ಬೆಂಗಳೂರು : ರಿಷಬ್ ಶೆಟ್ಟಿ ನಿರ್ದೇಶಿಸಿ ನಟಿಸಿರುವ ಕಾಂತಾರ ಚಿತ್ರವು ಇಡೀ ವಿಶ್ವವೇ ಮೆಚ್ಚಿಕೊಂಡು ರೆಕಾರ್ಡ್ ಮಾಡುತ್ತಿದೆ. “ಕಾಂತಾರ ಸಿನಿಮಾ “ತುಳುನಾಡಿನ ಸಂಸ್ಕೃತಿಯನ್ನು ಪ್ರಪಂಚದಾದ್ಯಂತ ಪಸರಿಸಿದ ಹೆಮ್ಮೆಯಾಗಿದ್ದು. ಕನ್ನಡ, ಹಿಂದಿ ಸೇರಿದಂತೆ ಬಹುಭಾಷೆಗಳಲ್ಲಿ ತೆರೆಕಂಡಿರುವ ಕಾಂತಾರ ಸಿನಿಮಾ ಇನ್ನೂ ಚಿತ್ರಮಂದಿರಗಳಲ್ಲಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ.
SHOCKING NEWS: ಹಲ್ಲೆ ನಡೆಸಿದವನ ಮಗಳ ಮೇಲೆ ಅತ್ಯಾಚಾರವೆಸಗಿ ಕೊಲೆಗೈದು ಹಗೆ ಸಾಧಿಸಿದ 15 ವರ್ಷದ ಬಾಲಕ
ಕರ್ನಾಟಕ ಬಾಕ್ಸ್ ಆಫೀಸ್ನಲ್ಲಿ ಅತಿ ಹೆಚ್ಚು ಕಲೆಕ್ಷನ್ ಕೂಡ ಮಾಡಿದೆ. ಇದರ ಬೆನ್ನಲ್ಲೇ ಕಾಂತಾರ ಸಿನಿಮಾ ತುಳು ಭಾಷೆಯಲ್ಲಿ ತೆರೆಕಾಣುತ್ತಿರುವ ಸಂದರ್ಭದಲ್ಲಿ ಮಾತನಾಡಿದ ಸ್ಯಾಂಡಲ್ವುಡ್ ಖ್ಯಾತ ನಟ ರಿಷಬ್ ಶೆಟ್ಟಿ ಸಿನಿಮಾದ ಗೆಲ್ಲಿಸಿದ ಅಭಿಮಾನಿಗಳಿಗೆ ಧನ್ಯವಾದ.
SHOCKING NEWS: ಹಲ್ಲೆ ನಡೆಸಿದವನ ಮಗಳ ಮೇಲೆ ಅತ್ಯಾಚಾರವೆಸಗಿ ಕೊಲೆಗೈದು ಹಗೆ ಸಾಧಿಸಿದ 15 ವರ್ಷದ ಬಾಲಕ
ದೈವಾರಾಧನೆಯನ್ನ ರೀಲ್ಸ್ ಮಾಡೋದು, ಕಾಂತಾರ ಸಿನಿಮಾದ ಪಾತ್ರವನ್ನ ಅನುಕರಣೆ ಮಾಡೋದು ಸರಿಯಲ್ಲ.
ಇದು ಎಷ್ಟೋ ಜನರ ನಂಬಿಕೆ ಹೀಗೆ ಮಾಡಬೇಡಿ. ದೈವಾರಧನೆ ನಮ್ಮ ನಂಬಿಕೆ. ನಂಬೋರು ನಂಬಬಹುದು. ನಂಬದಿದ್ದರೆ ನಂಬದೇ ಇರಬಹುದು. ಅದು ಅವರವರ ನಂಬಿಕೆ. ಆದರೆ ದೈವಾರಧನೆಯ ಬಗ್ಗೆ ತಪ್ಪು ತಪ್ಪು ಮಾತನಾಡೋರು ಸುಳ್ಳು ಎಂದು ವಾದ ಮಾಡೋದು ಸರಿಯಲ್ಲ. ನಂಬದಿದ್ದರೆ ಪರವಾಗಿಲ್ಲ. ಆದ್ರೆ ಬೇರೆಯವರ ನಂಬಿಕೆಗೆ ಧಕ್ಕೆ ಮಾಡಬೇಡಿ ಎಂದು ಸಲಹೆ ನೀಡಿದ್ದಾರೆ.