ಬೆಂಗಳೂರು: ಮಕ್ಕಳ ಅಚ್ಚುಮೆಚ್ಚಿನ ಕ್ಯಾಂಡಿಯಲ್ಲಿ ಬೆಚ್ಚಿ ಬೀಳಿಸೋ ಕ್ಯಾನ್ಸರ್ ಕಾರಕ ಅಂಶ ಪರೀಕ್ಷೆಯಲ್ಲಿ ಪತ್ತೆಯಾಗಿದೆ. ಈ ಹಿನ್ನಲೆಯಲ್ಲಿ ಕರ್ನಾಟಕದಲ್ಲೂ ಮಕ್ಕಳ ಫೇವರಿಟ್ ಬಾಂಬೆ ಮಿಠಾಯಿ ನಿಷೇಧಕ್ಕೆ ಚಿಂತನೆಯನ್ನು ಸರ್ಕಾರ ನಡೆಸಿದೆ ಎಂಬುದಾಗಿ ಹೇಳಲಾಗುತ್ತಿದೆ.
ತಮಿಳುನಾಡು ಹಾಗೂ ಪುದುಚೇರಿಯಲ್ಲಿ ಈಗಾಗಲೇ ಬಣ್ಣದ ಬಾಂಬೆ ಮಿಠಾಯಿಯನ್ನು ಬ್ಯಾನ್ ಮಾಡಲಾಗಿದೆ. ಇದಕ್ಕೆ ಕಾರಣ ತಮಿಳುನಾಡು ಸರ್ಕಾರ ನಡೆಸಿದಂತ ಪರೀಕ್ಷೆಯಲ್ಲಿ ಕ್ಯಾನ್ಸರ್ ಕಾರಕ ಅಂಶ ಪತ್ತೆಯಾಗಿರೋದಾಗಿದೆ.
ಈ ಹಿನ್ನಲೆಯಲ್ಲೇ ತಮಿಳುನಾಡು, ಪುದುಚೇರಿ ಸರ್ಕಾರದಿಂದ ಬಣ್ಣದ ಬಾಂಬೆ ಮಿಠಾಯಿ ಮಾರಾಟವನ್ನು ನಿಷೇಧಿಸಲಾಗಿದೆ. ಈ ಬೆನ್ನಲ್ಲೇ ಕರ್ನಾಟಕದಲ್ಲೂ ಕ್ಯಾಂಡಿ ನಿಷೇಧಕ್ಕೆ ಚಿಂತನೆ ನಡೆಸಿರೋದಾಗಿ ಹೇಳಲಾಗುತ್ತಿದೆ.
ಇದಕ್ಕೂ ಮುನ್ನಾ ಬಾಂಬೆ ಮಿಠಾಯಿಯಲ್ಲಿ ಕ್ಯಾನ್ಸರ್ ಕಾರಕ ಅಂಶ ಇದ್ಯಾ ಎಂಬುದಾಗಿ ಪತ್ತೆ ಹಚ್ಚೋದಕ್ಕೆ ಪರೀಕ್ಷೆಗಾಗಿ ಪ್ರಯೋಗಾಲಯಕ್ಕೂ ಕಳುಹಿಸಲಾಗಿದೆ ಸರ್ಕಾರ ಎನ್ನಲಾಗುತ್ತಿದೆ. ಈ ಪ್ರಯೋಗಾಲಯದ ಪರೀಕ್ಷೆಯ ವರದಿಯ ಬಳಿಕ ಕರ್ನಾಟಕದಲ್ಲೂ ಕ್ಯಾಂಡಿ ಬ್ಯಾನ್ ಆಗೋದು ಫಿಕ್ಸ್ ಎನ್ನಲಾಗುತ್ತಿದೆ. ಆ ಬಗ್ಗೆ ಕಾದು ನೋಡಬೇಕಿದೆ.
ಅಂದು ಘಜ್ನಿ, ಇಂದು ‘ಸಿದ್ಧರಾಮಯ್ಯ ಸರ್ಕಾರ’ ದೇವಾಲಯಗಳ ‘ಲೂಟಿ’- ಬಿಜೆಪಿ ಕಿಡಿ
BREAKING : ಶಾಲಾ ಮಕ್ಕಳಿಗೆ ‘ರಾಗಿ ಮಾಲ್ಟ್’ ಕುಡಿಸುವ ಮೂಲಕ ಯೋಜನೆಗೆ ಸಿಎಂ ಸಿದ್ದರಾಮಯ್ಯ ಚಾಲನೆ