವೇ?
2) ರೈತರ ಮಕ್ಕಳಿಗೆ ನೀಡುತ್ತಿದ್ದ ರೈತನಿಧಿ ರದ್ದುಗೊಳಿಸಿದ್ದೀರಲ್ಲಾ, ಅದಕ್ಕಾಗಿ ದಿಲ್ಲಿ ಚಲೋ ನಾಟಕವೇ?
3) ಧರ್ಮದ ಹೆಸರಿನಲ್ಲಿ ಸಮಾಜದ ಸ್ವಾಸ್ಥ್ಯ ಹಾಳು ಮಾಡುತ್ತಿದ್ದೀರಲ್ಲಾ, ಅದಕ್ಕಾಗಿ ದಿಲ್ಲಿ ಚಲೋ ನಾಟಕವೇ?
4) ತುಷ್ಟೀಕರಣದ ರಾಜಕಾರಣ ಮಾಡಿ ರಾಜ್ಯದ ಜನರ ಶಾಂತಿ ಕದಡಿದ್ದೀರಲ್ಲಾ, ಅದಕ್ಕಾಗಿ ದಿಲ್ಲಿ ಚಲೋ ನಾಟಕವೇ?
5) ಕನ್ನಡದ ಪರ ಹೋರಾಟ ಮಾಡಿದ ಕನ್ನಡಪರ ಸಂಘಟನೆಯ ಕಾರ್ಯಕರ್ತರನ್ನು ಜೈಲಿಗೆ ಕಳುಹಿಸಿ ಕನ್ನಡವಿರೋಧಿ ಎಂಬುದನ್ನು ಸಾಬೀತು ಪಡಿಸಿದ್ದೀರಲ್ಲಾ, ಅದಕ್ಕಾಗಿ ದಿಲ್ಲಿ ಚಲೋ ನಾಟಕವೇ?
6) ರಾಷ್ಟ್ರವನ್ನು ವಿಭಜನೆ ಮಾಡುತ್ತೇವೆ ಎನ್ನುವವರಿಗೆ ನೇರವಾಗಿ ಬೆಂಬಲ ನೀಡಿದ್ದೀರಲ್ಲಾ, ಅದಕ್ಕಾಗಿ ದಿಲ್ಲಿ ಚಲೋ ನಾಟಕವೇ? ಉತ್ತರಿಸಿ ಸಿದ್ದರಾಮಯ್ಯನವರೇ??? ಎಂದು ಜೋಶಿ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಕರ್ನಾಟಕ ಕಾಂಗ್ರೆಸಿಗರೇ….. ಯಾತಕ್ಕಾಗಿ ದಿಲ್ಲಿ ಚಲೋ ನಾಟಕ?
* ಗ್ಯಾರಂಟಿ ಹೆಸರಿನಲ್ಲಿ ಅಭಿವೃದ್ಧಿ ಯೋಜನೆಗಳಿಗೆ ಕನ್ನ ಹಾಕಿದ್ದೀರಲ್ಲಾ, ಅದಕ್ಕಾಗಿ ದಿಲ್ಲಿ ಚಲೋ ನಾಟಕವೇ?
* ರೈತರ ಮಕ್ಕಳಿಗೆ ನೀಡುತ್ತಿದ್ದ ರೈತನಿಧಿ ರದ್ದುಗೊಳಿಸಿದ್ದೀರಲ್ಲಾ, ಅದಕ್ಕಾಗಿ ದಿಲ್ಲಿ ಚಲೋ ನಾಟಕವೇ?
* ಧರ್ಮದ ಹೆಸರಿನಲ್ಲಿ ಸಮಾಜದ ಸ್ವಾಸ್ಥ್ಯ ಹಾಳು… https://t.co/nxBI4jkVYy— Pralhad Joshi (@JoshiPralhad) February 6, 2024