ಬೆಂಗಳೂರು : 2025ನೇ ಸಾಲಿನ ಕರ್ನಾಟಕ ವೃತ್ತಿಗಳ, ಕಸುಬುಗಳ, ಅಜೀವಿಕೆಗಳ ಮತ್ತು ಉದ್ಯೋಗಗಳ ಮೇಲಣ ತೆರಿಗೆ (ತಿದ್ದುಪಡಿ) ವಿಧೇಯಕವನ್ನು ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಸಚಿವರಾದ ಹೆಚ್.ಕೆ.ಪಾಟೀಲ್ ಅವರು ವಿಧಾನಸಭೆಯಲ್ಲಿ ಅಂಗೀಕರಿಸಲು ಕೋರಿದರು. ವಿಧೇಯಕವು ಸರ್ವಾನುಮತದಿಂದ ವಿಧಾನಸಭೆಯಲ್ಲಿ ಅಂಗೀಕಾರವಾಯಿತು.
ಕರ್ನಾಟಕ ಲೋಕಸೇವಾ ಆಯೋಗ (ವ್ಯವಹಾರ ನಿರ್ವಹಣೆ ಮತ್ತು ಹೆಚ್ಚುವರಿ ಪ್ರಕಾರ್ಯಗಳು) (ತಿದ್ದುಪಡಿ) ವಿಧೇಯಕ ವಿಧಾನಸಭೆಯಲ್ಲಿ ಅಂಗೀಕಾರ
ಕರ್ನಾಟಕ ಲೋಕಸೇವಾ ಆಯೋಗ (ವ್ಯವಹಾರ ನಿರ್ವಹಣೆ ಮತ್ತು ಹೆಚ್ಚುವರಿ ಪ್ರಕಾರ್ಯಗಳು) (ತಿದ್ದುಪಡಿ) ವಿಧೇಯಕವನ್ನು ಕಾನೂನು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಸಚಿವರಾದ ಹೆಚ್.ಕೆ.ಪಾಟೀಲ್ ಅವರು ವಿಧಾನಸಭೆಯಲ್ಲಿ ಅಂಗೀಕರಿಸಲು ಕೋರಿದರು.
ಸಚಿವರು ಕರ್ನಾಟಕ ಲೋಕಸೇವಾ ಆಯೋಗ (ವ್ಯವಹಾರ ನಿರ್ವಹಣೆ ಮತ್ತು ಹೆಚ್ಚುವರಿ ಪ್ರಕಾರ್ಯಗಳು) ಅಧಿನಿಯಮ 1959ನ್ನು ತಿದ್ದುಪಡಿ ಮಾಡುವುದು ಅವಶ್ಯಕವೆಂದು ಪರಿಗಣಿಸಿದೆ. ಈ ವಿಧೇಯಕವು ಪರೀಕ್ಷ ನಿಯಂತ್ರಕ ಮತ್ತು ಜಂಟಿ ಪರೀಕ್ಷ ನಿಯಂತ್ರಕ ಎಂಬ ಪದಗಳನ್ನು ಪರಿಭಾಷಿಸಲು, ಆಯೋಗವು ನಿರ್ಣಯ ತೆಗೆದುಕೊಳ್ಳುವಲ್ಲಿ ಆಗುವ ವಿಳಂಬವನ್ನು ತಡೆಯುವ ಸಂಬಂಧ, ಸುತ್ತೋಲೆಯ ಮೂಲಕ ನಿರ್ಣಯಗಳನ್ನು ಕೈಗೊಳ್ಳುವುದಕ್ಕೆ ಸಂಬಂಧಿಸಿದ ಉಪಬಂಧವನ್ನು ತೆಗೆದು ಹಾಕುವುದು, ಆಯೋಗದ ಸಭೆಗಾಗಿ ಅಧ್ಯಕ್ಷರನ್ನು ಒಳಗೊಂಡು ಸೇವೆ ಸಲ್ಲಿಸುತ್ತಿರುವ ಸದಸ್ಯರುಗಳ ಶೇಕಡಾ ಐವತ್ತರಷ್ಟುನ್ನು ಕೋರಂ ಆಗಿ ನಿಗದಿಪಡಿಸುವುದು. ಆಯೋಗವು ಅಧಿಕೃತಗೊಳಿಸಿದ ಯಾರೇ ಒಬ್ಬ ಸದಸ್ಯನು ನೇಮಕಾತಿಗಾಗಿ ಅಭ್ಯರ್ಥಿಗಳ ಸಂದರ್ಶನವನ್ನು ಮಾಡಲು ಉಪಬಂಧ ಕಲ್ಪಿಸಬಹುದು ಮತ್ತು ಕೆಲವು ಇತರೆ ಅನುಷಂಗಿಕ ತಿದ್ದುಪಡಿಗಳನ್ನು ಸಹ ಮಾಡಲಾಗಿದೆ ಎಂದು ವಿಧೇಯಕದ ಕುರಿತು ಸದನಕ್ಕೆ ವಿವರಿಸಿ ವಿಧೇಕಯವನ್ನು ಪರ್ಯಾಲೋಚಿಸಲು ಕೋರಿದರು.
ವಿರೋಧಪಕ್ಷದ ನಾಯಕರು ಕೆ.ಪಿ.ಎಸ್.ಸಿ ಗೆ ಹೊಸ ಕಾಯಕಲ್ಪ ತರುವುದು ನಮ್ಮೆಲ್ಲರ ಕರ್ತವ್ಯ. ಯುಪಿಎಸ್ಸಿ ಮಾದರಿಯಲ್ಲಿ ಕೆ.ಪಿ.ಎಸ್.ಸಿಯನ್ನು ರೂಪುಗೊಳಿಸಬೇಕು ಎಂದು ತಿಳಿಸಿ ವಿಧೇಯಕಕ್ಕೆ ಬೆಂಬಲ ವ್ಯಕ್ತಪಡಿಸಿದರು.
ಸದಸ್ಯರಾದ ತನ್ವೀರ್ ಸೇಠ್ ರವರು ಕೆ.ಪಿ.ಎಸ್.ಸಿ ವಿಧೇಯಕ ತಿದ್ದುಪಡಿಗೆ ಬೆಂಬಲ ವ್ಯಕ್ತಪಡಿಸಿ ಕೆ.ಪಿ.ಎಸ್.ಸಿಯು ಪರಿಣಾಮಕಾರಿಯಾಗಿ ಕೆಲಸ ಮಾಡಿದ್ದಲ್ಲಿ ಮಾತ್ರ ಉತ್ತಮ ಆಡಳಿತ ನೀಡಲು ಸಾಧ್ಯವಾಗುತ್ತದೆ. ಯು.ಪಿ.ಎಸ್.ಸಿ ಮಾದರಿಯಲ್ಲಿ ಬಲಪಡಿಸಬೇಕೆಂದು ತಿಳಿಸಿದರು. ವಿಧಾನಸಭೆಯ ಸದಸ್ಯರಾದ ಡಾ:ಅಶ್ವತ್ಥ್ ನಾರಾಯಣ, ಸುರೇಶ್ ಕುಮಾರ್, ಅರಗ ಜ್ಞಾನೇಂದ್ರ, ಯತ್ನಾಳ್, ಇನ್ನಿತರ ಸದಸ್ಯರು ವಿಧೇಯಕಕ್ಕೆ ಬೆಂಬಲ ವ್ಯಕ್ತಪಡಿಸಿ ಕೆ.ಪಿ.ಎಸ್.ಸಿಯು ಪ್ರಾಮಾಣಿಕವಾಗಿ, ಭ್ರಷ್ಟಚಾರ ರಹಿತವಾಗಿ ಕೆಲಸಮಾಡಬೇಕು. ಕೆ.ಪಿ.ಎಸ್.ಸಿ ಯು ಸಹ ಯು.ಪಿ.ಎಸ್.ಸಿ ಮಾದರಿಯಲ್ಲೇ ಕೆಲಸ ನಿರ್ವಹಿಸಬೇಕು, ಕೆ.ಪಿ.ಎಸ್ ಸಿ ಯನ್ನು ಶುದ್ದೀಕರಣ ಮಾಡುವುದು ಸರ್ಕಾರದ ಆದ್ಯತೆ ಆಗಬೇಕು ಎಂದು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿ ಬೆಂಬಲ ವ್ಯಕ್ತಪಡಿಸಿದರು.
ಸಚಿವರಾದ ಹೆಚ್.ಕೆ. ಪಾಟೀಲ್ ರವರು ವಿಧೇಯಕದ ಬಗ್ಗೆ ಚರ್ಚಿಸಿ ಬೆಂಬಲ ವ್ಯಕ್ತಪಡಿಸಿ ಬಿಲ್ ನ್ನು ಅಂಗೀಕಾರ ಮಾಡಲು ಒಪ್ಪಿರುವುದನ್ನು ಸ್ವಾಗತಿಸಿ ಮುಂದಿನ ದಿನಗಳಲ್ಲಿ ಕೆ.ಪಿ.ಎಸ್.ಸಿ ಗೆ ಉತ್ತಮ ವ್ಯವಸ್ಥೆ ನಿರ್ಮಾಣ ಮಾಡಲು ಈ ವಿಧೇಯಕದಲ್ಲಿ ಅವಕಾಶವನ್ನು ಕಲ್ಪಿಸಲಾಗಿದೆ ಎಂದು ತಿಳಿಸಿದರು. ವಿಧೇಯಕವು ಸರ್ವಾನುಮತದಿಂದ ಅಂಗೀಕಾರಗೊಂಡಿತು.
BREAKING: ವಿಧಾನಸಭೆಯಲ್ಲಿ ‘ಕರ್ನಾಟಕ ಲೋಕಸೇವಾ ಆಯೋಗ’ದ ತಿದ್ದುಪಡಿ ವಿಧೇಯಕ ಅಂಗೀಕಾರ
ಭದ್ರಾವತಿಯ ಉರಗಡೂರು ಗ್ರಾಮದ ರೈತರಿಗೆ ಮಾನವೀಯತೆ ಆಧಾರದಡಿ ಪರಿಹಾರ: ಸಾಮಾನ್ಯ ದರದಲ್ಲಿ ನಿವೇಶನ