ಬೆಂಗಳೂರು: ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆಯ ( Karnataka Teacher Eligibility Test – KAR TET ) ನಂತ್ರ ಕೀ ಉತ್ತರಗಳನ್ನು ( Key Answer ) ಪ್ರಕಟಿಸಲಾಗಿತ್ತು. ಈ ಕೀ-ಉತ್ತರಗಳಿಗೆ ಸಲ್ಲಿಕೆಯಾದಂತ ಆಕ್ಷೇಪಗಳ ನಂತ್ರ, ಅಂತಿಮ ಕೀ-ಉತ್ತರವನ್ನು ಪ್ರಕಟಿಸಲಾಗಿದೆ.
ಈ ಕುರಿತಂತೆ ಸಾರ್ವಜನಿಕ ಶಿಕ್ಷಣ ಇಲಾಖೆಯ ( School Education Department ) ಆಯುಕ್ತರು ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದು, ದಿನಾಂಕ 06-11-2022ರಂದು ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆ ( KARTET-2022)ಯನ್ನು ನಡೆಸಲಾಗಿತ್ತು. ಈ ಪರೀಕ್ಷೆಯ ಪತ್ರಿಕೆ-1 ಮತ್ತು ಪತ್ರಿಕೆ-2ರ ಕೀ-ಉತ್ತರಗಳನ್ನು ದಿನಾಂಕ 09-11-2022ರಂದು ಪ್ರಕಟಿಸಲಾಗಿತ್ತು ಎಂದಿದೆ.
ಪ್ರಕಟಿತ ಕೀ-ಉತ್ತರಗಳಿಗೆ ಸಂಬಂಧಿಸಿದಂತೆ ಆಕ್ಷೇಪಣೆಗಳನ್ನು ದಿನಾಂಕ 10-11-2022 ರಿಂದ 17-11-2022ರವರೆಗೆ ಅವಕಾಶ ನೀಡಲಾಗಿತ್ತು. ಇದೀಗ ಅಭ್ಯರ್ಥಿಗಳಿಂದ ಸ್ವೀಕರಿಸಲಾದಂತ ಆಕ್ಷೇಪಗಳ ನಂತ್ರ, ವಿಷಯ ಪರಿಣಿತರ ಸಮಿತಿಯಿಂದ ಅಂತಿಮ ಕೀ-ಉತ್ತರಗಳನ್ನು ಇಲಾಖೆಯ ವೆಬ್ ಸೈಟ್ www.schooleducation.kar.nic.in ದಲ್ಲಿ ಪ್ರಕಟಿಸಲಾಗಿದೆ ಎಂದು ತಿಳಿಸಿದ್ದಾರೆ.
ವರದಿ: ವಸಂತ ಬಿ ಈಶ್ವರಗೆರೆ
BIGG NEWS : ರಾಜ್ಯದ ಶಾಲಾ-ಕಾಲೇಜುಗಳಲ್ಲಿ ಇಂದು ‘ಸಂವಿಧಾನ ದಿನ’ ಆಚರಿಸುವಂತೆ ಶಿಕ್ಷಣ ಇಲಾಖೆ ಆದೇಶ
ಆಕಸ್ಮಿಕ ಧನ ಲಾಭದ ಕನಸು ಕಾಣುತ್ತಿದ್ದೀರಾ ಹಾಗಿದ್ದರೆ ಈ ವಿಶೇಷ ಅನುಷ್ಠಾನ ತಂತ್ರ ಮಾಡಿ ಸಾಕು