Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಉದ್ಯೋಗಿಗಳೇ ಗಮನಿಸಿ : `ಸ್ಯಾಲರಿ ಅಕೌಂಟ್’ ಇದ್ರೆ ನಿಮಗೆ ಸಿಗಲಿದೆ ಈ ಆರ್ಥಿಕ ಪ್ರಯೋಜನಗಳು !

20/02/2026 1:50 PM

ALERT : ಮೊಬೈಲ್ ‘ಬ್ಯಾಕ್ ಕವರ್’ ನಲ್ಲಿ ಈ ವಸ್ತುಗಳನ್ನು ಇಡಬೇಡಿ : ಫೋನ್ ಸ್ಪೋಟಗೊಳ್ಳಬಹುದು ಎಚ್ಚರ !

20/02/2026 1:34 PM

BREAKING: ಕುಲದೀಪ್ ಸಿಂಗ್ ಸೆಂಗಾರ್ ಸಹೋದರನಿಗೆ ಶರಣಾಗುವಂತೆ ದೆಹಲಿ ಹೈಕೋರ್ಟ್ ಆದೇಶ | Unnao Case

20/02/2026 1:32 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ‘ಕಪಟ ನಾಟಕ ಸೂತ್ರಧಾರಿ’ಯ ಟ್ರೈಲರ್ ಬಿಡುಗಡೆ: ಜುಲೈ.4ರಂದು ಚಿತ್ರ ತೆರೆಗೆ
FILM

‘ಕಪಟ ನಾಟಕ ಸೂತ್ರಧಾರಿ’ಯ ಟ್ರೈಲರ್ ಬಿಡುಗಡೆ: ಜುಲೈ.4ರಂದು ಚಿತ್ರ ತೆರೆಗೆ

By kannadanewsnow0920/06/2025 4:57 PM

ಕೆಎನ್ಎನ್ ಸಿನಿಮಾ ಡೆಸ್ಕ್: ಸ್ಯಾಂಡಲ್ ವುಡ್ ನಿರ್ದೇಶಕ ಧೀರಜ್ ಎಂ.ವಿ ನಿರ್ದೇಶನದ, ಅಭಿರಾಮ ಅರ್ಜುನ ಬ್ಯುಸಿನೆಸ್ ಹೆಡ್ ಆಗಿ ಕಾರ್ಯನಿರ್ವಹಿಸಿರುವ ಕಪಟ ನಾಟಕ ಸೂತ್ರಧಾರಿ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಈ ಚಿತ್ರವು ಜುಲೈ.4ರಂದು ತೆರೆಗೆ ಬರಲಿದೆ.

ಜುಲೈ.4ರಂದು ತೆರೆಗಾಣಲಿರುವ ಈ ಸಿನಿಮಾದ ಪ್ರಧಾನ ಕಥಾ ಸುಳಿವೊಂದು ಹೊರಬಿದ್ದಿದೆ. ಭಾರತದ ಪ್ರಥಮ ನ್ಯೂ ಏಜ್ ಪೊಲಿಟಿಕಲ್ ಸಟೈರ್ ಸಿನಿಮಾ ಎಂಬುದೂ ಸೇರಿದಂತೆ ಒಂದಷ್ಟು ವಿಶೇಷತೆಗಳ ಮೂಲಕ ಗಮನ ಸೆಳೆದುಕೊಂಡಿದ್ದ ಚಿತ್ರ ಇದಾಗಿದೆ.

ಬಿಡುಗಡೆಗೆ ಕೆಲ ದಿನಗಳು ಬಾಕಿ ಇರುವಾಗಲೇ ಚಿತ್ರತಂಡ ಟ್ರೈಲರ್ ಯೂಟ್ಯೂಬ್ ನಲ್ಲಿ ಸದ್ದು ಮಾಡಿದೆ. ನಮ್ಮ ಸಮಾಜದಲ್ಲಿನ ಪ್ರಸ್ತುತ ಸ್ಥಿತಿಗತಿಗತಿಗಳನ್ನು ಕಣ್ಣೆದುರು ತರುವಂಥಾ ದೃಶ್ಯಗಳ ಮೂಲಕ ಈ ಟ್ರೈಲರ್ ಒಂದಷ್ಟು ಚರ್ಚೆಗೆ ಗ್ರಾಸವಾಗುತ್ತಿದೆ.

ಈ ನೆಲದ ಜನಸಾಮಾನ್ಯರಲ್ಲಿ ಸಹಜವಾಗಿ ನೆಲೆಗೊಂಡಿರುವ ಧಾರ್ಮಿಕ ಭಾವನೆಗಳು ರಾಜಕಾರಣದ ಕಪಿಮುಷ್ಠಿಗೆ ಸಿಲುಕಿಕೊಂಡಿರುವ ಕಾಲಮಾನವಿದು. ಒಂದು ಸಮುದಾಯದ ನಂಬಿಕೆಯ ತಾಣಕ್ಕೆ ಮತ್ತೊಂದು ಸಮುದಾಯದ ಯುವಕ ಸಹಜ ಕುತೂಹಲದಿಂದ ಭೇಟಿ ನೀಡಿದಾಗ ಘಟಿಸುವ ಕಥನದ ಬಿಂದುವಿನಿಂದ ರೋಚಕ ಕಥನವೊಂದು ಬಿಚ್ಚಿಕೊಳ್ಳುವ ಬಿಂದುವೊಂದು ಈ ಟ್ರೈಲರಿನಲ್ಲಿ ಕಾಣಬಹುದು.

ಸಹಜವಾದ ದೃಶ್ಯಗಳ ಮೂಲಕ, ಗಹನಾದ ಕಥೆ ಹೇಳ ಹೊರಟಂತೆ ಭಾಸವಾಗುವ ಟ್ರೈಲರ್ ಮೂಲಕ ಕಪಟ ನಾಟಕ ಸೂತ್ರಧಾರಿ ಪ್ರೇಕ್ಷಕರನ್ನು ಸೆಳೆದಿದೆ.

ಹೊಸಬರೇ ಸೇರಿ ಈ ಸಿನಿಮಾವನ್ನು ರೂಪಿಸಿದ್ದಾರೆ. ಈ ಹಿಂದೆ ಫಸ್ಟ್ ಲುಕ್ ಸೇರಿದಂತೆ ಒಂದಷ್ಟು ಬಗೆಯಲ್ಲಿ ಚಿತ್ರತಂಡ ಪ್ರೇಕ್ಷಕರನ್ನು ಮುಖಾಮುಖಿಯಾಗಿತ್ತು. ಈ ಮೂಲಕ ಮೂಡಿಕೊಂಡಿದ್ದ ಕುತೂಹಲದ ನಡುವೆಯೇ ಟ್ರೈಲರ್ ಲಾಂಚ್ ಆಗಿದೆ.  ವಿಎಸ್ ಕೆ ಸಿನಿಮಾಸ್ ಬ್ಯಾನರಿನಡಿಯಲ್ಲಿ ಈ ಚಿತ್ರವನ್ನು ನಿರ್ಮಾಣ ಮಾಡಲಾಗಿದೆ. ಅಭಿರಾಮ ಅರ್ಜುನ ಈ ಸಿನಿಮಾದ ಬ್ಯುಸಿನೆಸ್ ಹೆಡ್ ಆಗಿ ಕಾರ್ಯ ನಿರ್ವಹಿಸಿರುವುದಲ್ಲದೆ, ಪ್ರಧಾನ ಪಾತ್ರಕ್ಕೆ ಜೀವ ತುಂಬಿದ್ದಾರೆ.

ಐಟಿ ವಲಯದಿಂದ ಬಂದಿರುವ ಧೀರಜ್ ಎಂ.ವಿ ಈ ಮೂಲಕ ಸ್ವತಂತ್ರ ನಿರ್ದೇಶಕರಾಗಿದ್ದಾರೆ. ವೀರೇಶ್ ಎನ್ ಟಿ ಎ ಛಾಯಾಗ್ರಹಣ, ಪ್ರಸನ್ನ ಕುಮಾರ್ ಎಂ.ಎಸ್ ಸಂಗೀತ ನಿರ್ದೇಶನ ಹಾಗೂ ಮುರಳಿ ಶಂಕರ್ ಸಹ ನಿರ್ದೇಶನವಿರುವ ಈ ಚಿತ್ರದಲ್ಲಿ ಹರೀಶ್ ರಂಗರಾವ್ ಕ್ರಿಯೇಟಿವ್ ಹೆಡ್ ಆಗಿ, ವರುಣ್ ಗುರುರಾಜ್ ಪ್ರೊಡಕ್ಷನ್ ಹೆಡ್ ಆಗಿ ಕಾರ್ಯನಿರ್ವಹಿಸಿದ್ದಾರೆ. ಕಪಟ ನಾಟಕ ಸೂತ್ರಧಾರಿ ಜುಲೈ.4ರಂದು ಪ್ರೇಕ್ಷಕರ ಮುಂದೆ ಬಲಿದೆ.

Share. Facebook Twitter LinkedIn WhatsApp Email

Related Posts

ಫೆ.26ಕ್ಕೆ ನಟಿ ರಶ್ಮಿಕಾ ಮಂದಣ್ಣ-ನಟ ವಿಜಯ್ ದೇವರಕೊಂಡ ಮದುವೆ? ಆಮಂತ್ರಣ ಪತ್ರಿಕೆ ವೈರಲ್ | Rashmika Mandanna

16/02/2026 3:57 PM2 Mins Read

ಗಿಲ್ಲಿ ನಾಯಕನಾಗಿ ನಟಿಸಿರುವ `ಸೂಪರ್ ಹಿಟ್’ ಚಿತ್ರ ಫೆಬ್ರವರಿ 27ರಂದು ತೆರೆಗೆ!

10/02/2026 9:43 AM3 Mins Read

‘ದಿ ಕೇರಳ ಸ್ಟೋರಿ 2: ಗೋಸ್ ಬಿಯಾಂಡ್’ ಟೀಸರ್ ಬಿಡುಗಡೆ | The Kerala Story 2 Teaser

30/01/2026 2:13 PM1 Min Read
Recent News

ಉದ್ಯೋಗಿಗಳೇ ಗಮನಿಸಿ : `ಸ್ಯಾಲರಿ ಅಕೌಂಟ್’ ಇದ್ರೆ ನಿಮಗೆ ಸಿಗಲಿದೆ ಈ ಆರ್ಥಿಕ ಪ್ರಯೋಜನಗಳು !

20/02/2026 1:50 PM

ALERT : ಮೊಬೈಲ್ ‘ಬ್ಯಾಕ್ ಕವರ್’ ನಲ್ಲಿ ಈ ವಸ್ತುಗಳನ್ನು ಇಡಬೇಡಿ : ಫೋನ್ ಸ್ಪೋಟಗೊಳ್ಳಬಹುದು ಎಚ್ಚರ !

20/02/2026 1:34 PM

BREAKING: ಕುಲದೀಪ್ ಸಿಂಗ್ ಸೆಂಗಾರ್ ಸಹೋದರನಿಗೆ ಶರಣಾಗುವಂತೆ ದೆಹಲಿ ಹೈಕೋರ್ಟ್ ಆದೇಶ | Unnao Case

20/02/2026 1:32 PM

ರಹಸ್ಯ IRCTC ಸೆಟ್ಟಿಂಗ್ ನೊಂದಿಗೆ ತತ್ಕಾಲ್ ಟಿಕೆಟ್ ಗಳನ್ನು ವೇಗವಾಗಿ ಕಾಯ್ದಿರಿಸುವುದು ಹೇಗೆ ?

20/02/2026 1:23 PM
State News
KARNATAKA

ಉದ್ಯೋಗಿಗಳೇ ಗಮನಿಸಿ : `ಸ್ಯಾಲರಿ ಅಕೌಂಟ್’ ಇದ್ರೆ ನಿಮಗೆ ಸಿಗಲಿದೆ ಈ ಆರ್ಥಿಕ ಪ್ರಯೋಜನಗಳು !

By kannadanewsnow5720/02/2026 1:50 PM KARNATAKA 2 Mins Read

ಬೆಂಗಳೂರು :ಸಂಬಳ ಪಡೆಯುವ ಉದ್ಯೋಗಿಗಳು ಬ್ಯಾಂಕಿನಲ್ಲಿ ಸಂಬಳ ಖಾತೆಯನ್ನು ಹೊಂದಿರುತ್ತಾರೆ. ಅವರ ಮಾಸಿಕ ವೇತನವನ್ನು ಈ ಖಾತೆಯಲ್ಲಿ ಜಮಾ ಮಾಡಲಾಗುತ್ತದೆ.…

ALERT : ಮೊಬೈಲ್ ‘ಬ್ಯಾಕ್ ಕವರ್’ ನಲ್ಲಿ ಈ ವಸ್ತುಗಳನ್ನು ಇಡಬೇಡಿ : ಫೋನ್ ಸ್ಪೋಟಗೊಳ್ಳಬಹುದು ಎಚ್ಚರ !

20/02/2026 1:34 PM

ಇದು ವಿಶ್ವದ ಅತ್ಯಂತ ದುಬಾರಿ ಅಕ್ಕಿ : ಇದರ ಬೆಲೆ ಕೆಜಿಗೆ 15,000 ರೂ.!

20/02/2026 1:15 PM

BREAKING : ಬಾಗಲಕೋಟೆ ಮತ್ತಷ್ಟು ಉದ್ವಿಗ್ನ : ಮಾಂಸದಂಗಡಿಗಳ ಮೇಲೆ ಮತ್ತೆ ಕಲ್ಲು ತೂರಾಟ, ಪೊಲೀಸರಿಂದ ಲಾಠಿಚಾರ್ಜ್ !

20/02/2026 1:09 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.