ಉಡುಪಿ : ನಗರದ ವಾದಿರಾಜ ರಸ್ತೆಯ ಮನೆಯೊಂದರಲ್ಲಿ ಸುಟ್ಟ ಸ್ಥಿತಿಯಲ್ಲಿ ಕರ್ನಾಟಕ ಬ್ಯಾಂಕ್ ನ ಲೀಗಲ್ ಆಫೀಸರ್ ಮೃತದೇಹ ಪತ್ತೆಯಾಗಿದೆ.
ಹೈದರಾಬಾದ್ ಶಾಖೆಯಲ್ಲಿ ಹಲವು ವರ್ಷಗಳಿಂದ ಕೆಲಸ ಮಾಡುತ್ತಿದ್ದ ರಾಜ್ ಗೋಪಾಲ್ ಒಂದು ತಿಂಗಳ ಹಿಂದೆ ಮಂಗಳೂರಿಗೆ ವರ್ಗಾವಣೆಯಾಗಿದ್ದರು. ಇಂದು ಅವರ ಮನೆ ಕೋಣೆಯಿಂದ ದಟ್ಟವಾದ ಹೊಗೆ ಬರುತ್ತಿರುವುದನ್ನು ಕಂಡ ಸ್ಥಳೀಯರು ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದಾರೆ.
ಘಟನೆ ನಡೆದ ಸ್ಥಳಕ್ಕೆ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದು ಆತ್ಮಹತ್ಯೆನಾ ಅಥವಾ ಕೊಲೆನಾ ಎಂಬ ಅನುಮಾಬನ ವ್ಯಕ್ತವಾಗಿದೆ. ಇನ್ನೂ, ಮೊಬೈಲ್ ಸ್ಪೋಟದಿಂದ ಬೆಂಕಿ ಹತ್ತಿರಬಹುದೆಂದು ಪೊಲೀಸರು ಶಂಕೆ ವ್ಯಕ್ತವಾಗಿದೆ. ಮೃತರನ್ನು ನಿವೃತ್ತ ಪೊಲೀಸ್ ಅಧಿಕಾರಿ ಕೃಷ್ಣ ಸಾಮಗ ಅವರ ಮಗ ಕರ್ನಾಟಕ ಬ್ಯಾಂಕ್ ನ ಲೀಗಲ್ ಆಫೀಸರ್ ರಾಜು ಗೋಪಾಲ್ ಸಾಮಗ (42) ಎಂದು ಗುರುತಿಸಲಾಗಿದೆ.
BREAKING NEWS: ಮುರುಘಾ ಮಠದ ಮಾಜಿ ಆಡಳಿತಾಧಿಕಾರಿ ಎಸ್.ಕೆ ಬಸವರಾಜನ್ ಗೆ ಮೊಬೈಲ್ ಕೊಟ್ಟ ಸಿಪಿ ಸಸ್ಪೆಂಡ್
BREAKING NEWS: ಯಾದಗಿರಿಯಲ್ಲಿ ಆನೆಕಾಲು ರೋಗ ತಡೆ ಮಾತ್ರೆ ಸೇವಿಸಿದ 20ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ