ಬೆಂಗಳೂರು : ಮಕ್ಕಳಿಗೆ ಸೈಕಲ್ ನೀಡುವ ಮಹತ್ವದ ಯೋಜನೆ ಕೈ ಬಿಟ್ಟ ರಾಜ್ಯ ಸರ್ಕಾರದ ವಿರುದ್ಧ ಕಾಂಗ್ರೆಸ್ ( Sate Congress ) ವಾಗ್ಧಾಳಿ ನಡೆಸಿದೆ.
ಸೈಕಲ್ ನೀಡುವ ಯೋಜನೆಯನ್ನು ಮರು ಜಾರಿಗೆ ತರಲು ಸಿಎಂ ಬೊಮ್ಮಾಯಿಗೆ ಮಕ್ಕಳು ಪತ್ರ ಬರೆದಿರುವ ವಿಚಾರಕ್ಕೆ ಕಾಂಗ್ರೆಸ್ ಪ್ರತಿಕ್ರಿಯೆ ನೀಡಿದ್ದು, ಟ್ವೀಟ್ ಮೂಲಕ ಕಿಡಿಕಾರಿದೆ.
ಸೈಕಲ್ ನೀಡುವ ಯೋಜನೆಯನ್ನು ಹೇಳದೆ ಕೇಳದೆ ನಿಲ್ಲಿಸಿದ ಸರ್ಕಾರ ಗ್ರಾಮೀಣ ವಿದ್ಯಾರ್ಥಿಗಳಿಗೆ ಸಂಕಟ ತಂದೊಡ್ಡಿದೆ ಎಂದು ಕಾಂಗ್ರೆಸ್ ಟ್ವೀಟ್ ಮೂಲಕ ವಾಗ್ಧಾಳಿ ನಡೆಸಿದೆ. ಸಿಎಂ ಬೊಮ್ಮಾಯಿ ಅವರಿಗೆ ಮಕ್ಕಳು ಮನವಿ ಮಾಡ್ತಿದ್ರೂ ಸ್ಪಂದನೆ ಇಲ್ಲವೇಕೆ? ಶಾಲೆಗೆ ಕೇಸರಿ ಬಣ್ಣ ಬಳಿಯಲು ಇರುವ ಆಸಕ್ತಿ ವಿದ್ಯಾರ್ಥಿಗಳಿಗೆ ಸೈಕಲ್ ಕೊಡುವುದರಲ್ಲಿ ಇಲ್ಲವೇಕೆ? ಕೇಸರಿ ಬಣ್ಣದ್ದಾದರೂ ಸರಿ ಸೈಕಲ್ ಕೊಡಿ ಎಂದು ಕಿಡಿಕಾರಿದೆ.
ಸೈಕಲ್ ನೀಡುವ ಯೋಜನೆಯನ್ನು ಹೇಳದೆ ಕೇಳದೆ ನಿಲ್ಲಿಸಿದ ಸರ್ಕಾರ ಗ್ರಾಮೀಣ ವಿದ್ಯಾರ್ಥಿಗಳಿಗೆ ಸಂಕಟ ತಂದೊಡ್ಡಿದೆ.#ಸಿಎಂಅಂಕಲ್ @BSBommai ಅವರಿಗೆ ಮಕ್ಕಳು ಮನವಿ ಮಾಡ್ತಿದ್ರೂ ಸ್ಪಂದನೆ ಇಲ್ಲವೇಕೆ?
ಶಾಲೆಗೆ ಕೇಸರಿ ಬಣ್ಣ ಬಳಿಯಲು ಇರುವ ಆಸಕ್ತಿ ವಿದ್ಯಾರ್ಥಿಗಳಿಗೆ ಸೈಕಲ್ ಕೊಡುವುದರಲ್ಲಿ ಇಲ್ಲವೇಕೆ?
ಕೇಸರಿ ಬಣ್ಣದ್ದಾದರೂ ಸರಿ ಸೈಕಲ್ ಕೊಡಿ. pic.twitter.com/GapvRUeuno— Karnataka Congress (@INCKarnataka) November 14, 2022