ಬೆಂಗಳೂರು : ಮತದಾರರ ಮಾಹಿತಿ ಕಳ್ಳತನ ನಿಮಗೆ ಹಾಸ್ಯಾಸ್ಪದವೇ? ಎಂದು ಕಾಂಗ್ರೆಸ್ ಟ್ವೀಟ್ ಮೂಲಕ ಬಿಜೆಪಿ ಸರ್ಕಾರದ ವಿರುದ್ಧ ವಾಗ್ಧಾಳಿ ನಡೆಸಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಕಾಂಗ್ರೆಸ್ ಮತದಾರರ ಮಾಹಿತಿ ಕಳ್ಳತನ ನಿಮಗೆ ಹಾಸ್ಯಾಸ್ಪದವೇ? ಅಥವಾ ಸಿಎಂ ಹುದ್ದೆಯ ಜವಾಬ್ದಾರಿಯೇ ನಿಮಗೆ ಹಾಸ್ಯಾಸ್ಪದವೇ? ಚಿಲುಮೆ ಪ್ರಕರಣ ಹಾಸ್ಯಾಸ್ಪದವಾಗಿದ್ದರೆ ಕೆಲವರ ಬಂಧನವಾಗಿದ್ದೇಕೆ? ಸಚಿವ ಅಶ್ವಥ್ ನಾರಾಯಣ್ ಹೌಹಾರುತ್ತಿರುವುದೇಕೆ? ನ್ಯಾಯಾಂಗ ತನಿಖೆಗೆ ನೀಡಲು ಬೆದರುತ್ತಿರುವುದೇಕೆ? ಮತದಾರರೆಂದರೆ ಹಾಸ್ಯವೇ ನಿಮಗೆ? ಎಂದು ಕಿಡಿಕಾರಿದೆ.
ಬಿಜೆಪಿ ಖಾಲಿ ಕುರ್ಚಿಗಳ ಮೂಲಕ ಜನಾಕ್ರೋಶವನ್ನು ಕಾಣುತ್ತಿತ್ತು, ಈಗ ನೇರವಾಗಿ ಜನ ಪ್ರಶ್ನಿಸಲು ಶುರುಮಾಡಿದ್ದಾರೆ. ಸಚಿವರು ಜನರ ಪ್ರಶ್ನೆಗಳಿಗೆ ನಿರುತ್ತರರಾಗಿದ್ದಾರೆ. ಜನ ಬಿಜೆಪಿಗರ ಕೊರಳ ಪಟ್ಟಿ ಹಿಡಿದು ಪ್ರಶ್ನಿಸುವ ಕಾಲ ಸದ್ಯದಲ್ಲೇ ಬರಲಿದೆ. ಮತ ಸಿಗುವುದಿಲ್ಲವೆಂದು ತಿಳಿದ ಮತದಾರರನ್ನೇ ಮಾಯ ಮಾಡಲು ಮುಂದಾಗಿದೆ ಎಂದು ಕಿಡಿಕಾರಿದೆ.
'@BSBommai ಅವರೇ,
ಮತದಾರರ ಮಾಹಿತಿ ಕಳ್ಳತನ ನಿಮಗೆ ಹಾಸ್ಯಾಸ್ಪದವೇ?
ಅಥವಾ ಸಿಎಂ ಹುದ್ದೆಯ ಜವಾಬ್ದಾರಿಯೇ ನಿಮಗೆ ಹಾಸ್ಯಾಸ್ಪದವೇ?ಚಿಲುಮೆ ಪ್ರಕರಣ ಹಾಸ್ಯಾಸ್ಪದವಾಗಿದ್ದರೆ ಕೆಲವರ ಬಂಧನವಾಗಿದ್ದೇಕೆ? ಸಚಿವ ಅಶ್ವಥ್ ನಾರಾಯಣ್ ಹೌಹಾರುತ್ತಿರುವುದೇಕೆ?
ನ್ಯಾಯಾಂಗ ತನಿಖೆಗೆ ನೀಡಲು ಬೆದರುತ್ತಿರುವುದೇಕೆ?ಮತದಾರರೆಂದರೆ ಹಾಸ್ಯವೇ ನಿಮಗೆ? pic.twitter.com/sVIYPXv9Sb
— Karnataka Congress (@INCKarnataka) November 20, 2022
‘ಚಿಲುಮೆ’ ಮೊಬೈಲ್ ಆ್ಯಪ್ ಡೆವಲಪರ್ ಪೊಲೀಸ್ ವಶಕ್ಕೆ ; ತೀವ್ರ ವಿಚಾರಣೆ |Voter ID Scam
ಪಶ್ಚಿಮ ಬಂಗಾಳದ ಸಿಲಿಗುರಿ ಸ್ಲಮ್ ನಲ್ಲಿ ಅಗ್ನಿ ಅವಘಡ : 12 ಮಂದಿಗೆ ಗಾಯ, 50 ಮನೆಗಳು ಬೆಂಕಿಗಾಹುತಿ